Advertisement

2ನೇ ಟೆಸ್ಟ್‌: ವಿಂಡೀಸ್‌ ವಿರುದ್ಧ ಪಾಕಿಸ್ತಾನ ತಂಡಕ್ಕೆ ಆಘಾತ

12:56 PM May 05, 2017 | Team Udayavani |

ಜಮೈಕಾ: ಯಾಸಿರ್‌ ಶಾ ಮಾರಕ ದಾಳಿಯಿಂದಾಗಿ ಪಾಕಿಸ್ತಾನ ತಂಡ ಅತಿಥೇಯ ವೆಸ್ಟ್‌ ಇಂಡೀಸ್‌ ವಿರುದ್ಧ 2ನೇ ಟೆಸ್ಟ್‌ನಲ್ಲಿ ಗೆಲುವು ಸಾಧಿಸುವ ಹಾದಿಯಲ್ಲಿತ್ತು. ಆದರೆ ಗೆಲುವಿಗೆ 126 ರನ್‌ ಸುಲಭ ಗುರಿ ಪಡೆದ ಪಾಕ್‌ 2ನೇ ಇನಿಂಗ್ಸ್‌ನಲ್ಲಿ 30 ರನ್‌ಗೆ 5 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

Advertisement

ವೆಸ್ಟ್‌ ಇಂಡೀಸ್‌ 1ನೇ ಇನಿಂಗ್ಸ್‌ನಲ್ಲಿ 312 ಆಲೌಟ್‌ ಆಗಿತ್ತು. ಇದಕ್ಕೆ ಉತ್ತರವಾಗಿ ಪಾಕ್‌ 393 ರನ್‌ ಬಾರಿಸಿ 81 ರನ್‌ ಮುನ್ನಡೆ ಪಡೆದಿತ್ತು. ಆದರೆ ವೆಸ್ಟ್‌ ಇಂಡೀಸ್‌ 2ನೇ ಇನಿಂಗ್ಸ್‌ನಲ್ಲಿ ಯಾಸಿರ್‌ ಶಾ (7 ವಿಕೆಟ್‌) ದಾಳಿಗೆ ಸಿಲುಕಿ 265 ರನ್‌ಗೆ ಆಲೌಟ್‌ ಆಗಿತ್ತು. ಹೀಗಾಗಿ ಪಾಕ್‌ ಗೆಲುವಿಗೆ 126 ರನ್‌ ಗುರಿ ಇತ್ತು. ಸುಲಭ ಗುರಿ ಬೆನ್ನುಹತ್ತಿದ ಪಾಕ್‌ ಆರಂಭದಲ್ಲಿಯೇ ಭರ್ಜರಿ ಆಘಾತಕ್ಕೆ ಒಳಗಾಗಿದೆ. ತಂಡದ ಮೊತ್ತ 30 ರನ್‌ ಆಗಿರುವಾಗ 5 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಸಂಕ್ಷಿಪ್ತ ಸ್ಕೋರ್‌: ವೆಸ್ಟ್‌ ಇಂಡೀಸ್‌ 1ನೇ ಇನಿಂಗ್ಸ್‌ 312/10, 2ನೇ ಇನಿಂಗ್ಸ್‌ 268/10 (ಶೈ ಹೋಪ್‌ 90, ಬ್ರಾಥ್‌ವೇಟ್‌ 43, ಯಾಸಿರ್‌ ಶಾ 94ಕ್ಕೆ 7), ಪಾಕ್‌ 1ನೇ ಇನಿಂಗ್ಸ್‌ 393/10, 2ನೇ ಇನಿಂಗ್ಸ್‌ 30/5(ಅಜರ್‌ ಅಲಿ 10, ಶಾನನ್‌ ಗೇಬ್ರಿಯಲ್‌ 10ಕ್ಕೆ 3).

Advertisement

Udayavani is now on Telegram. Click here to join our channel and stay updated with the latest news.

Next