Advertisement

Hockey: ರಾಷ್ಟ್ರೀಯ ಹಾಕಿ ಶಿಬಿರಕ್ಕೆ 34 ಆಟಗಾರ್ತಿಯರು

11:22 PM Dec 26, 2023 | Team Udayavani |

ಬೆಂಗಳೂರು: ಬುಧವಾರ ಇಲ್ಲಿ ಆರಂಭವಾಗಲಿರುವ ರಾಷ್ಟ್ರೀಯ ವನಿತಾ ಸೀನಿಯರ್‌ ಹಾಕಿ ಕೋಚಿಂಗ್‌ ಶಿಬಿರಕ್ಕೆ 34 ಆಟಗಾರ್ತಿಯರನ್ನು “ಹಾಕಿ ಇಂಡಿಯಾ’ ಆಯ್ಕೆ ಮಾಡಿದೆ. ರಾಂಚಿಯಲ್ಲಿ ನಡೆಯುವ ಒಲಿಂಪಿಕ್ಸ್‌ ಅರ್ಹತಾ ಪಂದ್ಯಾವಳಿ ಹಾಗೂ ಹಾಕಿ ಫೈವ್ಸ್‌ ವಿಶ್ವಕಪ್‌ ಪಂದ್ಯಾವಳಿಗೆ ಈ ಶಿಬಿರ ಮಹತ್ವದ್ದಾಗಿದೆ.

Advertisement

ಒಲಿಂಪಿಕ್ಸ್‌ ಅರ್ಹತಾ ಪಂದ್ಯಾವಳಿ ಜ. 13ರಿಂದ 19ರ ತನಕ ರಾಂಚಿಯಲ್ಲಿ ನಡೆಯಲಿದೆ. ಭಾರತ “ಬಿ’ ವಿಭಾಗದಲ್ಲಿ ಸ್ಥಾನ ಪಡೆದಿದ್ದು, ಇಲ್ಲಿ ನ್ಯೂಜಿಲ್ಯಾಂಡ್‌, ಇಟಲಿ ಮತ್ತು ಯುಎಸ್‌ಎ ತಂಡಗಳಿವೆ. “ಎ’ ವಿಭಾಗದ ತಂಡಗಳೆಂದರೆ ಜರ್ಮನಿ, ಜಪಾನ್‌, ಚಿಲಿ ಮತ್ತು ಜೆಕ್‌ ಗಣರಾಜ್ಯ.

ಹಾಕಿ ಫೈವ್ಸ್‌ ಪಂದ್ಯಾವಳಿ ಜ. 24ರಿಂದ 27ರ ತನಕ ಮಸ್ಕತ್‌ನಲ್ಲಿ ನಡೆಯಲಿದೆ.

ಭಾರತ ತಂಡ
ಗೋಲ್‌ಕೀಪರ್: ಸವಿತಾ, ರಜನಿ ಇ., ಬಿಚುದೇವಿ ಕೆ., ಬಾನ್ಸರಿ ಸೋಲಂಕಿ.
ಡಿಫೆಂಡರ್: ದೀಪ್‌ ಗ್ರೇಸ್‌ ಎಕ್ಕಾ, ಗುರ್ಜೀತ್‌ ಕೌರ್‌, ನಿಕ್ಕಿ ಪ್ರಧಾನ್‌, ಉದಿತಾ, ಇಶಿಕಾ ಚೌಧರಿ, ಅಕ್ಷತಾ ಎ., ಜ್ಯೋತಿ ಚೆಟ್ರಿ, ಮಹಿಮಾ ಚೌಧರಿ.
ಮಿಡ್‌ಫಿಲ್ಡರ್: ನಿಶಾ, ಸಲೀಮಾ ಟೇಟೆ, ಸುಶೀಲಾ ಚಾನು, ಜ್ಯೋತಿ, ನವಜೋತ್‌ ಕೌರ್‌, ಮೋನಿಕಾ, ಮರಿಯಾನಾ ಕುಜುರ್‌, ಸೋನಿಕಾ, ನೇಹಾ, ಬಲ್ಜೀತ್‌ ಕೌರ್‌, ರೀನಾ ಖೋಖರ್‌, ವೈಷ್ಣವಿ ವಿಟಲ ಫ‌ಲ್ಕೆ, ಅಜ್ಮಿನಾ ಕುಜುರ್‌.
ಫಾರ್ವರ್ಡ್ಸ್‌: ಲಾಲ್ರೆಮ್ಸಿಯಾಮಿ, ನವನೀತ್‌ ಕೌರ್‌, ವಂದನಾ ಕಟಾರಿಯಾ, ಶರ್ಮಿಳಾ ದೇವಿ, ದೀಪಿಕಾ, ಸಂಗೀತಾ ಕುಮಾರಿ, ಮುಮ್ತಾಜ್‌ ಖಾನ್‌, ಸುನೇಲಿಟಾ ಟೋಪೊ, ಬ್ಯೂಟಿ ಡುಂಗ್‌ಡುಂಗ್‌.

Advertisement

Udayavani is now on Telegram. Click here to join our channel and stay updated with the latest news.

Next