ವಿಧಾನಸಭೆ: ರಾಜ್ಯದಲ್ಲಿ ಕಳೆದ ಮೂರು ವರ್ಷದಲ್ಲಿ 33492 ನವಜಾತ ಶಿಶುಗಳು ಮರಣ ಹೊಂದಿವೆ. ಬಿಜೆಪಿಯ ಕೆ.ಜಿ.ಬೋಪಯ್ಯ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಸಚಿವ ಶಿವಾನಂದ ಪಾಟೀಲ್, ಶಿಶು ಮರಣ ಸಂಖ್ಯೆಯನ್ನು ಶಿಶು ಮರಣ ದರದ ಮೇಲೆ ವಿಶ್ಲೇಷಿಸಬೇಕು. ಸಾವಿರ ಜೀವಂತ ಜನನಗಳಿಗೆ ಶಿಶು ಮರಣ ದರವನ್ನು ಕಂಡು ಹಿಡಿಯಲಾಗುತ್ತದೆ. 2015-16ರಲ್ಲಿ 11438, 2016-17ರಲ್ಲಿ 11212 ಹಾಗೂ 2017-18ರಲ್ಲಿ 10742 ಶಿಶು ಮರಣವಾಗಿದೆ ಎಂದು ಮಾಹಿತಿ ನೀಡಿದರು. ಅವಧಿಪೂರ್ವ ಜನನ, ಸೋಂಕು, ಹುಟ್ಟು ಕಡಿಮೆ ತೂಕ, ಜನನ ಸಮಯದ ಉಸಿರುಗಟ್ಟುವಿಕೆ, ಹೃದಯ ಸಂಬಂಧ ಹಾಗೂ ಇತರ ಸಮಸ್ಯೆಗಳಿಂದ
ನವಜಾತ ಶಿಶುಗಳ ಮರಣವಾಗುತ್ತಿದೆ. ಯಾವುದೇ ರೀತಿಯ ನಿರ್ಲಕ್ಷ್ಯ ಇಲ್ಲದೇ ಚಿಕಿತ್ಸೆ ನೀಡುತ್ತಿದ್ದೇವೆ ಎಂದರು.