ಹೊಸದಿಲ್ಲಿ: ದೆಹಲಿ ಮಹಾ ನಗರ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಸೋತರೆ 34 ಶಾಸಕರು ಅರವಿಂದ್ ಕೇಜ್ರಿವಾಲ್ ಅವರ ರಾಜೀನಾಮೆ ಕೇಳಲಿದ್ದಾರೆ ಎಂದು ಬಿಜೆಪಿ ವಕ್ತಾರ ತೇಜಿಂದರ್ ಪಾಲ್ ಎಸ್ ಬಗ್ಗಾ ಅವರು ಟ್ವೀಟ್ ಮಾಡಿದ್ದಾರೆ.
ನಾಳೆ ಎಪ್ರಿಲ್ 26 ರಂದು ಫಲಿತಾಂಶ ಪ್ರಕಟವಾಗಲಿದ್ದು, ಬಹುತೇಕ ಸಮೀಕ್ಷೆಗಳು ಬಿಜೆಪಿ ಭರ್ಜರಿ ಜಯ ಸಾಧಿಸುವುದಾಗಿ ಹೇಳಿವೆ. 270 ಸ್ಥಾನಗಳ ಪೈಕಿ ಬಿಜೆಪಿ 200ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು 2 ಸಮೀಕ್ಷೆಗಳಲ್ಲಿ ಹೇಳಲಾಗಿದೆ. ಅಭ್ಯರ್ಥಿಗಳ ಅಕಾಲಿಕ ನಿಧನನಿಂದಾಗಿ 2 ಕೇತ್ರಗಳ ಮತದಾನ ಮುಂದೂಡಲಾಗಿತ್ತು.
ಮತದಾನೋತ್ತರ ಸಮೀಕ್ಷೆಗಳು ನಿಜವಾದುದ್ದೇ ಹೌದಾದಲ್ಲಿ ಚಳುವಳಿ ಆರಂಭಿಸುವುದಾಗಿ ಕೇಜ್ರಿವಾಲ್ ಹೇಳಿದ್ದಾರೆ.
ಚಳುವಳಿಯಿಂದಲೇ ಹುಟ್ಟಿಕೊಂಡ ಆಪ್ ತನ್ನ ದಾರಿಯಿಂದ ಹಿಂತಿರುಗುವ ಮಾತೇ ಇಲ್ಲ ಎಂದು ಕೇಜ್ರವಾಲ್ ಹೇಳಿದ್ದಾರೆ.