Advertisement

Tender ಕರೆಯದೆ ಎಐ ಕಂಪೆನಿಗೆ ಪ್ರತಿ ತಿಂಗಳಿಗೆ 3 ಕೋಟಿ ರೂ. ಪಾವತಿ!

12:47 AM Jul 18, 2024 | Team Udayavani |

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ, ವಕ್ಫ್ ಮಂಡಳಿಯ ಅಕ್ರಮದ ಪ್ರಕರಣಗಳು ಹಸಿಯಾಗಿರುವಾಗಲೇ ಇಂಧನ ಇಲಾಖೆಯಲ್ಲಿ ಯಾವುದೇ ಟೆಂಡರ್‌ ಆಹ್ವಾನಿಸದೆ ವಿದ್ಯುತ್‌ ಹೊರೆ ಮುನ್ಸೂಚನೆ ನಿರ್ವಹಣ ಕಾರ್ಯವನ್ನು ಖಾಸಗಿ ಕಂಪೆನಿಯೊಂದಕ್ಕೆ ಗುತ್ತಿಗೆ ನೀಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

Advertisement

ಕ್ಯುನೆಕ್ಸ್ಟ್ ಎಂಬ ಕಂಪೆನಿಗೆ ಪ್ರಾಯೋಗಿಕವಾಗಿ ವಹಿಸಲಾಗಿದೆ. ಅದು ಕೃತಕ ಬುದ್ಧಿಮತ್ತೆಯಿಂದ ವಿದ್ಯುತ್‌ ಹೊರೆ ಪ್ರಮಾಣದ ಮುನ್ಸೂಚನೆ ನಿರ್ವಹಣೆ ಮಾಡಲಿದೆ. ಇದಕ್ಕೆ ಪ್ರತಿಯಾಗಿ ಇಲಾಖೆಗೆ ಆಗುವ ನಿವ್ವಳ ಉಳಿತಾಯದಲ್ಲಿ ಪ್ರತಿ ತಿಂಗಳು ಇಂತಿಷ್ಟು ಪಾಲನ್ನು ಗುತ್ತಿಗೆ ಪಡೆದ ಕಂಪೆನಿಗೆ ಪಾವತಿಸಲಾಗುತ್ತದೆ. ಆ ಮೊತ್ತವು ಮಾಸಿಕ ಕನಿಷ್ಠ 50 ಲಕ್ಷದಿಂದ ಗರಿಷ್ಠ 3 ಕೋಟಿ ರೂ. ಆಗಿದೆ. ನಷ್ಟ ಉಂಟಾದರೆ ದಂಡ ವಿಧಿಸುವ ಬಗ್ಗೆಯೂ ಉಲ್ಲೇಖೀಸಿಲ್ಲ.

ಸಾಮಾನ್ಯವಾಗಿ ಟೆಂಡರ್‌ ಮೊತ್ತದ 5 ಲಕ್ಷ ಮೀರಿದ ಮೊತ್ತದ ಯಾವುದೇ ಯೋಜನೆಗೆ ಕೆಟಿಟಿಪಿ ಕಾಯ್ದೆ ಪ್ರಕಾರ ಕಡ್ಡಾಯವಾಗಿ ಟೆಂಡರ್‌ ಕರೆಯಬೇಕು. ಆದರೆ ವಿದ್ಯುತ್‌ ನಿರ್ವಹಣೆಗಾಗಿ ಎಐ ಚಾಲಿತ ಕ್ರಿಯಾತ್ಮಕ ನಿರ್ಧಾರ ಬೆಂಬಲಿತ ವ್ಯವಸ್ಥೆ ಯೋಜನೆಗೆ ಟೆಂಡರ್‌ ಆಹ್ವಾನಿಸಿಲ್ಲ. ಬದಲಿಗೆ ಇಲಾಖೆಯಲ್ಲಿನ ನಾಲ್ವರು ಅಧಿಕಾರಿಗಳನ್ನು ಒಳಗೊಂಡ ಸಮಿತಿಯೇ ಪರಿಶೀಲನೆ ಮಾಡಿ ಕ್ಯುನೆಕ್ಸ್ಟ್ ಎಂಬ ಕಂಪನಿಗೆ ಗುತ್ತಿಗೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next