300 ಹೊಸ ಗಸ್ತು ವಾಹನಗಳನ್ನು ಸೇವೆಗೆ ಸನ್ನದ್ಧಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ
ಹೇಳಿದ್ದಾರೆ.
Advertisement
ವಿಧಾನಸೌಧ ಮುಂಭಾಗದಲ್ಲಿ ಸೋಮವಾರ ಮೊದಲ ಹಂತದ ನೂರು ಹೊಸ ಗಸ್ತು ವಾಹನಗಳನ್ನು ಪೊಲೀಸ್ ಇಲಾಖೆಗೆ ಹಸ್ತಾಂತರಿಸಿ ಅವರು ಮಾತನಾಡಿದರು. ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಅಪಘಾತ ಪ್ರಮಾಣ ಜಾಸ್ತಿಯಾಗುತ್ತಿದೆ. ಹೀಗಾಗಿ ಹೆದ್ದಾರಿಗಳಲ್ಲಿ ನಡೆಯುವ ಅಪಘಾತಗಳಲ್ಲಿ ನೊಂದವರಿಗೆ ತುರ್ತು ನೆರವಾಗಲು ಹೆಚ್ಚಿನ ಸಂಖ್ಯೆಯ ಗಸ್ತು ವಾಹನಗಳ ಸೇವೆ ಒದಗಿಸಲಾಗುವುದು.
ರಸ್ತೆ ಸುರಕ್ಷತೆ, ಅಪಘಾತ ತಡೆಗಟ್ಟುವುದು ಹಾಗೂ ಗಾಯಾಳುಗಳಿಗೆ ತುರ್ತು ಸ್ಪಂದಿಸಲು ಅವುಗಳನ್ನು
ಬಳಸಿಕೊಳ್ಳಲಾಗುವುದು ಎಂದರು. ಗೃಹ ಸಚಿವ ಡಾ.ಜಿ.ಪರಮೇಶ್ವರ್, ಗೃಹ ಸಚಿವರ ಸಲಹೆಗಾರ ಕೆಂಪಯ್ಯ, ಗೃಹ
ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಸುಭಾಷ್‌ಚಂದ್ರ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್,
ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್, ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಭಾಗವಹಿಸಿದ್ದರು.