Advertisement

Jammu & Kashmir ; ಹೊರರಾಜ್ಯದ ಕಾರ್ಮಿಕರನ್ನು ಗುರಿಯಾಗಿಸಿ ಉಗ್ರರ ಗುಂಡಿನ ದಾಳಿ

11:16 PM Jul 13, 2023 | Team Udayavani |

ಶೋಪಿಯಾನ್‌ : ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ನ ಗಗ್ರಾನ್ ಪ್ರದೇಶದಲ್ಲಿ ಇಬ್ಬರು ಮುಸುಕುಧಾರಿ ಭಯೋತ್ಪಾದಕರು ಗುಂಡು ಹಾರಿಸಿದ ನಂತರ ಕನಿಷ್ಠ ಮೂವರು ಸ್ಥಳೀಯರಲ್ಲದ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆ ನಡೆದ ತತ್ ಕ್ಷಣ ಮೂವರನ್ನೂ ಶ್ರೀನಗರದ ಎಸ್‌ಎಂಎಚ್‌ಎಸ್ ಆಸ್ಪತ್ರೆಗೆ ರವಾನಿಸಲಾಗಿದೆ.

Advertisement

ಗುಂಡು ತಗುಲಿದವರನ್ನು ಅನ್ಮೋಲ್ ಕುಮಾರ್, ಹೆರಾಲಾಲ್ ಯಾದವ್ ಮತ್ತು ಪಿಂಟು ಕುಮಾರ್ ಠಾಕೂರ್ ಎಂದು ಗುರುತಿಸಲಾಗಿದೆ.

ಕಾಶ್ಮೀರ ಪೊಲೀಸರು ಟ್ವೀಟ್ ಮಾಡಿ “ಶೋಪಿಯಾನ್‌ನಲ್ಲಿ ಮೂವರು ಹೊರ ರಾಜ್ಯದ ಕಾರ್ಮಿಕರ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ. ಗಾಯಗೊಂಡವರು ಅನ್ಮೋಲ್ ಕುಮಾರ್, ಪಿಂಟು ಕುಮಾರ್ ಠಾಕೂರ್ ಮತ್ತು ಹೆರಾಲಾಲ್ ಯಾದವ್, ಬಿಹಾರದ ಡಿಸ್ಟ್ಟ್ ಸುಪೌಲ್ ನಿವಾಸಿಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಉಗ್ರ ವಿರುದ್ಧ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next