ಇಂದೋರ್: ಆಸ್ಟ್ರೇಲಿಯ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡ 99 ರನ್ ಗಳ ಭರ್ಜರಿ ಜಯ ಸಾಧಿಸುವ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಕೈವಶ ಪಡಿಸಿಕೊಂಡಿದೆ.
ಶುಭಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಅವರ ಅಮೋಘ ಶತಕಗಳು, ನಾಯಕ ಕೆಎಲ್ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ಅವರ ಸ್ಪೋಟಕ ಅರ್ಧಶತಕಗಳ ಸಹಾಯದಿಂದ ಭಾರತ 50 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 399 ರನ್ ಗಳಿಸಿ ದೊಡ್ಡ ಗುರಿಯನ್ನು ಆಸ್ಟ್ರೇಲಿಯ ತಂಡದ ಮುಂದಿಟ್ಟಿತ್ತು.
ಮಳೆಯಿಂದಾಗಿ 2ನೇ ಇನಿಂಗ್ಸ್ ಅನ್ನು 33 ಓವರ್‌ಗಳಿಗೆ ಕಡಿತಗೊಳಿಸಲಾಗಿತ್ತು, DLS ಪ್ರಕಾರ ಗುರಿ 317 ರನ್ ಗುರಿ ಆಸೀಸ್ ಗೆ ನೀಡಲಾಗಿತ್ತು.ಗುರಿ ಬೆನ್ನಟ್ಟಿದ ಆಸೀಸ್ 28.2 ಓವರ್ ಗಳಲ್ಲಿ 217 ರನ್ ಗಳಿಗೆ ಆಲೌಟಾಯಿತು.
ಆಸೀಸ್ ಬ್ಯಾಟಿಂಗ್ ನಲ್ಲಿ ವಾರ್ನರ್ 53, ಮಾರ್ನಸ್ ಲಬುಶೇನ್ 27, ಸೀನ್ ಅಬಾಟ್ 54, ಜೋಶ್ ಹ್ಯಾಜಲ್‌ವುಡ್23, ಅಲೆಕ್ಸ್ ಕ್ಯಾರಿ 14, ಕ್ಯಾಮರೂನ್ ಗ್ರೀನ್19 ರನ್ ಗಳಿಸಿ ಔಟಾದರು. ಹೊಡಿ ಬಡಿ ಆಟವಾಡಿದರೂ ಯಾರೊಬ್ಬರೂ ನೆಲಕಚ್ಚಿ ನಿಂತು ಆಡಲು ಸಾಧ್ಯವಾಗಲಿಲ್ಲ.
ಭಾರತದ ಪರ ಸ್ಪಿನ್ನರ್ ಗಳಾದ ಅಶ್ವಿನ್ ಮತ್ತು ಜಡೇಜಾ ತಲಾ 3, ಪ್ರಸಿದ್ಧ್ ಕೃಷ್ಣ 2 ಮತ್ತು ಶಮಿ ಒಂದು ವಿಕೆಟ್ ಪಡೆದರು.