ವಿಶಾಖಪಟ್ಟಣ : ಇಲ್ಲಿನ ಡಾ.ವೈ.ಎಸ್. ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ಪ್ರವಾಸಿ ಇಂಗ್ಲೆಂಡ್ ವಿರುದ್ದದ 2 ನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಬ್ಯಾಟಿಂಗ್ ಲಯ ಕಂಡುಕೊಂಡ ಶುಭಮನ್ ಗಿಲ್ ಅಮೋಘ ಶತಕ ಸಿಡಿಸಿದ್ದಾರೆ. ಭಾರತ ತಂಡ ಸುಭಧ್ರ ಸ್ಥಿತಿಯಲ್ಲಿ ಆಟ ಮುಂದುವರಿಸಿದೆ.
2 ನೇ ಇನ್ನಿಂಗ್ಸ್ ಆಟವನ್ನು 28 ರನ್ ಗಳಿಂದ ಮುಂದುವರಿಸಿದ ಭಾರತ ತಂಡ ಮೊದಲೇ ಆಘಾತಕ್ಕೆ ಸಿಲುಕಿತು. ನಾಯಕ ರೋಹಿತ್ ಶರ್ಮ 13 ರನ್ ಗಳಿಗೆ ಪೆವಿಲಿಯನ್ ಗೆ ಮರಳಿದರು. ಜೈಸ್ವಾಲ್ 17 ರನ್ ಗಳಿಸಿ ಔಟಾದರು. ಆ ಬಳಿಕ ಆಟವಾಡಿದ ಶುಭಮನ್ ಗಿಲ್ ಶತಕ ಸಿಡಿಸಿ ಸಂಭ್ರಮಿಸಿದರು. ಫಾರ್ಮ್ ಕಂಡುಕೊಂಡ ಸಮಾಧಾನ ಅವರದ್ದಾಯಿತು.
ಕೆಲ ಹೊತ್ತು ಸಾಥ್ ನೀಡಿದ ಶ್ರೇಯಸ್ ಅಯ್ಯರ್ 29 ರನ್ ಗಳಿಸಿ ಔಟಾದರು. ರಜತ್ ಪಾಟಿದಾರ್ 9 ರನ್ ಗೆ ಔಟಾದರು. ಅಕ್ಷರ್ ಪಟೇಲ್ 38 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಭಾರತ 56 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 211 ರನ್ ಗಳಿಸಿದ್ದು,354 ರನ್ ಮುನ್ನಡೆ ಸಾಧಿಸಿದೆ. ಗಿಲ್ 147 ಎಸೆತಗಳಲ್ಲಿ 104 ರನ್ ಗಳಿಸಿ ಔಟಾದರು. 11ಬೌಂಡರಿ ಮತ್ತು 2 ಆಕರ್ಷಕ ಸಿಕ್ಸರ್ ಸಿಡಿಸಿದ್ದರು.
ಭಾರತ 1 ಇನ್ನಿಂಗ್ಸ್ ನಲ್ಲಿ 396 ರನ್ ಗಳಿಗೆ ಆಲೌಟಾಗಿತ್ತು. ಇಂಗ್ಲೆಂಡ್ 253 ರನ್ ಗಳಿಗೆ ಆಲೌಟಾಗಿ ಹಿನ್ನಡೆ ಅನುಭವಿಸಿತ್ತು. ಶೋಯೆಬ್ ಬಶೀರ್ ಎಸೆದ ಚೆಂಡನ್ನು ವಿಕೆಟ್ ಕೀಪರ್ ಫೋಕ್ಸ್ ಕೈಗಿತ್ತು ಗಿಲ್ ನಿರ್ಗಮಿಸಿದರು.