Advertisement

ಮಲ್ಲಿಕಾರ್ಜುನ ಖರ್ಗೆ ಗೆ 371 ಬಲ; ಬಿಜೆಪಿಗೆ ಮೋದಿ ಅಸ್ತ್ರ​​​​​​​

12:30 AM Mar 05, 2019 | |

ಕಲಬುರಗಿ: ಲೋಕಸಭೆ ಚುನಾವಣೆ ಕಾವು ಜೋರಾಗಿದ್ದು, ಕಾಂಗ್ರೆಸ್‌ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಪ್ರತಿನಿಧಿಸುತ್ತಿರುವ ಕ್ಷೇತ್ರ ಇದಾಗಿರುವುದರಿಂದ ಪ್ರತಿಷ್ಠೆ ಕಣವಾಗಿದೆ.

Advertisement

ಪ್ರಧಾನಿ ಮೋದಿ ಮಾ.6ರಂದು ಕಲಬುರಗಿಗೆ ಆಗಮಿಸಿ ಚುನಾವಣೆ ಕಹಳೆ ಮೊಳಗಿಸಲಿದ್ದಾರೆ.ಅದೇ ರೀತಿ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರೂ 2 ವಾರಗಳಿಂದ ಕ್ಷೇತ್ರ ವ್ಯಾಪ್ತಿಯ ತಾಲೂಕು ಗಳಿಗೆ ಭೇಟಿ ನೀಡಿ ವಿವಿಧ ಅಭಿವೃದ್ದಿ ಕಾಮಗಾರಿ ಗಳಿಗೆ ಚಾಲನೆ ನೀಡಿ ಮತಬೇಟೆ ಶುರು ಮಾಡಿದ್ದಾರೆ.

ಕಲಬುರಗಿ ನಗರ, ಅಫಜಲಪುರ, ಸೇಡಂ ತಾಲೂಕಿನಲ್ಲಿ ನೂರಾರು ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿ ಅಭಿವೃದ್ದಿಗೆ ಬೆಂಬಲಿಸಿ ಎಂದು ಕೋರುತ್ತಿದ್ದಾರೆ. 2014ರ ಚುನಾವಣೆಯಲ್ಲಂತೂ ಹೈದ್ರಾಬಾದ್‌ ಕರ್ನಾಟಕ ಭಾಗದ ಅಭಿವೃದ್ದಿ ಹುದ್ದೆಕಾತಿ, ಶೈಕ್ಷಣಿಕ ಪ್ರವೇಶಾತಿಗೆ ವಿಶೇಷ ಸೌಲಭ್ಯ ಕಲ್ಪಿಸಿರುವ 371 (ಜೆ) ವಿಧಿ ತಿದ್ದುಪಡಿ ವಿಷಯವೇ ಪ್ರಮುಖ ಅಸ್ತ್ರ ವಿಷಯವಾಗಿತ್ತು. ಈಗಲೂ ಇದೇ ತಿದ್ದುಪಡಿ ವಿಷಯವನ್ನೇ ಕಾಂಗ್ರೆಸ್‌ ಪ್ರಮುಖವಾಗಿ ಪ್ರಸ್ತಾಪಿಸುತ್ತಿದೆ.

2009ರ ಚುನಾವಣೆಯಲ್ಲಿ ಕಾಂಗ್ರೆಸ್‌ ಹೈ-ಕ ಅಭಿವೃದ್ದಿಗೆ ತನ್ನದೇ ಕೊಡುಗೆ ನೀಡಿದೆ. ಸರದಾರ ಹಾಗೂ ಅಭಿವೃದ್ದಿಯೇ ಧ್ಯೇಯವಾಗಿಸಿಕೊಂಡಿ ಅಭಿವೃದ್ದಿಗಾಗಿ ಮನವಿ ಮಾಡಲಾಗಿತ್ತು. ಬಿಜೆಪಿ ಹೈ-ಕ ಭಾಗ ಹಿಂದುಳಿಯಲು ಮಾಜಿ ಮುಖ್ಯಮಂತ್ರಿ ಧರ್ಮ ಸಿಂಗ್‌, ಖರ್ಗೆ ಅವರೇ ಕಾರಣರು ಎಂದು ಸಿತ್ತು. ಅಲ್ಲದೇ ಸರ್ಕಾರ ಹೈ.ಕ ಭಾಗದ ಅಭಿವೃದ್ದಿಗೆ ಒತ್ತು ನೀಡಿ, ಸಚಿವ ಸಂಪುಟ ಸಭೆ ನಡೆಸಿ ಸಾವಿರಾರು ಕೋಟಿ ರೂ. ಅನು ದಾನವನ್ನು ಅಭಿವೃದ್ದಿಗಾಗಿ ನೀಡಲಾಗಿದೆ ಎಂದು ಪ್ರಸ್ತಾಪಿಸಲಾಗಿತ್ತು. 2009ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ದೇಶದ ಅಭಿವೃದ್ದಿಗಾಗಿ,ಬದಲಾವಣೆಗಾಗಿ ಹಾಗೂ ಸಮರ್ಥ ನಾಯಕತ್ವಕ್ಕಾಗಿ ಮೋದಿ ಪ್ರಧಾನಿಯಾಗಲು ಬೆಂಬಲಿಸಿ ಎಂದು ಮತಯಾಚನೆ ಮಾಡಿತ್ತು.

ಈಗಿನ ವಿಷಯಗಳು: ಕಳೆದ ಐದು ವರ್ಷಗಳಲ್ಲಿ ಮೋದಿ ಹೇಳಿದ್ದೇನು, ಮಾಡಿದ್ದೇನು ಎಂದು ಪ್ರಮುಖವಾಗಿ ಪ್ರಶ್ನಿಸುತ್ತಿರುವುದರ ಜತೆಗೆ ಕಲಬುರಗಿ ಭಾಗಕ್ಕೆ ಏನು ಮಾಡಲಾಗಿದೆ ಎಂದು ಸಂಸದ ಖರ್ಗೆ ಕೇಳುತ್ತಿದ್ದಾರೆ. ಕಲಬುರಗಿಗೆ ಘೋಷಣೆ ಮಾಡಲಾದ ರೈಲ್ವೆ ವಿಭಾಗೀಯ ಕಚೇರಿ ಕಾರ್ಯಾನುಷ್ಠಾನಕ್ಕೆ ಮುಂದಾಗಲಿಲ್ಲ. ಇಎಸ್‌ಐಸಿ ಆಸ್ಪತ್ರೆ ಬಲಧರ್ವನೆಗೆ ನಿರಾಸಕ್ತಿ ತಳೆದಿರುವುದು
ಸೇರಿದಂತೆ ಈ ಭಾಗದ ಅಭಿವೃದ್ದಿ ಕಾರ್ಯಗಳಿಗೆ ನಿರ್ಲಕ್ಷé ವಹಿಸಲಾಗಿದೆ ಎಂದು ಆರೋಪಿಸಲಾಗುತ್ತಿದೆ. ಬಿಜೆಪಿ ಕೇಂದ್ರ ಸರ್ಕಾರದ ಸಾಧನೆ ಗಳನ್ನು ಅದರಲ್ಲೂ ಮೋದಿ ಐತಿಹಾಸಿಕ ನಿಟ್ಟಿನಲ್ಲಿ ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡಿದೆ ಎಂಬುದಾಗಿ ಹೇಳಿ ಲೋಕಸಭೆ ಚುನಾವಣೆಗೆ ಸಜ್ಜಾಗುತ್ತಿದೆ.

Advertisement

ಖರ್ಗೆ ವಿರುದ್ಧ ಮುಗಿಬಿದ್ದ ಬಿಜೆಪಿ
ದೇಶದ ವಿಷಯಗಳು ಹಾಗೂ ಕೇಂದ್ರ ಸರ್ಕಾರದ ಸಾಧನೆಗಳನ್ನು ಪ್ರಸ್ತಾಪಿಸಿ ಬಿಜೆಪಿ ಮತಯಾಚಿಸುತ್ತಿದೆ. ಮುಖ್ಯವಾಗಿ ಖರ್ಗೆ ಇತರರನ್ನು ಬೆಳೆಸಲಿಲ್ಲ. ತಮ್ಮನ್ನು ತುಳಿದರು ಎಂಬುದಾಗಿ ಮಾಜಿ ಸಚಿವರಾದ ಮಾಲೀಕಯ್ಯ ಗುತ್ತೇದಾರ, ಬಾಬುರಾವ್‌ ಚಿಂಚನಸೂರ ಸಭೆ-ಸಮಾರಂಭಗಳಲ್ಲಿ ಹೇಳುತ್ತಲೇ ಇದ್ದಾರೆ. ಚಿಂಚೋಳಿ ಶಾಸಕ ಡಾ| ಉಮೇಶ ಜಾಧವ್‌ ಅವರಂತೂ ಈಗಾಗಲೇ ಖರ್ಗೆ ಅದರಲ್ಲೂ ಸಚಿವ ಪ್ರಿಯಾಂಕ್‌ ಖರ್ಗೆ ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಕಾಂಗ್ರೆಸ್‌ ಪಕ್ಷವನ್ನೇ ತ್ಯಜಿಸಿದ್ದಾರೆ. ಡಾ| ಜಾಧವ್‌ ಅವರೇ ಬಿಜೆಪಿಯ ಲೋಕಸಭೆ ಅಭ್ಯರ್ಥಿ ಆಗಲಿರುವುದರಿಂದ ಖರ್ಗೆ ಅವರು ನಾಯಕತ್ವ ಬೆಳೆಸಲಿಲ್ಲ ಎನ್ನುವ ವಿಷಯದ ಮೇಲೆಯೇ ಚುನಾವಣೆ ಕೇಂದ್ರೀಕೃತವಾಗಲಿದೆ.

ಚಿಂಚನಸೂರ ಅವರಂತೂ ಮಾಜಿ ಸಚಿವ ಖಮರುಲ್‌ ಇಸ್ಲಾಂ ಅವರನ್ನು ಸಚಿವ ಸ್ಥಾನದಿಂದ ಕೆಳಗಿಸಿದ ನಂತರ ಮೃತಪಟ್ಟರು ಎಂದು ಹೇಳಿರುವುದು ತೀವ್ರ ಚರ್ಚೆಗೀಡಾಗಿದೆ.

– ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next