Advertisement

ಶ್ರೀಲಂಕಾ ಸಂಪುಟದಲ್ಲಿ ಮೂವರು ರಾಜಪಕ್ಸೆಗಳು

11:30 PM Aug 12, 2020 | mahesh |

ಕೊಲಂಬೊ: ಶ್ರೀಲಂಕಾದಲ್ಲಿ ನೂತನ ಪ್ರಧಾನಿ ಮಹಿಂದಾ ರಾಜಪಕ್ಸೆ ನೇತೃತ್ವದಲ್ಲಿ ಬುಧವಾರ ರಚಿಸಿರುವ ಸಚಿವ ಸಂಪುಟದಲ್ಲಿ ಒಟ್ಟು ಮೂವರು ರಾಜಪಕ್ಸೆಗಳು ಸೇರ್ಪಡೆಯಾಗಿದ್ದಾರೆ. ಪ್ರಧಾನಿಯಾಗಿರುವ ಮಹಿಂದಾ ರಾಜಪಕ್ಸೆ ಹಣಕಾಸು ಹಾಗೂ ನಗರಾಭಿವೃದ್ಧಿ ಖಾತೆಯ ಹೊಣೆ ಹೊತ್ತಿದ್ದರೆ, ಅವರ ಪುತ್ರ ನಮಾಲ್‌ ರಾಜಪಕ್ಸೆ ಯುವಜನ ಕಲ್ಯಾಣ ಹಾಗೂ ಕ್ರೀಡಾ ಸಚಿವರಾಗಿದ್ದಾರೆ. ಮಹಿಂದಾ ಅವರ ಹಿರಿಯ ಸಹೋದರ ಚಾಮಲ್‌ ರಾಜಪಕ್ಸೆ ನೀರಾವರಿ ಸಚಿವರಾಗಿದ್ದಾರೆ. ರಾಜಪಕ್ಸ ನೇತೃತ್ವದ ಶ್ರೀಲಂಕಾ ಪೀಪಲ್ಸ್‌ ಪಾರ್ಟಿ(ಎಸ್‌ಎಲ್‌ಪಿಪಿ) ಸಂಸತ್‌ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು. ಎಸ್‌ಎಲ್‌ಪಿಪಿಯಲ್ಲಿ ರಾಜಪಕ್ಸೆ ಕುಟುಂಬದ ಐವರು ಸದಸ್ಯರು ಜನಪ್ರತಿನಿಧಿಗಳಾಗಿ ಆಯ್ಕೆಯಾಗಿದ್ದಾರೆ. ಶ್ರೀಲಂಕಾ ಅಧ್ಯಕ್ಷರಾಗಿರುವ ಗೊಟಬಾಯ ರಾಜಪಕ್ಸೆ ಕೂಡ ಮಹಿಂದಾ ಅವರ ಸಹೋದರರಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next