Advertisement
ಸತತ ಮೂರು ದಿನಗಳ ಕಾಲ ಕುಸಿದ ಕಟ್ಟಡದ ಅವಶೇಷಗಳಡಿ ಬಿದ್ದಿದ್ದರೂ ತನ್ನ ಪ್ರೀತಿಯ ಪತ್ನಿಯ ಜೀವ ಮೊದಲು ಉಳಿಸಿ ಎಂದು ಎನ್‌ಡಿಆರ್‌ಎಫ್ ಸಿಬಂದಿಯನ್ನು ಅಂಗಲಾಚಿ ಬೇಡಿದ ಅಮರ ಪ್ರೇಮಿ ದಿಲೀಪ್, ತಾನು ಬರಲು ಅವಕಾಶ ಇದ್ದರೂ ಮೊದಲು ಪತ್ನಿ ಯನ್ನು ರಕ್ಷಿಸಿ ಬಳಿಕ ತಾನು ಹೊರ ಬಂದಿದ್ದಾನೆ. ಶುಕ್ರವಾರ ಅಪರಾಹ್ನ ಕಾರ್ಯಾ ಚರಣೆ ವೇಳೆ ಅವಶೇಷ ಗಳ ಅಡಿಯಲ್ಲಿ ಜನ ಬದು ಕಿರುವ ಕುರುಹು ಹಿಡಿದು ಹೊರಟ ಎನ್‌ಡಿಆರ್‌ಎಫ್‌ಗೆ ಮೊದಲು ಸಿಕ್ಕಿದ್ದು ದಾಖಲು ಮಾಲು ಕೊಕರೆ (ದಿಲೀಪ). ಕೂಡಲೇ ಅವನಿಗೆ ನೀರು ಕೊಟ್ಟು ತೆವಳುತ್ತ ಮುಂದಕ್ಕೆ ಬರುವಂತೆ ಕೋರಿ ದರು. ಆದರೆ ಇದಕ್ಕೆ ಒಪ್ಪದ ದಿಲೀಪ್, ಮೊದಲು ತನ್ನ ಪತ್ನಿ ಸಂಗೀತಾ ಳನ್ನು ರಕ್ಷಿಸುವಂತೆ ಕೋರಿದ. ಕೊನೆಗೆ ಅವಶೇಷಗಳಡಿಯಿಂದ ಆಕೆಯೊಂದಿಗೆ ಹೊರಬಂದ.
ಧಾರವಾಡ ತಾಲೂಕಿನ ಕೊಕ್ರೆ ಪುರದ ದಾಖಲು ಮಾಲು ಕೊಕರೆ (ದಿಲೀಪ) ಹಾಗೂ ಸಂಗೀತಾ ಕೂಲಿ ಕಾರ್ಮಿಕ ದಂಪತಿ. ಕಟ್ಟಡದ ಅವಶೇಷಗಳ ನಡುವೆ ಪಾರ್ಕಿಂಗ್ ಜಾಗದಲ್ಲಿ ಸಿಲುಕಿದ್ದರು. ಪಾರ್ಕಿಂಗ್ ಸ್ಥಳದಲ್ಲಿ ಕಾಂಕ್ರಿಟ್ ಹಾಕುವ ಕೆಲಸದಲ್ಲಿದ್ದಾಗ ಕಟ್ಟಡ ಏಕಾಏಕಿ ಕುಸಿದಿತ್ತು. ಕೆಲವು ಸಮಯ ಏನಾಗುತ್ತಿದೆ ಎಂದೇ ಗೊತ್ತಾ ಗಿರಲಿಲ್ಲ. ಅನಂತರ ಕರೆ ದಾಗ ಪತ್ನಿಯ ಧ್ವನಿ ಕೇಳಿಸಿತು. ಐದಾರು ಅಡಿ ದೂರದಲ್ಲಿ ಬಿದ್ದಿದ್ದ ಪತ್ನಿಯ ಧ್ವನಿ ಕೇಳಿದರೂ ಅತ್ತ ಹೋಗಲು ಆಗುತ್ತಿರಲಿಲ್ಲ. ಇದ್ದ ಲ್ಲಿಂದಲೇ ಆಕೆಗೆ ಧೈರ್ಯ ತುಂಬಿದೆ. ಅನಂತರ ಕೆಲಸಕ್ಕೆ ಬಳಸು ತ್ತಿದ್ದ ಸುತ್ತಿಗೆಯಿಂದ ಅಡ್ಡ ಲಾಗಿದ್ದ ಅವಶೇಷಗಳನ್ನು ನಿಧಾನ ವಾಗಿ ತೆರವುಗೊಳಿಸಿ ಒಂದು ದಿನ ಬಳಿಕ ಆಕೆಯ ಬಳಿ ತಲು ಪಿದೆ. ಬದುಕಿದರೂ, ಸತ್ತರೂ ಜತೆ ಯಾಗಿಯೇ ಇರೋಣ ಎಂದು ಆಕೆಗೆ ಧೈರ್ಯ ತುಂಬಿ ನೆರವಿಗಾಗಿ ಕಾದೆವು. ಮೊದಲ ದಿನ ಹಗಲು ಮಾತ್ರ ಗೊತ್ತಾಯಿತು. ಅನಂತರ ಏನೂ ಗೊತ್ತಾಗಲಿಲ್ಲ ಎಂದು ತನ್ನ ಹೋರಾಟವನ್ನು ವಿವರಿಸಿದರು ದಿಲೀಪ.
Related Articles
ಒಂದು ದಿನ ಕಳೆಯುತ್ತಿದ್ದಂತೆ ನೀರಿನ ದಾಹ ಹೆಚ್ಚಾಯಿತು. ಜೀವ ಉಳಿಸಿಕೊಳ್ಳಬೇಕು ಎಂದು ಪಕ್ಕದಲ್ಲೇ ಇದ್ದ ಸಿಮೆಂಟ್ ನೀರು ಕುಡಿದೆವು. ಸಿಮೆಂಟ್ ನೀರು ಕುಡಿದಿದ್ದರಿಂದ ಪತ್ನಿ ವಾಂತಿ ಮಾಡಿಕೊಂಡಳು. ಆದರೂ ದಾಹ ತಡೆಯ ಲಾಗದೆ ನಾಲ್ವರು ಮಕ್ಕಳಿ ಗಾಗಿ ಜೀವ ಉಳಿಸಿ ಕೊಳ್ಳಲು ಎರಡೂ¾ರು ಬಾರಿ ಅದೇ ನೀರು ಕುಡಿದಿ ದ್ದೇವೆ ಎಂದರು ದಿಲೀಪ.
Advertisement