Advertisement

ವಿಷಾನಿಲ ಸೇವಿಸಿ 300 ಮಕ್ಕಳು ಅಸ್ವಸ್ಥ

07:30 AM Oct 11, 2017 | Team Udayavani |

ಶಾಮ್ಲಿ: ಉತ್ತರಪ್ರದೇಶದ ಗೋರಖ್‌ಪುರದ ಆಸ್ಪತ್ರೆಯೊಂದರಲ್ಲಿ ಆಮ್ಲಜನಕದ ಕೊರತೆಯಿಂದ ಮಕ್ಕಳು ಅಸುನೀಗಿದ ಘಟನೆ ಇನ್ನೂ ಜನಮಾನಸದಲ್ಲಿ ಇರುವಾಗಲೇ, ಶಾಮ್ಲಿ ಜಲ್ಲೆಯಲ್ಲಿ ವಿಷಾನಿಲ ಸೇವಿಸಿ 300ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿರುವ ಘಟನೆ ನಡೆದಿದೆ. ಅದೃಷ್ಟವಷಾತ್‌, ಯಾವುದೇ ಸಾವು ನೋವು ಸಂಭವಿಸಿಲ್ಲ. ಮಕ್ಕಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದರೆ ಕೆಲ ಮಕ್ಕಳ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಇಲ್ಲಿಯ ಬುಧಾನ ರೋಡ್‌ನ‌ಲ್ಲಿರುವ ಶ್ರೀ ಸರಸ್ವತಿ ವಿದ್ಯಾ ಮಂದಿರ್‌ ಮತ್ತು ಸರಸ್ವತಿ ಪ್ರೌಢ ಶಾಲೆ ಬಳಿಯೇ ಸರ್‌ ಶಾದಿ ಲಾಲ್‌ ಸಕ್ಕರೆ ಕಾರ್ಖಾನೆ ಇದೆ. ಅದು ಹೊರಹಾಕುವ ವಿಷಪೂರಿತ ರಾಸಾಯನಿಕಗಳನ್ನು ಮಕ್ಕಳು ಸೇವಿಸಿದ ಕಾರಣ ಅಸ್ವಸ್ಥರಾಗಿ ದ್ದಾರೆ ಎನ್ನಲಾಗಿದೆ. ಘಟನೆಯ ಕುರಿತು ಉತ್ತರ ಪ್ರದೇಶ ಸರ್ಕಾರ ತನಿಖೆಗೆ ಆದೇಶಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next