ನಿಮ್ಮ ಮೊಬೈಲ್ ಫೋನ್‌ನಲ್ಲಿ ಇರಲೇ ಬೇಕಾದಂತಹ ಕೆಲವು ಆ್ಯಪ್ಸ್‌ಗಳ ಬಗ್ಗೆ ಇದೇ “ಜೋಶ್’ನಲ್ಲಿ ಕಳೆದ ವಾರ ಓದಿರುತ್ತೀರಿ. ನೀವು ಓದಿದ್ದು ಕೇವಲ ನಾಲ್ಕೇ ನಾಲ್ಕು ಆ್ಯಪ್‌ಗ್ಳು ಬಗ್ಗೆ. ಇನ್ನು ಹೇಳದಿರುವ ಅದೆಷ್ಟು ಆ್ಯಪ್‌ಗ್ಳಿವೆ ಗೊತ್ತಾ? ಅದರ ಬಗ್ಗೆ ಬರೆಯುತ್ತಾ ಕೂತರೆ ಇನ್ನೊಂದಿಪ್ಪತ್ತು ಸಂಚಿಕೆಗಳಾದರೂ ಬೇಕು. ಇರಲಿ ಬಿಡಿ. ಎಷ್ಟು ವಾರಗಳಾಗುತ್ತೋ ಅಷ್ಟಾಗಲಿ. ಕಳೆದ ವಾರ ನಾಲ್ಕು, ಮುಂದಿನ ವಾರ ಮೂರು, ಅದರ ಮುಂದಿನ ವಾರ ಇನ್ನಷ್ಟು … ಹೀಗೆ ಎಷ್ಟು ಆ್ಯಪ್‌ಗ್ಳ ಬಗ್ಗೆ ತಿಳಿದುಕೊಳ್ಳುವುದಕ್ಕೆ ಸಾಧ್ಯವೋ ಅಷ್ಟು ತಿಳಿದುಕೊಳ್ಳೋಕೆ ಪ್ರಯತ್ನಿಸೋಣ. ಅದೆಲ್ಲ ಮುಂದಿನ ಮಾತು. ಸದ್ಯಕ್ಕೆ ಈ ವಾರದ ಮೋಸ್ಟ್ ಇಂಪಾರ್ಟೆಟೆಂಟ್ ಆ್ಯಪ್‌ಗ್ಳ ಬಗ್ಗೆ ಒಂದಿಷ್ಟು ಮಾಹಿತಿ.
ಆಡಿಬಲ್: ಈ ಬಿಝಿ ದಿನಗಳಲ್ಲಿ ಓದುವುದು, ಓದಿದ್ದನ್ನು ಮೆಲಕು ಹಾಕುವುದು ಎಲ್ಲವೂ ನಿಂತೇ ಹೋಗಿರಲಿಕ್ಕೆ ಸಾಕು. ಅಂತವರಿಗೆ ಹೇಳಿ ಮಾಡಿಸಿದ ಆ್ಯಪ್ ಎಂದರೆ ಅದು ಆಡಿಬಲ್. ಇದು ಓದುವ ಆ್ಯಪ್ ಅಲ್ಲ ಸ್ವಾಮೀ, ಕೇಳುವ ಆ್ಯಪ್. ಸುಮ್ಮನೆ ಈ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. ನಿಮಗಿಷ್ಟವಾದ ಅಥವಾ ನೀವು ಓದಬೇಕು ಅಂದುಕೊಂಡಿರುವ ಪುಸ್ತಕ ಯಾವುದಾದರೂ ಅಲ್ಲಿದೆಯಾ ಎಂದು ಹುಡುಕಿಕೊಳ್ಳಿ. ಸಿಕ್ಕರೆ ಅದನ್ನು ಕೇಳಿ ಎಂಜಾಯ್ ಮಾಡಿ. ಅದಕ್ಕೆ ಹೇಳಿದ್ದು ಇದು ಓದೋ ಆ್ಯಪ್ ಅಲ್ಲ, ಕೇಳ್ಳೋ ಆ್ಯಪ್ ಅಂತ. ಈ ಆ್ಯಪ್‌ನಲ್ಲಿ ಬೇರೆ ಬೇರೆ ಜಾನರ್‌ನ ಲಕ್ಷಾಂತರ ಪುಸ್ತಕಗಳು ಮತ್ತು ಮ್ಯಾಗಜೀನ್‌ಗಳಿವೆ. ಅವುಗಳನ್ನು ನೀವು ಯಾವಾಗ ಸಮಯ ಸಿಗುತ್ತದೋ ಆಗ ಕೇಳಿ ಆನಂದಿಸಬಹುದು. ಪ್ರಯಾಣ ಮಾಡುವಾಗ, ಮನೆ ಕೆಲಸ ಮಾಡುವಾಗ, ವಾಕಿಂಗ್ ಮಾಡುವಾಗ, ಜಿಮ್‌ನಲ್ಲಿ ವಕೌìಟ್ ಮಡುವಾಗ … ಹೀಗೆ ಯಾವಾಗಂದರೆ ಆಗ ನೀವು ಕೇಳಬಹುದು. ನಿಮಗೆ ಬೇಕಾದ ವೇಗದಲ್ಲಿ, ಟೋನ್‌ನಲ್ಲಿ ನೀವು ಇದನ್ನು ಕೇಳಬಹುದು. ಈ ಆ್ಯಪ್‌ನಲ್ಲಿ ಬುಕ್‌ಮಾರ್ಕ್ ಮಾಡುವ, ಸ್ಲಿàಪ್ ಮೋಡ್‌ನಲ್ಲಿಡುವ ವ್ಯವಸ್ಥೆಯೂ ಇದೆ. ಬೇಕಾದರೆ ಆನ್‌ಲೈನ್ ಮಾಡಿಕೊಂಡೂ ಓದಬಹುದು. ಇಲ್ಲ ನಿಮ್ಮ ಮೊಬೈಲ್‌ಗೆ ಡೌನ್‌ಲೋಡ್ ಮಾಡುವ ವ್ಯವಸ್ಥೆಯೂ ಈ ಆ್ಯಪ್‌ನಲ್ಲಿದೆ.
ಅಮೇಜಾನ್ ಕಿಂಡಲ್: ಓದಿನ ಆಸಕ್ತಿ ಇರುವವರಿಗೆ ಹೇಳಿ ಮಾಡಿಸಿದ ಇ-ಬುಕ್ಸ್ ಆ್ಯಪ್ ಇದು. ಈ ಆ್ಯಪ್‌ನ ಮೂಲಕ ನೀವು ಲಕ್ಷಾಂತರ ಪುಸ್ತಕಗಳು ಮತ್ತು ಮ್ಯಾಗಜೀನ್‌ಗಳು ನಿಮ್ಮ ಬೆರಳ ತುದಿಯಲ್ಲಿ ಇರುತ್ತದೆ ಎಂಬುದು ನಿಮಗೆ ಗೊತ್ತಿರಲಿ. ಆ ಪೈಕಿ ನಿಮಗೆ ಇಷ್ಟವಾದ ಅಥವಾ ನಿಮಗೆ ಆಸಕ್ತಿ ಇರುವ ಯಾವುದೇ ಜಾನರ್‌ನಲ್ಲಿ ಹಲವು ಪುಸ್ತಕಗಳನ್ನು ನೀವು ಉಚಿತವಾಗಿ ಓದಬಹುದು. ಅಷ್ಟೇ ಅಲ್ಲ, ಪುಸ್ತಕ ನಿಮ್ಮ ಸ್ವಂತಕ್ಕೆ ಬೇಕಿದೆ ಎಂದಿಟ್ಟುಕೊಳ್ಳಿ. ಆಗ ಈ ಆ್ಯಪ್‌ನ ಮೂಲಕವೇ ನಿಮ್ಮ ಆರ್ಡರ್‌ನ ಪ್ಲೇಸ್ ಮಾಡುವುದಕ್ಕೆ ಸಾಧ್ಯವಿದೆ. ಇಷ್ಟೇ ಅಲ್ಲ, ಓದುವಾಗ ಯಾವುದೋ ಶಬ್ಧದ ಅರ್ಥ ಗೊತ್ತಿರುವುದಿಲ್ಲ. ಅದಕ್ಕೆ ಡಿಕ್ಷನರಿ ವ್ಯವಸ್ಥೆ ಇದೆ. ಇನ್ನು ಯಾವುದೋ ವಿಷಯದ ಬಗ್ಗೆ ಇನ್ನಷ್ಟು ಮಾಹಿತಿ ಬೇಕು ಎಂಬ ಪಕ್ಷದಲ್ಲಿ ಗೂಗಲ್ ಅಥವಾ ಇನ್ನಾéವುದಾದರೂ ಸರ್ಚ್ ಇಂಜಿನ್ ಮೂಲಕ ನೀವು ಆ ವಿಷಯದ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ಕಲೆ ಹಾಕಬಹುದು. ಇದೆಲ್ಲಾ ನಂತರದ ಮಾತು. ನಿಮಗೆ ಯಾವುದಾದರೂ ಒಂದು ಪದದ ಅರ್ಥ ಬೇಕೆಂದರೆ, ಸುಮ್ಮನೆ ಆ ಪದದ ಮೇಲೆ ಒತ್ತಿ ಹಿಡಿದರೆ, ಅದರ ಅರ್ಥ ಮತ್ತು ವಿವರಣೆಯನ್ನೂ ನೀಡುತ್ತದೆ.
ಆಟೋಡೆಸ್ಕ್ ಪಿಕ್ಸೆಲ್ಲಾರ್: ಕೆಲವರಿಗೆ ಫೋಟೋ ತೆಗೆಯುವುದು, ಅದನ್ನು ಬೇರೆಯವರೊಂದಿಗೆ ಶೇರ್ ಮಾಡಿಕೊಳ್ಳುವ ದೊಡ್ಡ ಕ್ರೇಜ್ ಇರುತ್ತದೆ. ಲ್ಯಾಪ್‌ಟಾಪ್ ಅಥವಾ ಡೆಸ್ಕ್ಟಾಪ್‌ನಲ್ಲಾದರೆ ಫೋಟೋಶಾಪ್ ಮೂಲಕ ಆ ಫೋಟೋಗಳನ್ನು ರಿಸೈಜ್ ಮಾಡುವುದು, ಕಲರ್ ಅಥವಾ ಕಾಂಟ್ರಾಸ್ಟ್‌ಗಳನ್ನು ಹೆಚ್ಚಿಸುವುದು, ಕೊಲಾಜ್ ಮಾಡುವುದು ಇಂಥದ್ದನ್ನೆಲ್ಲಾ ಮಾಡಬಹುದು. ಆದರೆ, ಮೊಬೈಲ್‌ನಲ್ಲಿ ಅಂತಹ ವ್ಯವಸ್ಥೆಗಳಿಲ್ಲ ಎಂದು ಕೊರಗಬೇಡಿ. ಅದಕ್ಕೆಂದೇ ಆಟೋಡೆಸ್ಕ್ ಪಿಕ್ಸೆಲ್ಲಾರ್ ಎಂಬ ಆ್ಯಪ್ ಇದೆ.ಫೋಟೋಶಾಪ್‌ನಲ್ಲಿರುವ ಬೇಸಿಕ್ ಫಂಕ್ಷನ್‌ಗಳೆಲ್ಲಾ ಈ ಆ್ಯಪ್‌ನಲ್ಲಿದೆ ಎಂದು ಗೊತ್ತಿರಲಿ. ನಿಮ್ಮ ಮೊಬೈಲ್‌ನಲ್ಲಿ ಒಂದು ಫೋಟೋ ತೆಗೆಯುತ್ತೀರಿ ಎಂದಿಟ್ಟುಕೊಳ್ಳಿ. ಅದನ್ನ ಕ್ರಾಪ್ ಮಾಡುವುದು, ರಿಸೈಜ್ ಮಾಡುವುದು, ಕೊಲಾಜ್ ಮಾಡುವುದು, ಎಫೆಕ್ಟ್ಗಳನ್ನು ಕೊಡುವುದು, ಬಾರ್ಡರ್ ಹಾಕುವುದು, ರೊಟೇಟ್ ಮಾಡುವುದು, ಬ್ರೈಟ್‌ನೆಸ್ ಅಥವಾ ಕಲರ್ ಅಥವಾ ಕಾಂಟ್ರಸ್ಟ್ ಮಾಡುವುದು … ಎಲ್ಲವನ್ನೂ ಈ ಆ್ಯಪ್‌ನ ಮೂಲಕ ಮಾಡಬಹುದು. ಸಿಂಪಲ್ಲಾಗಿ ಹೇಳಬೇಕೆಂದರೆ ಫೋಟೋಶಾಪ್‌ನಲ್ಲಿ ಮಾಡುವುದನ್ನೆಲ್ಲಾ ನೀವು ನಿಮ್ಮ ಮೊಬೈಲ್‌ನಲ್ಲೇ ಮಾಡಿಕೊಳ್ಳಬಹುದು.
ಪಾಕೆಟ್: ಪಾಕೆಟ್ ಎಂಬ ಆ್ಯಪ್‌ಗೆ ಇನ್ನೊಂದು ಹೆಸರೂ ಇತ್ತು. ಅದು ರೀಡ್ ಇಟ್ ಲೇಟರ್. ಆ ಹೆಸರಿಗೆ ಸರಿಯಾಗಿ ನೀವು ನಿಮಗಿಷ್ಟವಾದ ಯಾವುದೇ ಲೇಖನವನ್ನು ನೀವು ಡೌನ್‌ಲೋಡ್ ಮಾಡಿ ಪಾಕೆಟ್ ಆ್ಯಪ್‌ನಲ್ಲಿ ಇಟ್ಟುಕೊಳ್ಳಬಹುದು. ನಂತರ ನಿಮಗೆ ಸಮಯ ಸಿಕ್ಕಾಗ, ಅವಶ್ಯಕತೆ ಬಿದ್ದಾಗಲೆಲ್ಲಾ ಅದನ್ನು ಓದಿಕೊಳ್ಳಬಹುದು. ನೀವು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳುವ ಲೇಖನಗಳನ್ನು ಆ ನಂತರ ಈ ಪಾಕೆಟ್ ಆ್ಯಪ್‌ನ ಮೂಲಕ ಆಫ್ಲೈನ್‌ನಲ್ಲೂ ಓದಬಹುದು. ಆನ್‌ಲೈನ್‌ನಲ್ಲಿ ಓದುವಾಗ ನೂರೆಂಟು ಆ್ಯಡ್‌ಗಳು, ಕಿರಿಕಿರಿಗಳು ಇರುತ್ತವೆ. ಆದರೆ, ನೀವು ಅದನ್ನು ಡೌನ್‌ಲೋಡ್ ಮಾಡಿಕೊಂಡು ಓದುವ ಸಂದರ್ಭದಲ್ಲಿ ಅದ್ಯಾವ ಕಿರಿಕಿರಿ ನಿಮ್ಮನ್ನು ಬಾಧಿಸುವುದಿಲ್ಲ ಎಂಬುದು ನಿಮಗೆ ಗೊತ್ತಿರಲಿ. ವಿಂಡೋಸ್ ಫೋನ್ ಆಗಲೀ, ಬ್ಲಾಕ್‌ಬೆರ್ರಿಯಾಗಲೀ ಅಥವಾ ಯಾವುದೇ ಆ್ಯಂಡ್ರಾಯ್ಸಡ್ ಫೋನ್ ಆಗಿರಲಿ. ಅಲ್ಲೆಲ್ಲಾ ನೀವು ಈ ಆ್ಯಪ್‌ನ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂಬುದು ಈ ಆ್ಯಪ್‌ನ ಹೆಚ್ಚುಗಾರಿಕೆ.
– ಭುವನ್