Advertisement
ಸರಿಸುಮಾರು 34 ವರ್ಷಗಳ ಹಿಂದೆ ಸ್ಥಳೀಯಾಡಳಿತದಿಂದ ಕೋಡಿಕಲ್ ಸರಕಾರಿ ಶಾಲೆಯ ಬಳಿ 10 ಸೆಂಟ್ಸ್ ಜಾಗದಲ್ಲಿ ಸಾರ್ವಜನಿಕರ ಬಳಕೆಗೆ ಸ್ಥಾಪಿಸಲ್ಪಟ್ಟ ಎರಡು ಕಟ್ಟಡಗಳು ಈಗ ಯಾವುದೇ ಕ್ಷಣ ಕುಸಿದು ಬೀಳುವ ಸ್ಥಿತಿಯಲ್ಲಿವೆ.
Related Articles
Advertisement
ಪೊದೆಯೊಳಗಿದೆ ಶ್ರೇಯೋಭಿವೃದ್ಧಿ ಕೇಂದ್ರಮಹಿಳೆಯರ ಸಶಕ್ತೀಕರಣದ ಆಶಯದೊಂದಿಗೆ ಜಿಲ್ಲಾ ಪರಿಷತ್(ಈಗಿನ ಜಿಲ್ಲಾ ಪಂಚಾಯತ್) ಅಧೀನದಲ್ಲಿದ್ದ ಈ ಮಹಿಳಾ ಶ್ರೇಯೋಭಿವೃದ್ಧಿ ಕೇಂದ್ರ ಕೂಡ ನಿರ್ವಹಣೆಯಿಲ್ಲದೆ ಪಾಳು ಬಿದ್ದಿದೆ. ಈ ಕಟ್ಟಡವೀಗ ಪೊದೆಗಳಿಂದ ಆವೃತ್ತಗೊಂಡಿದ್ದು, ಕುಸಿದು ಬೀಳುವ ಸ್ಥಿತಿಯಲ್ಲಿದೆ. ಕಟ್ಟಡದ ಸುತ್ತಮುತ್ತ ಮದ್ಯದ ಬಾಟಲಿಗಳನ್ನು ಎಸೆಯಲಾಗಿದೆ. ಈ ಎರಡು ಕಟ್ಟಡಗಳು ಅಕ್ಕ-ಪಕ್ಕದಲ್ಲೇ ಇದ್ದು, ಸಮೀಪದಲ್ಲೇ ಸರಕಾರಿ ಶಾಲೆ ಕೂಡ ಇದೆ. ಕುಸಿದು ಬೀಳುವ ಸ್ಥಿತಿಯಲ್ಲಿರುವ ಈ ಕಟ್ಟಡಗಳಿಂದ ಶಾಲೆಗೂ ತೊಂದರೆ ತಪ್ಪಿದ್ದಲ್ಲ. ಜತೆಗೆ ಹಾವು, ಚೇಳು, ಇಲಿಗಳ ವಾಸಸ್ಥಾನವಾಗಿದ್ದು, ಶಾಲಾ ವಠಾರದಲ್ಲಿ ಮಕ್ಕಳು ಕೂಡ ಭಯ-ಭೀತಿಯಿಂದ ಓಡಾಡಬೇಕಾದ ಪರಿಸ್ಥಿತಿ ಇದೆ. ಬಹಳ ಹಳೆಯದಾದ ಈ ಎರಡು ಕಟ್ಟಡಗಳನ್ನು ದುರಸ್ತಿ, ಅಗತ್ಯ ಸೇವೆಗಳಿಗೆ ಸದ್ಬಳಕೆ ಮಾಡಿಕೊಳ್ಳಬಹುದು ಎನ್ನುತ್ತಾರೆ ಸ್ಥಳೀಯರು. ಅನ್ಯ ಕಾರ್ಯಗಳಿಗೆ ಬಳಕೆಯಾಗಲಿ
ನಾನು ಇಲ್ಲಿ ವ್ಯಾಪಾರ ಮಾಡಲು ಆರಂಭಿಸಿಯೇ ಸುಮಾರು 30 ವರ್ಷವಾಗಿರಬಹುದು. ಅಂದಿನಿಂದಲೂ ಈ ಕಟ್ಟಡ ಇದೆ. ಯಾವುದೇ ಕಾರ್ಯಗಳಿಗೂ ಬಳಕೆಯಾಗದೆ ಪಾಳುಬಿದ್ದಿದೆ. ಇದಕ್ಕಿಂತ ಬೇರೆ ಇಲಾಖೆಗಳಿಗೆ ಕೊಟ್ಟಿದ್ದರೆ ಒಳ್ಳೆಯದಿತ್ತು.
– ಕುಂಞಿರಾಮ, ಸ್ಥಳೀಯ ವ್ಯಾಪಾರಿ ಮಹಿಳಾ ಮಂಡಲಿಗಾದರೂ ನೀಡಲಿ
ನಾವು ಬಾಡಿಗೆ ಕಟ್ಟಡಗಳಲ್ಲಿ ಮಹಿಳಾ ಮಂಡಲದ ಸಭೆ, ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ಹೀಗಿರುವಾಗ, ಪಾಳು ಬಿದ್ದಿರುವ ಈ ಮಹಿಳಾ ಶ್ರೇಯೋಭಿವೃದ್ಧಿ ಕೇಂದ್ರವನ್ನು ದುರಸ್ತಿಗೊಳಿಸಿ ಕೊಟ್ಟರೆ ತುಂಬಾ ಅನುಕೂಲವಾಗಲಿದೆ. ಹೀಗಾಗಿ, ಸಂಬಂಧಪಟ್ಟವರು, ಪಾಳು ಬಿದ್ದಿರುವ ಈ ಕಟ್ಟಡಗಳನ್ನು ಸದ್ಬಳಕೆ ಮಾಡುವ ಬಗ್ಗೆ ಗಮನಹರಿಸುವುದು ಉತ್ತಮ.
– ದೇವಿಕಾ, ಮಹಿಳಾ ಮಂಡಲಗಳ ಸಂಚಾಲಕಿ ಪುನರ್ ನಿರ್ಮಾಣ
ಈ ಎರಡು ಕಟ್ಟಡಗಳನ್ನು ಕೆಡವಿ 30 ಲಕ್ಷ ರೂ. ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಟೆಂಡರ್ ಆಗಿದೆ. ಇನ್ನು ಕೆಲವೇ ದಿನಗಳಲ್ಲಿ ಕೆಲಸ ಆರಂಭವಾಗಲಿದೆ.
– ಶಶಿಧರ್ ಹೆಗ್ಡೆ,
ಸ್ಥಳೀಯ ಕಾರ್ಪೊರೇಟರ್ ಪ್ರಜ್ಞಾ ಶೆಟ್ಟಿ