Advertisement

ಮಹಿಳಾ ಉದ್ಯಮಿಗಳ ಜತೆ ಅಮೆರಿಕ ರಾಯಭಾರಿ ಸಂವಾದ

03:20 PM Oct 29, 2017 | Team Udayavani |

ಉಡುಪಿ, ಅ. 28: ಚೆನ್ನೈಯಲ್ಲಿರುವ ಅಮೆರಿಕ ರಾಯಭಾರಿ ಕಚೇರಿಯ ಸಾರ್ವಜನಿಕ ವ್ಯವಹಾರದ ರಾಯಭಾರಿ ಲಾರೆನ್‌ ಲೊವ್‌ಲೇಸ್‌ ಅವರು ಮಣಿಪಾಲ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿ ಎಂಐಟಿಯ ಇನೋವೇಶನ್‌ ಸೆಂಟರ್‌ನಲ್ಲಿ “ಬೆಳೆಯುತ್ತಿರುವ ಮಾರುಕಟ್ಟೆಯಲ್ಲಿ ಮಹಿಳೆಯ ಪಾತ್ರ’ ವಿಷಯದ ಕುರಿತು ಸಂವಾದ ನಡೆಸಿದರು.

Advertisement

ನ. 28ರಿಂದ 30ರ ವರೆಗೆ ಹೈದರಾಬಾದ್‌ನಲ್ಲಿ ಅಮೆರಿಕ ಮತ್ತು ಭಾರತದ ಸಹಯೋಗದಲ್ಲಿ ಜರಗಲಿರುವ ಜಾಗತಿಕ ಉದ್ಯಮಶೀಲತಾ ಸಮ್ಮೇಳನದ ಹಿನ್ನೆಲೆಯಲ್ಲಿ ಚರ್ಚೆ ನಡೆಸಿದ ಅವರು ಇಂದು ಮಹಿಳಾ ಉದ್ಯಮಿಗಳ ಬೆಳವಣಿಗೆಯ ಅವಶ್ಯಕತೆ, ಎದುರಾಗಿರುವ ಸವಾಲುಗಳ ಕುರಿತು ಮಾತನಾಡಿದರು.

ಇದೇ ಸಂದರ್ಭದಲ್ಲಿ ಅವರು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಅವರು ಘನತ್ಯಾಜ್ಯ ವಿಲೇವಾರಿ, ಪ್ರಾಥಮಿಕ ಶಿಕ್ಷಣ, ಕುಡಿಯುವ ನೀರಿನ ಸಂಪನ್ಮೂಲಗಳ ನಿರ್ವಹಣೆ, ಆರೋಗ್ಯ ಮೊದಲಾದವುಗಳ ಬಗ್ಗೆ ಕೈಗೊಂಡಿರುವ ಕ್ರಮ, ನಡೆಸಿರುವ ಪ್ರಯತ್ನಗಳ ಬಗ್ಗೆ ಶ್ಲಾ ಸಿದರು. ಪವರ್‌ ಸಂಸ್ಥೆಯ ಪ್ರತಿನಿಧಿಗಳು, ವಿದ್ಯಾರ್ಥಿಗಳು ಚರ್ಚೆಯಲ್ಲಿ ಪಾಲ್ಗೊಂಡರು. ಮಣಿಪಾಲ ವಿ.ವಿ. ಮುಖ್ಯ ಸಂಶೋಧನಾ ಅಧಿಕಾರಿ ಡಾ| ಅರುಣ್‌ ಶಾನುಭೋಗ್‌ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next