Advertisement

ಶೋಪಿಯಾನ್: ಎನ್ ಕೌಂಟರ್ ಮೂಲಕ ಮೂವರು ಉಗ್ರರನ್ನು ಹತ್ಯೆಗೈದ ಭದ್ರತಾಪಡೆಗಳು

12:06 PM Jun 16, 2020 | Mithun PG |

ಜಮ್ಮಕಾಶ‍್ಮೀರ: ಶೋಪಿಯಾನ್ ಜಿಲ್ಲೆಯ ಗ್ರಾಮವೊಂದರಲ್ಲಿ ಇಂದು ಸೇನಾ ಪಡೆ, ಪೊಲೀಸ್  ಮತ್ತು ಭದ್ರತಾ ಪಡೆಗಳು ಜಂಟಿ ಕಾರ್ಯಚರಣೆಯ ಮೂಲಕ ಮೂವರು ಉಗ್ರರನ್ನು ಎನ್ ಕೌಂಟರ್ ಮೂಲಕ ಹತ್ಯೆಗೈಯುವಲ್ಲಿ ಯಶಸ್ವಿಯಾಗಿವೆ.

Advertisement

ಟುರ್ಕು ವಂಗಮ್  ಗ್ರಾಮದಲ್ಲಿ ಇಂದು (16-06-2020) ಬೆಳ್ಳಂಬೆಳಗ್ಗೆ  ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಿದ ಭದ್ರತಾ ಪಡೆಗಳು ಮೂವರು ಉಗ್ರರನ್ನು ಹೊಡೆದುರುಳಿಸಿವೆ. ಸ್ಥಳದಿಂದ ಏಕೆ-47, ಐಎನ್ ಎಸ್ ಎಎಸ್ ರೈಫಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಎನ್ ಕೌಂಟರ್ ನಡೆದ ಸ್ಥಳ ಸೇನೆಯ ರಾಷ್ಟ್ರೀಯ ರೈಫಲ್ ಕ್ಯಾಂಪ್ ನಿಂದ 400 ರಿಂದ 500 ಮೀಟರ್ ದೂರದಲ್ಲಿದೆ.

ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರೆದಿದ್ದು, ಇನ್ನೂ ಮೂವರು ಉಗ್ರರು ಅಡಗಿರುವ ಸಾಧ್ಯತೆ ಇದೆ ಎಂದು ಮಾಧ್ಯಮದ ವರದಿ ತಿಳಿಸಿದೆ.

ಕಳೆದ 10 ದಿನಗಳಲ್ಲಿ ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ನಾಲ್ಕನೇ ಎನ್ ಕೌಂಟರ್ ಇದಾಗಿದೆ. ಈ ಸಮಯದಲ್ಲಿ ಸುಮಾರು 19 ಉಗ್ರರನ್ನು ಹೊಡೆದುರುಳಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next