Advertisement

ಪ್ರತೀಕಾರ; ಭಾರತೀಯ ಸೇನೆಯ ಗುಂಡಿನ ದಾಳಿಗೆ 3 ಪಾಕ್ ಸೈನಿಕರ ಸಾವು, 4 ಶಿಬಿರ ಹಾನಿ

08:22 AM May 09, 2020 | Nagendra Trasi |

ಜಮ್ಮು:ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿನಿಯಂತ್ರಣ ರೇಖೆ ಸಮೀಪ ಪಾಕಿಸ್ತಾನ ಪಡೆ ನಡೆಸಿದ ಗುಂಡಿನ ದಾಳಿಗೆ ಭಾರತೀಯ ಸೇನೆ ಶುಕ್ರವಾರ ತಕ್ಕ ಪ್ರತ್ಯುತ್ತರ ನೀಡಿದೆ. ಜಮ್ಮು-ಕಾಶ್ಮೀರದ ಗಡಿಯಲ್ಲಿ ಪಾಕ್ ಪಡೆ ಕಳೆದ ಒಂದು ವಾರದಿಂದ ನಿರಂತರವಾಗಿ ಗುಂಡಿನ ದಾಳಿ ನಡೆಸುತ್ತಿತ್ತು.

Advertisement

ವರದಿಯ ಪ್ರಕಾರ, ಭಾರತೀಯ ಸೇನೆಯ ದಾಳಿಗೆ ಕನಿಷ್ಠ 3-4 ಪಾಕ್ ಸೈನಿಕರು ಸಾವನ್ನಪ್ಪಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಲ್ಲದೇ ಭಾರತೀಯ ಸೇನೆಯ ಭಾರೀ ಗುಂಡಿನ ದಾಳಿಗೆ ಪಾಕ್ ಸೇನೆಯ ಶಿಬಿರಗಳು ತೀವ್ರ ಹಾನಿಗೊಳಗಾಗಿದೆ ಎಂದು ವರದಿ ವಿವರಿಸಿದೆ.

ಪಾಕ್ ಸೇನೆ ನಿರಂತರವಾಗಿ ಗಡಿನಿಯಂತ್ರಣ ರೇಖೆ ಬಳಿ ದಾಳಿ ನಡೆಸಿದ್ದರ ಪರಿಣಾಮ ಮೇ 7ರಂದು ಎರಡು ಮನೆಗಳು ಹಾನಿಗೊಂಡಿದ್ದು, ಏಳು ಜನರು ಗಾಯಗೊಂಡಿರುವುದಾಗಿ ವರದಿ ತಿಳಿಸಿದೆ. ಪಾಕ್ ಸೇನೆಯ ಶೆಲ್ಲಿಂಗ್ ದಾಳಿಯಲ್ಲಿ ಖ್ವಾಸ್ಬಾ ಗ್ರಾಮದ ನಿವಾಸಿ ನಿಸಾರ್ ಅಲಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next