Advertisement

ಉಕ್ರೇನ್‌ನಲ್ಲಿ ಸಿಲುಕಿದ ರಾಜ್ಯದ 346 ವಿದ್ಯಾರ್ಥಿಗಳು

09:03 PM Feb 25, 2022 | Team Udayavani |

ಬೆಂಗಳೂರು: ಯುದ್ಧಪೀಡಿತ ಉಕ್ರೇನ್‌ನಲ್ಲಿ ಇಲ್ಲಿಯವರೆಗೂ ರಾಜ್ಯದ 346 ವಿದ್ಯಾರ್ಥಿಗಳು ಸಿಲುಕಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ನೋಡಲ್‌ ಅಧಿಕಾರ ಮನೋಜ್‌ ರಂಜನ್‌ ತಿಳಿಸಿದ್ದಾರೆ.

Advertisement

ಉಕ್ರೇನ್‌ನಲ್ಲಿರುವವರ ಬಗ್ಗೆ ಶುಕ್ರವಾರ ಮಧ್ಯಾಹ್ನ 3 ಗಂಟೆವರೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಕರೆಗಳು ಬಂದಿವೆ. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಉಕ್ರೇನ್‌ಗೆ ತೆರಳಿರುವವರ ವಿದ್ಯಾರ್ಥಿಗಳ ತಂದೆ-ತಾಯಿ, ಪೋಷಕರು, ಸಂಬಂಧಿಕರು, ಸ್ನೇಹಿತರ ಬಳಗದಿಂದ ಕರೆಗಳು ಬರುತ್ತಿವೆ. ಆ ಆಧಾರದಲ್ಲಿ ಉಕ್ರೇನ್‌ನಲ್ಲಿ ಎಷ್ಟು ವಿದ್ಯಾರ್ಥಿಗಳು ಇರಬಹುದು ಎಂದು ಅಂದಾಜಿಸಲಾಗುತ್ತಿದೆ ಎಂದು ತಿಳಿಸಿದರು.

ರಾಜ್ಯದಿಂದ ತೆರಳಿ ಉಕ್ರೇನ್‌ನಲ್ಲಿ ಸಿಲುಕಿಕೊಂಡಿರುವವರ ಸಹಾಯಕ್ಕಾಗಿ //ukraine.karnataka.tech ಎಂಬ ವೆಬ್‌ ಪೋರ್ಟಲ್‌ ತೆರೆಯಲಾಗಿದೆ. ಸಂಬಂಧಪಟ್ಟವರು ಉಕ್ರೇನ್‌ನಲ್ಲಿ ಸಮಸ್ಯೆಗೆ ಸಿಲುಕಿರುವವರ ಮಾಹಿತಿಯನ್ನು ನೀಡಬಹುದು ಎಂದು ತಿಳಿಸಿದ್ದಾರೆ.

346 ವಿದ್ಯಾರ್ಥಿಗಳು: ಪ್ರಮುಖವಾಗಿ ಬೆಂಗಳೂರಿನ 115, ಮೈಸೂರಿನ 30, ವಿಜಯಪುರದ 24, ಬಾಗಲಕೋಟೆಯ 22, ತುಮಕೂರಿನ 16, ಹಾವೇರಿಯ 14, ದಾವಣಗೆರೆ- 12, ಚಿಕ್ಕಮಗಳೂರು, ಹಾಸನ ಮತ್ತು ರಾಯಚೂರಿನ ತಲಾ 10 ವಿದ್ಯಾರ್ಥಿಗಳು, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ಕೊಡಗು ಜಿಲ್ಲೆಯ ತಲಾ 9, ಧಾರವಾಡ ಮತ್ತು ಉಡುಪಿಯ ತಲಾ 5, ಚಾಮರಾಜನಗರ, ಕೋಲಾರ ಮತ್ತು ಮಂಡ್ಯ ತಲಾ 4, ಬೀದರ್‌, ಚಿತ್ರದುರ್ಗ, ಶಿವಮೊಗ್ಗದ ತಲಾ 3, ರಾಮನಗರ ಮತ್ತು ಉತ್ತರ ಕನ್ನಡದ ತಲಾ ಇಬ್ಬರು, ಬೆಂ.ಗ್ರಾಮಾಂತರ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಯ ತಲಾ ಒಬ್ಬರು ವಿದ್ಯಾರ್ಥಿಗಳ ಪರವಾಗಿ ಕರೆಗಳು ಬಂದಿವೆ.

Advertisement

Udayavani is now on Telegram. Click here to join our channel and stay updated with the latest news.

Next