Advertisement

ಎದೆ ಮೇಲೆ 3ಕೆಜಿ ಗಡ್ಡೆ:ಪರೀಕ್ಷಿಸಿದ ಶಾಸಕ ಜಾಧವ

10:59 AM Nov 30, 2018 | Team Udayavani |

ಚಿಂಚೋಳಿ: ತಾಂಡಾ ಜನರ ಸಮಸ್ಯೆ ಕೇಳಿ ಪರಿಹಾರ ಒದಗಿಸಲು ಆಗಮಿಸಿದ್ದ ಶಾಸಕರು ಮಹಿಳೆಯೊಬ್ಬರ ಎದೆ ಮೇಲೆ ಇರುವ ಗಡ್ಡೆ ನೋಡಿ, ಅದಕ್ಕೆ ಸೂಕ್ತ ಚಿಕಿತ್ಸೆ ಕೊಡಿಸುವ ಭರವಸೆ ನೀಡಿದ ಪ್ರಸಂಗ ಭೋಗಾಲಿಂಗದಳ್ಳಿ ತಾಂಡಾದಲ್ಲಿ ನಡೆಯಿತು.

Advertisement

ಶಾಸಕ ಡಾ| ಉಮೇಶ ಜಾಧವ ಅವರೆದುರು ಗಾಂಗ್ಲಿಬಾಯಿ ಕೇಸು ಜಾಧವ ಎನ್ನುವ ಮಹಿಳೆ ತನ್ನ ಮನೆಗೆ ಕುಡಿಯುವ ನೀರು ಪೂರೈಸುವ ವ್ಯವಸ್ಥೆಯಿಲ್ಲ ಎಂದು ಸಮಸ್ಯೆ ಹೇಳಿಕೊಳ್ಳುತ್ತಿದ್ದಳು. ಈ ವೇಳೆ ಆಕೆಯ ಎದೆ ಮೇಲಿದ್ದ ಭಾರಿ ಗಾತ್ರದ ಗಡ್ಡೆಯೊಂದನ್ನು ಕಂಡು ಪರೀಕ್ಷಿಸಿ, ಯಾಕೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿಲ್ಲ ಎಂದು ವಿಚಾರಿಸಿದರು. ಇದಕ್ಕೆ ಉತ್ತರಿಸಿದ ಗಾಂಗ್ಲಿಬಾಯಿ, ತನ್ನ ಎದೆ ಮೇಲೆ ಮೂರು ಕೆಜಿ ಭಾರವಾದ ಗಡ್ಡೆಯಿದೆ. ಶಸ್ತ್ರ ಚಿಕಿತ್ಸೆಗೆ ಹಣವಿಲ್ಲದೇ ಇರುವ ಕಾರಣ ಕಳೆದ 40 ವರ್ಷಗಳಿಂದ ಈ ಗಡ್ಡೆಯೊಂದಿಗೆ ಜೀವನ ನಡೆಸುತ್ತಿದ್ದೇನೆ ಎಂದು ತಿಳಿಸಿದರು.

ಆಗ ಶಾಸಕರು ಪಡಿತರ ಚೀಟಿ, ಆಧಾರ ಕಾರ್ಡ್‌ ತೆಗೆದುಕೊಂಡು ಬನ್ನಿ, ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ನುರಿತ ವೈದ್ಯರಿಂದ ಈ ಗಡ್ಡೆಯನ್ನು ತೆಗೆಸುತ್ತೇನೆ ಎಂದು ಭರವಸೆ ನೀಡಿದರು. ಜಿಪಂ ಸದಸ್ಯ ಗೌತಮ ಪಾಟೀಲ, ಕೆ.ಎಂ. ಬಾರಿ, ಎಇಇ ಕೃಷ್ಣ ಅಗ್ನಿಹೋತ್ರಿ, ಅಶೋಕ ಚವ್ಹಾಣ, ಜಗದೀಶಸಿಂಗ್‌ ಠಾಕೂರ, ಆಶಾ ಕಾರ್ಯಕರ್ತೆ ಸುಧಾ ಲೊಡನೊರ, ಅಂಬರೀಶ ದೊಡ್ಡಮನಿ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next