Advertisement

ಕೇಂದ್ರ ಇಂಧನ ಸಚಿವರ ಕಾರ್ಯಕ್ರಮದಲ್ಲೇ 4 ಬಾರಿ ಕರೆಂಟ್‌ ಕಟ್‌ 

01:31 PM Jun 07, 2017 | Team Udayavani |

ಬೆಂಗಳೂರು: ಕೇಂದ್ರ ಇಂಧನ ಸಚಿವ ಪಿಯೂಷ್‌ ಗೋಯಲ್‌ ಅವರು ನಗರದಲ್ಲಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಕೇವಲ ಒಂದು ತಾಸಿನಲ್ಲಿ ನಾಲ್ಕು ಬಾರಿ ವಿದ್ಯುತ್‌  ಕೈಕೊಟ್ಟಿದೆ. ಇದರಿಂದ ಕೆಂಡಾಮಂಡಲರಾದ ಅವರು, “ದೇಶದ ಐಟಿ ರಾಜಧಾನಿ ಎನಿಸಿಕೊಂಡಿರುವ ಬೆಂಗಳೂರಲ್ಲೇ ವಿದ್ಯುತ್‌ ಸ್ಥಿತಿ  ಈ ರೀತಿ ಇದ್ದರೆ, ಇನ್ನು ರಾಜ್ಯದ ಗ್ರಾಮೀಣ ಭಾಗದ ಪರಿಸ್ಥಿತಿ ಹೇಗಿರಬಹುದು,’ ಎಂದು ಪ್ರಶ್ನಿಸಿದ್ದಾರೆ. 

Advertisement

ನಗರ ಬಿಜೆಪಿ ಯುವ ಮೋರ್ಚಾ ವತಿಯಿಂದ ಮಂಗಳವಾರ ವಿಜಯನಗರದ ಕಾಸಿಯಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ “ಸಬ್‌ ಕಾ ಸಾತ್‌-ಸಬ್‌ ಕಾ ವಿಕಾಸ್‌’ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಮೂರು ವರ್ಷದ ಸಾಧನೆ ಕುರಿತು ಸಚಿವ ಪಿಯೂಷ್‌ ಗೋಯಲ್‌ ಮಾತನಾಡುತ್ತಿರುವಾಗಲೇ ನಾಲ್ಕು ಬಾರಿ ವಿದ್ಯುತ್‌ ಕಡಿತವಾಗಿದೆ. 

“ದೇಶದಲ್ಲಿ ಎಲ್ಲಿಯೂ ವಿದ್ಯುತ್‌ ಅಭಾವ ಇಲ್ಲ. ಬೇಡಿಕೆಗಿಂತ ಅಧಿಕ ವಿದ್ಯುತ್‌ ಉತ್ಪತ್ತಿಯಾಗುತ್ತಿದೆ. ರಾಜ್ಯ ಸರ್ಕಾರ ವಿದ್ಯುತ್‌ ಪೂರೈಕೆಗೆ ಬೇಕಾದ ಪರಿಕರಗಳನ್ನು  ಅಪ್‌ಗೆÅàಡ್‌ ಮಾಡಿಕೊಳ್ಳದೇ ಇದ್ದರೆ ಬೆಂಗಳೂರಿಗೆ ಈಗ ಇರುವ ಐಟಿ ಕ್ಯಾಪಿಟಲ್‌ ಎಂಬ ಬಿರುದು, ಕೈತಪ್ಪಬಹುದು.

ರಾಜ್ಯ ಬಿಜೆಪಿ ಈ ಬಗ್ಗೆ ಗಂಭೀರವಾಗಿ ಚಿಂತನೆ ಮಾಡುವ ಅಗತ್ಯವಿದೆ. ಯುವ ಮೋರ್ಚಾದ ವತಿಯಿಂದ ಕಾಂಗ್ರೆಸ್‌ ಸರ್ಕಾರದ ದುರಾಡಳಿತ ಹಾಗೂ ಭ್ರಷ್ಟಾಚಾರದ ಬಗ್ಗೆ ಅಭಿಯಾನ ಹಮ್ಮಿಕೊಳ್ಳಬೇಕು,’ ಎಂದು ವೇದಿಕೆ ಮೇಲಿದ್ದ ಯುವಮೋರ್ಚಾದ ಅಧ್ಯಕ್ಷ ಸಪ್ತಗಿರಿ ಗೌಡ ಅವರಿಗೆ ಸಲಹೆ ನೀಡಿದರು.

ಡಿಜಿಟಲ್‌ ಬ್ಯಾಂಕ್‌ ವ್ಯವಸ್ಥೆಗೆ ಉತ್ತೇಜನ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಅಭಿವೃದ್ಧಿ ಪಡಿಸಿರುವ ಭೀಮ್‌ ಆ್ಯಪ್‌ ಅತ್ಯಂತ ಸರಳವಾಗಿದ್ದು, ಯಾರು ಬೇಕಾದರೂ ಬಳಸಬಹುದು. ಕೆಲವೇ ವರ್ಷದಲ್ಲಿ ಈ ಆ್ಯಪ್‌ಗೆ ಅಂತಾರಾಷ್ಟ್ರೀಯ ಮನ್ನಣೆ ದೊರೆಯಲಿದ್ದು, ವಿದೇಶದಲ್ಲೂ ಇದರ ಬಳಕೆ ಹೆಚ್ಚಾಗಲಿದೆ ಎಂದರು. ವಿಧಾನ ಪರಿಷತ್‌ ಸದಸ್ಯ ವಿ.ಸೋಮಣ್ಣ, ಮಾಜಿ ಸದಸ್ಯ ಅಸ್ವತ್ಥ್ ನಾರಾಯಣ, ಬಿಜೆಪಿ ಮುಖಂಡರಾದ ಸುಬ್ಬಣ್ಣ, ವಾಗೀಶ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

ವಿಶ್ವೇಶ್ವರಯ್ಯ ಆಧುನಿಕತೆಯ ಕನಸುಗಾರ: ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸರ್‌.ಎಂ. ವಿಶ್ವೇಶ್ವರಯ್ಯ ಅವರು ಕೇವಲ ಇಂಜಿನಿಯರ್‌ ಆಗಿರಲಿಲ್ಲ. ಬದಲಾಗಿ ಸಂಶೋಧಕ ಹಾಗೂ ಆಧುನಿಕತೆಗೆ ತಕ್ಕಂತೆ ಕನಸುಗಳನ್ನು ನನ‌ಸಾಗಿಸುವ ಛಲಗಾರರಾಗಿದ್ದರು. ಅವರ ಚಿಂತನೆಯ ಪ್ರೇರಣೆಯಡಿ ಕೇಂದ್ರದ ಮೋದಿ ಸರ್ಕಾರ ಕೆಲಸ ಮಾಡುತ್ತಿದೆ. ಅಭಿವೃದ್ಧಿ ಹಾಗೂ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ ಎಂದು ಸಚಿವ ಗೋಯಲ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next