Advertisement

3ನೇ ವರ್ಷದ ಸಂಭ್ರಮಕ್ಕೆ ಸಾಧನೆ ಪಟ್ಟಿ ಕೇಳಿದ ಪ್ರಧಾನಿ

10:48 AM Apr 10, 2017 | Team Udayavani |

ನವದೆಹಲಿ: ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ಇದೇ ಮೇ 26ಕ್ಕೆ ಮೂರು ವರ್ಷ ಪೂರೈಸಲಿದ್ದು, ತನ್ನ ಸಚಿವರಿಗೆ ಐದು ಪ್ರಮುಖ ಸಾಧನೆಗಳ ಪಟ್ಟಿ ನೀಡುವಂತೆ ಸೂಚಿಸಿದೆ.

Advertisement

 ಕೇಂದ್ರ ಮಾಹಿತಿ ಮತ್ತು ಪ್ರಚಾರ ಖಾತೆ ಸಚಿವ ವೆಂಕಯ್ಯ ನಾಯ್ಡು ಅವರು, ಕಳೆದ ವಾರವೇ ಎಲ್ಲಾ ಸಚಿವಾಲಯಗಳಿಗೆ ಈ ಸಂಬಂಧ ಸೂಚನೆ ನೀಡಿದೆ. ಇದರ ಪ್ರಕಾರ, ಸಚಿವರೆಲ್ಲರೂ ತಮ್ಮ ಇಲಾಖೆಯಲ್ಲಿನ ಪ್ರಮುಖ ಐದು ಸಾಧನೆಗಳ ಪಟ್ಟಿ, ಇದಕ್ಕೆ ಸಂಬಂಧಿಸಿದ ಮಾಹಿತಿ ಮತ್ತು ಇದರ ಮೇಲಿನ ವಿವರಣೆಯನ್ನು ನೀಡಬೇಕಾಗಿದೆ. ಈ ಎಲ್ಲ ಅಂಶಗಳನ್ನು ಮೇ 26ರ ಮುನ್ನವೇ ನೀಡಬೇಕಾಗಿದೆ. ಇದನ್ನು ಸೇರಿಸಿ ಒಂದು ಪುಸ್ತಕವನ್ನು ಹೊರತರುವ ಬಗ್ಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಸಚಿವರು ಮೂರು ಪುಟಗಳಲ್ಲಿ ಮಾಹಿತಿ ನೀಡಬೇಕು, ಎಲ್ಲವೂ ಬುಲೆಟ್‌ ಪಾಯಿಂಟ್‌ನಲ್ಲಿರಬೇಕು ಎಂದು ಸೂಚಿಸಲಾಗಿದೆ. ಇದರಲ್ಲಿ ಐದು ಪ್ರಮುಖ ಸಾಧನೆಗಳು, ಇವುಗಳಿಂದ ಜನರಿಗೆ ಆಗಿರುವ ಉಪಯೋಗದ ಬಗ್ಗೆಯೂ ಹೇಳಬೇಕಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next