ಮಣಿಪಾಲ: ಕರ್ನಾಟಕದ ಗಡಿಯಂಚಿನಲ್ಲಿ ಕೊರೊನಾ ವೈರಸ್ ಪತ್ತೆ: ರಾಜ್ಯದಲ್ಲಿ ಸೋಂಕು ತಡೆಗೆ ಯಾವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬಹುದಾಗಿದೆ ಎಂದು ಉದಯವಾಣಿ ಕೇಳಿದ್ದು, ಆಯ್ದ ಉತ್ತರಗಳು ಇಲ್ಲಿವೆ.
ರಾಜೇಶ್ ಅಂಚನ್ ಎಂ ಬಿ: ಕರ್ನಾಟಕ ಸರಕಾರ ಕೂಡಲೇ ಕಾರ್ಯ ಪ್ರವೃತ್ತರಾಗಬೇಕಿದೆ. ಕೇರಳದಿಂದ ಬರೋ ಪ್ರಯಾಣಿಕರ ಆರೋಗ್ಯ ತಪಾಸಣೆ ಕೈಗೊಳ್ಳೋದು ಬಹು ಮುಖ್ಯ. ಈಗಾಗಲೇ ಕೇರಳದಲ್ಲಿ 4 ಕೇಸ್ ಪತ್ತೆಯಾಗಿದೆ. ಹಾಗಾಗಿ ನಮ್ಮ ರಾಜ್ಯ ಸರ್ಕಾರ ಉದಾಸೀನ ಮನೋಭಾವ ತೋರಬಾರದು. ಮುಖ್ಯವಾಗಿ ಕಾಸರಗೋಡು ಮಾರ್ಗವಾಗಿ ಮಂಗಳೂರಿಗೆ ಬರುವ ಪ್ರಯಾಣಿಕರ ಬಗ್ಗೆ ಗಮನ ಹರಿಸಬೇಕು. ಮಂಗಳೂರು ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ ಕಡೆಗಳಲ್ಲಿ ಸೂಕ್ತ ಆರೋಗ್ಯ ತಪಾಸಣೆ ನಡೆಸಬೇಕು. ವೈದ್ಯಕೀಯ ತಂಡವನ್ನು ತಯಾರಾಗಿ ಇಟ್ಟುಕೊಳ್ಳಬೇಕು.
ಸಂತೋಷ್ ಡಿಸೋಜಾ: ಕೊರೆನಾ ವೈರಸ್ ಕಣ್ಣಿಗೆ ಅಂತೂ ಕಣ್ಣಿಗೆ ಕಾಣಲ್ಲ. ಕೊರೆನಾ ವೈರಸ್ ವ್ಯಕ್ತಿಗೆ ತಗುಲಿದ ನಂತರ ಆತನ ಅರಿವಿಗೆ ಬಾರದೆ ಅದೆಷ್ಟೋ ಜನರಿಗೆ ವೈರಸ್ ಹರಡಬಹುದು. ರೋಗದ ಲಕ್ಷಣ ಬಂದ ಕೂಡಲೇ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡುವುದು ಬಿಟ್ಟರೆ ಬೇರೆ ಯಾವುದೇ ರೀತಿಯಲ್ಲಿ ತಡೆಗಟ್ಟಲು ಅಸಾಧ್ಯ ಅನಿಸುತ್ತದೆ.
ಕಲ್ಪಿ ಪ್ರಸನ್ನ: Precaution is better than cure ಅನ್ನೋ ತಾತ್ಪರ್ಯದಂತೆ ಸ್ವಲ್ಪ ಕಠಿಣ ಅನ್ನಿಸಿದ್ರು ಪರ್ವಾಗಿಲ್ಲಾ ತೀವ್ರ ತಪಾಸಣೆಯೊಂದಿಗೆ ಹೆಚ್ಚಿನ ನಿಗಾ ವಹಿಸಿ ಯಾವುದೇ ಅನುಮಾನಾಸ್ಪದ ರೋಗಿ, ವ್ಯಕ್ತಿಗಳನ್ನ ಪರಿಶೀಲನೆಗೇ ಒಳಪಡಿಸಬೇಕು.
ಕೃಷ್ಣಪ್ಪ ಮುನಿಯಪ್ಪ: ರೈಲ್ವೇ ನಿಲ್ದಾಣ, ಬಸ್ ಸ್ಟ್ಯಾಂಡ್ ಮುಂತಾದ ಪ್ರಮುಖ ಸ್ಥಳಗಳಲ್ಲಿ ಮಾಹಿತಿ ನೀಡುವ ಕೆಲಸವಾಗಬೇಕು. ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು.
ಶಿವರಾಜ್ ಆಚಾರ್: ಆಯುರ್ವೇದದಲ್ಲಿ ಔಷಧಿಯನ್ನು ಬಳಸುವ ಮೂಲಕ ಈ ಖಾಯಿಲೆ ತಡೆಯಬಹುದು.