ಅಡಿಲೇಡ್: ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್‌ಗೆ 419 ರನ್ನುಗಳ ಭಾರೀ ಸೋಲುಣಿಸಿದ ಆಸ್ಟ್ರೇಲಿಯ, 2 ಪಂದ್ಯಗಳ ಸರಣಿಯನ್ನು ಕ್ಲೀನ್ ಸ್ವೀಪ್ ಆಗಿ ತನ್ನದಾಗಿಸಿಕೊಂಡಿತು. ಇದು ವಿಂಡೀಸ್ ವಿರುದ್ಧ ಕಾಂಗರೂ ಪಡೆ ದಾಖಲಿಸಿದ ರನ್ ಅಂತರದ ಅತೀ ದೊಡ್ಡ ಗೆಲುವು.
ಗೆಲುವಿಗೆ 497 ರನ್ನುಗಳ ಕಠಿನ ಗುರಿ ಪಡೆದ ವೆಸ್ಟ್ ಇಂಡೀಸ್ 4ನೇ ದಿನವಾದ ರವಿವಾರ ಜುಜುಬಿ 77 ರನ್ನಿಗೆ ಆಲೌಟ್ ಆಯಿತು. 4 ವಿಕೆಟಿಗೆ 38 ರನ್ ಗಳಿಸಿದಲ್ಲಿಂದ ವಿಂಡೀಸ್ ದಿನದಾಟ ಮುಂದುವರಿಸಿತ್ತು. ಮೊದಲ ಅವಧಿಯ ಆಟದಲ್ಲೇ 39 ರನ್ ಅಂತರದಲ್ಲಿ ಉಳಿದ ಆರೂ ವಿಕೆಟ್ ಉರುಳಿತು. ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಆಸ್ಟ್ರೇಲಿಯ 164 ರನ್ನುಗಳಿಂದ ಜಯಿಸಿತ್ತು.
ನಾಯಕ ಹಾಗೂ ವೇಗಿ ಪ್ಯಾಟ್ ಕಮಿನ್ಸ್ ಮತ್ತು ಜೋಶ್ ಹೇಝಲ್‌ವುಡ್ ಗೈರಲ್ಲೂ ಆಸೀಸ್ ಬೌಲರ್ ಅಮೋಘ ಪರಾಕ್ರಮಗೈದರು. ಮಿಚೆಲ್ ಸ್ಟಾರ್ಕ್, ಮೈಕಲ್ ನೇಸರ್ ಮತ್ತು ಸ್ಕಾಟ್ ಬೋಲ್ಯಾಂಡ್ ತಲಾ 3 ವಿಕೆಟ್ ಉಡಾಯಿಸಿದರು.
ಆಸ್ಟ್ರೇಲಿಯ ಇನ್ನು ದ. ಆಫ್ರಿಕಾ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಮೊದಲ ಟೆಸ್ಟ್ ಶನಿವಾರ ಬ್ರಿಸ್ಬೇನ್‌ನಲ್ಲಿ ಆರಂಭವಾಗಲಿದೆ.
Australia ,West Indies, ವೆಸ್ಟ್ ವಿಂಡೀಸ್,ಪಿಂಕ್ ಬಾಲ್ ಟೆಸ್ಟ್ ,ಆಸ್ಟ್ರೇಲಿಯ, ಆಸ್ಟ್ರೇಲಿಯ-7 ವಿಕೆಟಿಗೆ 511 ಡಿಕ್ಲೇರ್ ಮತ್ತು 6 ವಿಕೆಟಿಗೆ 199 ಡಿಕ್ಲೇರ್. ವೆಸ್ಟ್ ಇಂಡೀಸ್-214 ಮತ್ತು 77 (ಚಂದರ್‌ಪಾಲ್ 17, ಜೋಶುವ 15, ಬೋಲ್ಯಾಂಡ್ 16ಕ್ಕೆ 3, ನೇಸರ್ 22ಕ್ಕೆ 3, ಸ್ಟಾರ್ಕ್ 29ಕ್ಕೆ 3).
ಪಂದ್ಯಶ್ರೇಷ್ಠ: ಟ್ರ್ಯಾವಿಸ್ ಹೆಡ್. ಸರಣಿಶ್ರೇಷ್ಠ: ಮಾರ್ನಸ್ ಲಬುಶೇನ್.