Advertisement
ಶಿವರಾತ್ರೀಶ್ವರ ನಗರದಲ್ಲಿರುವ ಜೆಎಸ್‌ಎಸ್ ವೈದ್ಯಕೀಯ ವಿದ್ಯಾಲಯದಲ್ಲಿ ನಡೆಯಲಿರುವ ಈ ಸಮ್ಮೇಳನದಲ್ಲಿ ದೇಶದ ವಿವಿಧ ಭಾಗಗಳಿಂದ 1500 ಕ್ಕಿಂತಲೂ ಹೆಚ್ಚು ವೈದ್ಯರು ಮತ್ತು ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
Related Articles
Advertisement
ಕೆಪಿಕಾನ್ 2017ರ ವಿಜಾnನ ಸಮಿತಿ ಅಧ್ಯಕ್ಷ ಡಾ.ಬಿ.ಎಸ್.ನಾಗರಾಜು ಅಧ್ಯಕ್ಷತೆ ವಹಿಸಲಿದ್ದು, ಎಪಿಐ ಕರ್ನಾಟಕ ವಿಭಾಗದ ಅಧ್ಯಕ್ಷ ಡಾ.ಕೆ.ಆರ್.ರವೀಂದ್ರ, ಕಾರ್ಯದರ್ಶಿ ಡಾ.ಎಂ.ರವಿ ಕೀರ್ತಿ, ಸಲಹೆಗಾರ ಡಾ.ಎಂ.ಪ್ರೇಮನಾಥ್, ಸಂಚಾಲಕ ಡಾ.ಎಚ್.ಎಸ್.ಪ್ರಸನ್ನ ವಿಶೇಷ ಆಹ್ವಾನಿತರಾಗಿರುವರು.
ಇದೇ ಸಂದರ್ಭದಲ್ಲಿ ಹೊಸ ಔಷಧಗಳನ್ನು ಪರಿಚಯಿಸುವ ಸಲುವಾಗಿ ವಿವಿಧ ಔಷಧ ಕಂಪೆನಿಗಳ ಉತ್ಪನ್ನಗಳ ಪ್ರದರ್ಶನವನ್ನು ಏರ್ಪಡಿಸಲಾಗಿದ್ದು, ಮುಡಾ ಆಯುಕ್ತ ಡಾ.ಮಹೇಶ್ ಬೆಳಗ್ಗೆ 11 ಗಂಟೆಗೆ ಔಷಧ ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ.
ಅದೇ ದಿನ ಸಂಜೆ 6 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಕೆಪಿಕಾನ್ 2017 ವೈದ್ಯಕೀಯ ಸಮ್ಮೇಳನವನ್ನು ಉದ್ಘಾಟಿಸಲಿದ್ದು, ಎಪಿಐ ಕರ್ನಾಟಕ ವಿಭಾಗದ ಅಧ್ಯಕ್ಷ ಡಾ.ಕೆ.ಆರ್. ರವೀಂದ್ರ ಅಧ್ಯಕ್ಷತೆ ವಹಿಸುವರು. ರಾಜವಂಶಸ್ಥರಾದ ಡಾ.ಪ್ರಮೋದಾದೇವಿ ಒಡೆಯರ್, ಡಾ.ಅರುಮುಗಂ ಮುರುಗನಾಥನ್, ಡಾ.ವೈ.ಜೆ. ವಿಶ್ವೇಶ್ವರರೆಡ್ಡಿ, ಡಾ.ಬಿ.ಎಸ್.ನಾಗರಾಜ, ಡಾ.ಎಂ.ರವಿಕೀರ್ತಿ ಮತ್ತು ಡಾ.ಜೆ.ಶರಣಪ್ಪ ವಿಶೇಷ ಆಹ್ವಾನಿತರಾಗಿರುವರು.
ಕೆಪಿಕಾನ್ ವೈದ್ಯಕೀಯ ಸಮ್ಮೇಳನ 2017ರ ಸಮಾರೋಪ ಮೇ 21 ರಂದು ಮಧ್ಯಾಹ್ನ 2 ಗಂಟೆಗೆ ನಡೆಯಲಿದ್ದು, ನಗರ ಪೊಲೀಸ್ ಆಯುಕ್ತ ಡಾ.ಸುಬ್ರಮಣ್ಯೇಶ್ವರರಾವ್ ಮುಖ್ಯ ಅತಿಥಿಗಳಾಗಿರುವರು. ಜೆಎಸ್‌ಎಸ್ ವಿವಿ ಕುಲಪತಿ ಡಾ.ಬಿ.ಸುರೇಶ್ ಗೌರವ ಅತಿಥಿಗಳಾಗಿ ಭಾಗವಹಿಸಿ ವಿವಿಧ ಶೈಕ್ಷಣಿಕ ಸ್ಪ$ರ್ಧೆಗಳಲ್ಲಿ ಗೆದ್ದವರಿಗೆ ಬಹುಮಾನಗಳನ್ನು ವಿತರಿಸಲಿದ್ದಾರೆ ಎಂದು ತಿಳಿಸಿದರು.