Advertisement

35 ಅಕ್ರಮ ಟೆಲಿಫೋನ್‌ ಎಕ್ಸ್‌ಚೇಂಜ್‌ ಮೇಲೆ ದಾಳಿ, 26 ಮಂದಿ ಸೆರೆ

11:49 AM Oct 11, 2017 | Team Udayavani |

ಥಾಣೆ : ಇಲ್ಲಿನ ಭಿವಂಡಿ ಪಟ್ಟಣ ಪ್ರದೇಶದಲ್ಲಿ  ಸುಮಾರು 35 ಅಕ್ರಮ ವಿಓಐಪಿ (Voice over Internet Protocol – VoIP) ಟೆಲಿಫೋನ್‌ ಎಕ್ಸ್‌ಚೇಂಜ್‌ಗಳ ಮೇಲೆ ದಾಳಿ ನಡೆದಿದ್ದು ವಿವಿಧ ತಾಣಗಳಿಂದ ಸುಮಾರು 26 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

Advertisement

ನಿನ್ನೆ ಮಂಗಳವಾರ ಬೆಳಗ್ಗಿನಿಂದಲೇ ಆರಂಭವಾಗಿದ್ದ ಈ ದಾಳಿ ನಿನ್ನೆ ತಡರಾತ್ರಿಯ ವರೆಗೂ ನಡೆದಿದ್ದು ಹಲವಾರು ಉನ್ನತ ಮಟ್ಟದ ವಿದ್ಯುನ್ಮಾನ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದವರು ತಿಳಿಸಿದ್ದಾರೆ. 

ಥಾಣೆ ಕ್ರೈಮ್‌ ಬ್ರಾಂಚ್‌ ಸಹಕಾರದೊಂದಿಗೆ ಈ ದಾಳಿಗಳನ್ನು ನಡೆಸಲಾಯಿತೆಂದು ಅವರು ತಿಳಿಸಿದರು. ಯುಎಇ ಮತ್ತು ಮಧ್ಯಪೂರ್ವ ದೇಶಗಳಿಂದ ಬರುತ್ತಿದ್ದ ಕರೆಗಳನ್ನು ನಿರ್ವಹಿಸುತ್ತಿದ್ದ ಈ ಅಕ್ರಮ ಟೆಲಿಫೋನ್‌ ಎಕ್ಸ್‌ಚೇಂಜ್‌ಗಳು ಬಳಸುತ್ತಿದ್ದ ಅತ್ಯಾಧುನಿಕ ಉನ್ನತ ಮಟ್ಟದ ಉಪಕರಣಗಳಿಂದಾಗಿ ಕರೆ ಮಾಡಿದವರ ಐಡಿ ಗೊತ್ತಾಗುತ್ತಿರಲಿಲ್ಲ ಮತ್ತು ಅವರ ಸುದೀರ್ಘ‌ ಫೋನ್‌ ಸಂಭಾಷಣೆ ಸುಲಲಿತವಾಗಿ ನಡೆಯುತ್ತಿತ್ತು ಎಂದು ಪೊಲೀಸ್‌ ಅಧಿಕಾರಿ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next