Advertisement
ಸಂಸದ ನಳಿನ್ ಕುಮಾರ್ ಕಟೀಲು ಅವರ ಮನವಿ ಮೇರೆಗೆ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ಯೋಜನೆಗೆ ಶಿಫಾರಸು ಮಾಡಿದ್ದರು. ರಾಜ್ಯ ಸರಕಾರ ಕಳುಹಿಸಿರುವ 38.07 ಕೋಟಿ ರೂ. ವೆಚ್ಚದ ಅಂದಾಜು ಪಟ್ಟಿಯನ್ನು ಪರಿಶೀಲಿಸಿದ ಕೇಂದ್ರ ಸಚಿವಾಲಯ ಅಂತಿಮವಾಗಿ 37.84 ಕೋಟಿ ರೂ. ಮೊತ್ತಕ್ಕೆ ತಾಂತ್ರಿಕ, ಆಡಳಿತಾತ್ಮಕ ಮತ್ತು ಆರ್ಥಿಕ ಮಂಜೂರಾತಿ ನೀಡಿದೆ.2018-19ರಲ್ಲಿ 11.53 ಕೋಟಿ ರೂ. ವೆಚ್ಚದಲ್ಲಿ ಶೇ. 30 ಕಾಮಗಾರಿ ಹಾಗೂ 2019-20ರಲ್ಲಿ ಉಳಿದ ಕಾಮಗಾರಿ ಪೂರೈಸಲು ಆದೇಶಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.