Advertisement
ಪಡಿತರ ಕಾರ್ಡಿನ ಬದಲಾವಣೆ ಕುರಿತಂತೆ ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡಬೇಕು ಮತ್ತು ತಕ್ಷಣವೇ ಸ್ಪಂದಿಸಿ ಸರ್ಕಾರದ ಯೋಜನೆ ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯವಾಗಬೇಕು ಎಂದು ತಿಳಿಸಿದರು.
ಪ್ರತಿಶತ ಗುರಿ ತಲುಪಿದ್ದು, ಇನ್ನು 10% ಅವಕಾಶಗಳಿದ್ದು ಆಹಾರ ಸುರಕ್ಷತೆ ಕಾಯ್ದೆಯ ಅನ್ವಯದಂತೆ ಸರ್ಕಾರದ
ಯೋಜನೆ ಸಾರ್ಥಕವಾಗಲು ಅಗತ್ಯ ಕ್ರಮ ಕೈಗೊಳ್ಳಲು ಸ್ಥಳದಲ್ಲಿಯೇ ಇದ್ದ ಜಿಲ್ಲಾಧಿಕಾರಿ ಜೆ. ಮಂಜುನಾಥ ಅವರಿಗೆ ತಿಳಿಸಿದರು. ಪಹಣಿ ಪಡೆಯಲು ಮುಕ್ತ ಅವಕಾಶ: ಪಹಣಿ ಪಡೆಯಲು ಮುಕ್ತ ಅವಕಾಶ ಕಲ್ಪಿಸಲಾಗಿದ್ದು, ತಹಶೀಲ್ದಾರ್ ಕಚೇರಿ ಸೇರಿದಂತೆ ಗಣಕೀಕೃತ ಕೇಂದ್ರಗಳಲ್ಲಿ ಪಹಣಿ ಲಭ್ಯವಾಗಲಿದ್ದು, ಕಳೆದ ಮೂರು ದಿನಗಳಿಂದ ವ್ಯವಸ್ಥೆಗೊಳಿಸಲಾಗಿದೆ. ಇನ್ನು ಮುಂದೆ ಪಹಣಿಗಾಗಿ ಕಾಯಬೇಕಿಲ್ಲವೆಂದು ಜನರಿಗೆ ತಿಳಿಸಿದರು.
Related Articles
ಅಸಮಾಧಾನ ವ್ಯಕ್ತಪಡಿಸಿದ ಅಧಿಕಾರಿಗಳು ಸೇವೆಯ ಸೌಲಭ್ಯ ಎಲ್ಲರಿಗೂ ದೊರಕುವಂತಾಗಬೇಕು. ಸೇವಾ ಕೇಂದ್ರ
ಸೌಲಭ್ಯಯುತವಾಗಿರಬೇಕು. ಈ ಕುರಿತಂತೆ ಸಂಬಂಧಿಸಿದವರು ಗಮನ ಹರಿಸಬೇಕು ಎಂದರು. ಇದೇ ಸಂದರ್ಭದಲ್ಲಿ ಹಳೇ ತಹಶೀಲ್ದಾರ್ ಕಚೇರಿಯ ಉಪನೋಂದಣಾಧಿಕಾರಿ ಕಾರ್ಯಾಲಯಕ್ಕೆ ಭೇಟಿ ನೀಡಿದರು.
Advertisement
ಸಾರ್ವಜನಿಕರೊಂದಿಗೆ ಚರ್ಚಿಸುತ್ತ ಹಲವಾರು ಸಮಸ್ಯೆಗಳನ್ನು ಆಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಜೆ. ಮಂಜುನಾಥ, ಮುಖ್ಯಕಾರ್ಯ ನಿರ್ವಹಣಾಧಿಕಾರಿ ಅವಿನಾಶ ಮೆನನ್, ಸಹಾಯಕ ಆಯುಕ್ತ ಡಾ| ಜಗದೀಶನಾಯಕ ಉಪಸ್ಥಿತರಿದ್ದರು.