Advertisement

ಉಗ್ರ ಅಬ್ದುಲ್‌ ಮತೀನ್‌ ಸುಳಿವು ನೀಡಿದವರಿಗೆ 3 ಲಕ್ಷ ರೂ. ಬಹುಮಾನ!

08:07 AM May 14, 2020 | Lakshmi GovindaRaj |

ಬೆಂಗಳೂರು: ರಾಜ್ಯದಲ್ಲಿ ಐಸಿಸ್‌ ಉಗ್ರ ಚಟುವಟಿಕೆ ವಿಸ್ತರಣೆಯಲ್ಲಿ ತೊಡಗಿಸಿಕೊಂಡಿದ್ದ ಶಿವಮೊಗ್ಗದ ಉಗ್ರ ಅಬ್ದುಲ್‌ ಮತೀನ್‌ ಅಹಮದ್‌ ತಾಹ ( 26) ಸುಳಿವು ನೀಡಿದವರಿಗೆ ಮೂರು ಲಕ್ಷ ರೂ. ನಗದು ಬಹುಮಾನ ಘೋಷಿಸಿ  ರಾಷ್ಟ್ರೀಯ ತನಿಖಾ ದಳ ( ಎನ್‌ಐಎ) ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಅಲ್‌ ಹಿಂದ್‌, ಐಸಿಸ್‌ ಉಗ್ರ ಸಂಘಟನೆಗಳ ಮುಖ್ಯಸ್ಥ ಮೆಹಬೂಬ್‌ ಪಾಷಾ ಹಾಗೂ ಇತರೆ ಆರೋಪಿಗಳ ನಿಕಟ ಸಂಪರ್ಕ ಹೊಂದಿದ್ದ ಅಬ್ದುಲ್‌ ಮತೀನ್‌ ಹಲವು ತಿಂಗಳಿಂದ ತಲೆಮರೆಸಿಕೊಂಡಿದ್ದಾನೆ.

Advertisement

ಈ ಹಿನ್ನೆಲೆಯಲ್ಲಿ ಅಬ್ದುಲ್‌ ಮತೀನ್‌ ಬಂಧನಕ್ಕೆ ಹುಡುಕಾಡುತ್ತಿರುವ ಎನ್‌ ಐಎ, ಆತನ ಬಂಧಿಸಲು ಆತನ ಸುಳಿವು ನೀಡಿದವರಿಗೆ ನಗದು ಬಹುಮಾನ ಘೋಷಿಸಿದೆ. ಶಿವಮೊಗ್ಗ ತೀರ್ಥಹಳ್ಳಿ  ತಾಲೂಕಿನ ನಿವಾಸಿಯಾಗಿರುವ ಮತೀನ್‌, ಮೆಹಬೂಬ್‌ ಪಾಷಾ, ಕ್ವಾಜಾ ಮೊಹಿದೀನ್‌ ಜತೆ ಸಂಪರ್ಕ ಹೊಂದಿದ್ದು ರಾಜ್ಯದಲ್ಲಿ ಐಸಿಸ್‌ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾನೆ. ಜತೆಗೆ, ಐಸಿಸ್‌ ಸಂಬಂಧ ಆನ್‌ಲೈನ್‌ ಸಂವಹನ  ಪ್ರಕ್ರಿಯೆಯಲ್ಲೂ ಭಾಗಿಯಾಗಿದ್ದಾನೆ ಎಂದು ಎನ್‌ಐಎ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next