Advertisement

10 ತಿಂಗಳಲ್ಲಿ 30 ಕೋಟಿ ಆದಾಯ ಸಂಗ್ರಹ

08:11 PM Apr 05, 2021 | Team Udayavani |

ಬಳ್ಳಾರಿ: ಇಲ್ಲಿನ ನಗರಾಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷನಾಗಿ ಕಳೆದ 10 ತಿಂಗಳಲ್ಲಿ ಬಿಡಿ ನಿವೇಶನಗಳ ಮಾರಾಟ, ಖಾಸಗಿ ವಿನ್ಯಾಸಗಳಿಗೆ ಅನುಮೋದನೆ, ಸಿಎ ಸೈಟ್‌ಗಳ ಮಂಜೂರಿನಿಂದ 30 ಕೋಟಿ ರೂ ಆದಾಯ ಪಡೆಯಲಾಗಿದೆ ಎಂದು ಬುಡಾ ಅಧ್ಯಕ್ಷ ದಮ್ಮೂರು ಶೇಖರ್‌ ಹೇಳಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿದ ಅವರು, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿ ಕಾರ ಅಸ್ಥಿತ್ವಕ್ಕೆ ಬಂದ 1988ರಿಂದ ಈವರೆಗೆ ಬುಡಾ ಅಧ್ಯಕ್ಷರಾದ ಯಾರಿಂದಲೂ 10 ತಿಂಗಳಲ್ಲಿ ಇಷ್ಟೊಂದು ಮೊತ್ತದ ಆದಾಯ ಬಂದಿರಲಿಲ್ಲ ಎಂದವರು ಸ್ಪಷ್ಟಪಡಿಸಿದರು. ಮಹಾ ಯೋಜನೆ 2021ಕ್ಕೆ ಮುಕ್ತಾಯವಾಗಿದ್ದು ಹೊಸ ಯೋಜನೆಯಲ್ಲಿ ಬಳ್ಳಾರಿ ತಾಲೂಕಿನ ಇನ್ನು 12 ಹಳ್ಳಿಗಳನ್ನು ಸೇರಿಸಲಾಗುವುದು.

ನಗರದ 7 ಕಡೆ ಬಸ್‌ ಸೆಲ್ಟರ್‌ಗಳನ್ನು ನಿರ್ಮಿಸಲಾಗಿದೆ. ಒಟ್ಟಾರೆ 32 ಕಡೆ ಇಂಥ ಬಸ್‌ ಸೆಲ್ಟರ್‌ ಖಾಸಗಿ ಕಂಪನಿಗಳ ಸಿಎನ್‌ ಆರ್‌ ಫಂಡ್‌ ನಿಂದ ನಿರ್ಮಿಸಲಾಗಿದೆ ಎಂದರು. ನಗರದ ಜೋಳದರಾಶಿ ರಂಗಮಂದಿರದಲ್ಲಿ ದೊಡ್ಡನಗೌಡರ, ಮುನಿಸಿಪಲ್‌ ಮೈದಾನದಲ್ಲಿ ಬಹದ್ದೂರು ಶೇಷಗಿರಿರಾವ್‌, ಕನ್ನಡ ಭವನದಲ್ಲಿ ಫೆ„ಲ್ವಾನ್‌ ರಂಜಾನ್‌ ಸಾಬ್‌, ಉದ್ಯಾನವನದಲ್ಲಿ ಹರಗಿನಡೋಣಿ ಸಣ್ಣ ಬಸನಗೌಡ, ಸರ್ಕಾರಿ ಬಾಲಕಿಯರ ಕಾಲೇಜಿನಲ್ಲಿ ಸಾವಿತ್ರಿ ಬಾಯಿಪುಲೆ, ವಿವೇಕಾನಂದ ಪುತ್ಥಳಿಗಳನ್ನು ಪ್ರತಿಷ್ಠಾಪಿಸಲಾಗುವುದು.

ಐತಿಹಾಸಿಕ ಬಳ್ಳಾರಿ ಬೆಟ್ಟಕ್ಕೆ ಕೋಬಿಲ್‌ ಕಾರ್‌ (ರೋಪಿವೇ)- ಸಂಗನಕಲ್ಲು ಬೆಟ್ಟದ, ಮಿಂಚೇರಿ ಬೆಟ್ಟದ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಲಾಗಿದೆ. ನಗರದ 21 ಪಾರ್ಕ್‌ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಮತ್ತು ಅವುಗಳಿಗೆ ಮಹನೀಯರ ಹೆಸರಿಡಲು ನಗರ ಪಾಲಿಕೆಗೆ ಶಿಫಾರಸ್ಸು ಮಾಡಲಾಗಿದೆ. ಬುಡಾ ಆವರಣದಲ್ಲಿನ ಇಂದಿರಾ ಕ್ಯಾಂಟೀನ್‌ ಸ್ಥಳಾಂತರ ಮಾಡಿ ಅಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಲಾಗುವುದು ಎಂದರು.

ನಗರದಲ್ಲಿ ಜನರಿಗೆ ಕಡಿಮೆ ದರದಲ್ಲಿ ನಿವೇಶನಗಳು ಲಭ್ಯವಾಗುವಂತೆ ಮಾಡಲು ಬಿ. ಗೋನಾಳು ಬೈಪಾಸ್‌ ರಸ್ತೆ ಬಳಿ 102 ಎಕರೆ ಪ್ರದೇಶದಲ್ಲಿ ಲೇಔಟ್‌ ಅಭಿವೃದ್ಧಿಪಡಿಸಲಾಗುತ್ತಿದೆ. ಸದ್ಯದಲ್ಲೇ ನಿವೇಶನಗಳ ರಚನೆಗೆ ಟೆಂಡರ್‌ ಕರೆಯಲಾಗುವುದು ಎಂದು ತಿಳಿಸಿದರು. ಟಿಬಿ ಸ್ಯಾನಿಟೋರಿಯಂನಿಂದ ಹೊಸಪೇಟೆ ರಸ್ತೆಯವರೆಗೆ ರಸ್ತೆ ಅಭಿವೃದ್ಧಿ, ರಾಜ್‌ಕುಮಾರ್‌ ಉದ್ಯಾನವನ್ನು 4 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ, ಡಿಎಂಎಫ್‌ ಅನುದಾನದಲ್ಲಿ 4.58 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕೈಗೊಳ್ಳಲಾಗಿದೆ. ನಗರದ ಮೋತಿ ಟಾಕೀಸ್‌ ಬಳಿಯ ರೈಲ್ವೇ ಬ್ರಿಡ್ಜ್ ಅಗಲೀಕರಣ ಹೀಗೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಇದಕ್ಕೆಲ್ಲ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌, ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ, ಸಂಸದ ವೆ. ದೇವೇಂದ್ರಪ್ಪ, ನಗರಾಭಿವೃದ್ಧಿ ಸಚಿವ ಬೆ„ರತಿ ಬಸವರಾಜ್‌, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಹಕಾರವೇ ಕಾರಣ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next