ಪಣಜಿ: ಸದ್ಯ ಗೋವಾದಲ್ಲಿ ನಡೆಯುತ್ತಿರುವ 37 ನೇ ರಾಷ್ಟ್ರೀಯ ಕ್ರೀಡಾ ಸ್ಫರ್ಧೆಗಾಗಿ ರಾಷ್ಟ್ರೀಯ ಕ್ರೀಡಾಕೂಟದ ವಿವಿಧ ಕ್ರೀಡಾಂಗಣಗಳು ಮತ್ತು ಸ್ಥಳಗಳನ್ನು ಕಳಪೆ ಗುಣಮಟ್ಟದಲ್ಲಿ ನಿರ್ಮಿಸಲಾಗಿದೆ ಮತ್ತು ಕೋಟ್ಯಂತರ ರೂಪಾಯಿಗಳ ಭ್ರಷ್ಟಾಚಾರ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.ಈ ಸಂಪೂರ್ಣ ಹಗರಣದ ತನಿಖೆಯನ್ನು ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಪಣಜಿಯ ಕಾಂಗ್ರೆಸ್ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರಿಯೆಟೊ ಫೆನಾರ್ಂಡಿಸ್ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಕ್ರೀಡಾಕೂಟಕ್ಕಾಗಿ ಬಹುಕೋಟಿ ಮೂಲಸೌಕರ್ಯ ಸೌಲಭ್ಯವನ್ನು ಉದ್ಘಾಟಿಸಿದರು, ಇದು ಕ್ರೀಡಾಪಟುಗಳು ಮತ್ತು ಪ್ರಶಿಕ್ಷಣಾರ್ಥಿಗಳಿಗೆ ಶಾಶ್ವತ ಪ್ರಯೋಜನವನ್ನು ನೀಡುತ್ತದೆ. ಆದರೆ, ಟೆಂಡರ್ ಪಡೆದ ಕಂಪನಿ ಭಾರೀ ಭ್ರಷ್ಟಾಚಾರ ನಡೆಸಿದೆ. ಎಲ್ಲಾ ನಿರ್ಮಾಣಗಳು ದುರ್ಬಲವಾಗಿವೆ, ನಿಗದಿತ ಮಾನದಂಡಗಳಿಗಿಂತ ಕಡಿಮೆ, ಅಪಾಯಕಾರಿ ಮತ್ತು ತಾತ್ಕಾಲಿಕ. ಕಬ್ಬಿಣದ ಅನೇಕ ದೊಡ್ಡ ಪಿಲ್ಲರ್‍ಗಳಿಗೆ ನಾಲ್ಕು ನಟ್‍ಬೋಲ್ಟ್‍ಗಳ ಬದಲಿಗೆ ಎರಡು ನಟ್‍ಬೋಲ್ಟ್‍ಗಳನ್ನು ಅಳವಡಿಸಲಾಗಿದ್ದು, ಇದು ದೊಡ್ಡ ಅಪಘಾತಗಳಿಗೆ ಕಾರಣವಾಗಬಹುದು. ಈ ಸಂದರ್ಭದಲ್ಲಿ, ಕಾಂಗ್ರೆಸ್ ವೈರಿಯೆಟೊ ಇಂತಹ ಅಪಾಯಕಾರಿಯಾಗಿರುವ ಅನೇಕ ಛಾಯಾಚಿತ್ರಗಳನ್ನು ತೋರಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್‍ನ ಇತರ ನಾಯಕರು ಉಪಸ್ಥಿತರಿದ್ದರು.