Advertisement

ಒಂದೇ ವಾರದಲ್ಲಿ 3ನೇ ರ‍್ಯಾಲಿ!

12:40 AM Feb 08, 2019 | |

ಕೋಲ್ಕತಾ: ಲೋಕಸಭೆ ಚುನಾವಣೆ ಸಮೀಪಿ ಸುತ್ತಿದ್ದಂತೆ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಹಾಗೂ ಬಿಜೆಪಿ ಮಧ್ಯದ ಸಂಘರ್ಷ ತಾರಕಕ್ಕೇರಿದೆ. ಪ.ಬಂಗಾಳದಲ್ಲಿ ಬಿಜೆಪಿ ತನ್ನ ಅಸ್ತಿತ್ವವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನವನ್ನೂ ನಡೆಸಿದೆ.

Advertisement

ಒಂದು ವಾರದಲ್ಲಿ ಪ್ರಧಾನಿ ಮೋದಿ 2 ರ‍್ಯಾಲಿ ನಡೆಸಿದ್ದು, ಶುಕ್ರವಾರ ಮತ್ತೂಂದು ರ್ಯಾಲಿಯನ್ನು ಜಲ್‌ಪಾಯುರಿಯಲ್ಲಿ ನಡೆಸಲಿದ್ದಾರೆ. ಕಳೆದ ಚುನಾವಣೆಯಲ್ಲಿ ಪ.ಬಂಗಾಳದ 42 ಕ್ಷೇತ್ರಗಳ ಪೈಕಿ 2ರಲ್ಲಿ ಬಿಜೆಪಿ ಗೆದ್ದಿತ್ತು. ಈ ಬಾರಿ 23 ಕ್ಷೇತ್ರಗಳಲ್ಲಿ ಗೆಲ್ಲುವ ಗುರಿ ಹಾಕಿಕೊಂಡಿದೆ.

ಪದಕ ವಾಪಸ್‌?: ಪ.ಬಂಗಾಳ ಪೊಲೀಸ್‌ ಆಯುಕ್ತ ರಾಜೀವ್‌ ಕುಮಾರ್‌ ಪ್ರಕರಣದಲ್ಲಿ ಮಮತಾ ಜೊತೆಗೆ ಧರಣಿ ಕುಳಿತ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ. ಈ ಅಧಿಕಾರಿಗಳಿಗೆ ನೀಡಲಾಗಿರುವ ರಾಷ್ಟ್ರಪತಿ ಪದಕಗಳನ್ನು ಹಿಂಪಡೆಯುವುದು ಹಾಗೂ ಕೇಂದ್ರ ಸರಕಾರದ ಹುದ್ದೆಗಳಿಗೆ ಬಡ್ತಿ ನಿರ್ಬಂಧಿಸುವುದು ಸಹಿತ ಇತರ ಕ್ರಮಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next