ಮುಖ್ಯವಾಗಿ, 1972ರ ಅನಂತರದ ಅವಧಿಯಲ್ಲಿ ನೇತೃತ್ವ ನಡೆಸಿದ ಯಾವುದೇ ಪಕ್ಷಗಳ ನಾಯಕರು 5 ವರ್ಷಗಳ ಕಾಲ ತಮ್ಮ ಸರಕಾರವನ್ನು ಉಳಿಸಿಕೊಳ್ಳುವುದರಲ್ಲಿ ವಿಫಲಗೊಂಡಿದ್ದರು. ಇದಕ್ಕೂ ಮೊದಲು ವಸಂತರಾವ್ ನಾಯಕ್ ಅವರು ಸತತ 13 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದರು. ಐದು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ದೇವೇಂದ್ರ ಫಡ್ನವೀಸ್ ಎರಡನೇ ಮುಖ್ಯಮಂತ್ರಿಯಾಗಿದ್ದಾರೆ.
Advertisement
ಫಡ್ನವೀಸ್ ಅವರ ಆಯ್ಕೆಯ ಬಗ್ಗೆ ಚರ್ಚೆಯನ್ನು ನಡೆಸುತ್ತಿರುವ ರಾಜಕಾರಣಿಗಳ ಭವಿಷ್ಯವಾಣಿಯನ್ನು ಸುಳ್ಳು ಎಂದು ತಿಳಿಸುವ ಮೂಲಕ ಫಡ್ನವೀಸ್ ಅವರು ಸತತ ಐದು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದರು.
ಆರಂಭದಲ್ಲಿ ವಿದರ್ಭದ ಮುಖ್ಯಮಂತ್ರಿ ಎಂದು ಟೀಕೆಗೆ ಒಳಗಾದ ಸಿಎಂ ಫಡ್ನವೀಸ್ ಅವರು, ವಿವಿಧ ಯೋಜನೆಗಳನ್ನು ರಾಜ್ಯವ್ಯಾಪ್ತಿ ಹಮ್ಮಿಕೊಳ್ಳುವ ಮೂಲಕ ಉತ್ತಮ ನಾಯಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು. ರಾಜ್ಯದ ಅಭಿವೃದ್ಧಿ ಕಾರ್ಯ ನಿಭಾಯಿಸುವ ಜತೆಗೆ ಟೀಕಿಸುತ್ತಿದ್ದ ವಿರೋಧಿಗಳನ್ನು ಸೋಲಿಸಿ ಕೊನೆಯಲ್ಲಿ, ವಿಪಕ್ಷದ ನಾಯಕರನ್ನು ಬಿಜೆಪಿಗೆ ಕರೆತರುವ ಕಾರ್ಯ ಜಾಣಾಕ್ಷತೆಯಿಂದ ನಡೆಸಿದರು. ಕಳೆದ 5 ವರ್ಷಗಳಲ್ಲಿ, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ತಮ್ಮ ರಾಜಕೀಯ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಪ್ರತಿಭಟನೆಗಳು, ಸಾಮಾಜಿಕ ಸಮಸ್ಯೆಗಳು ಎಲ್ಲದನ್ನು ಎದುರಿಸುವಲ್ಲಿ ಸತತ ಪ್ರಯತ್ನಗಳನ್ನು ನಡೆಸಿ ಜಯಿಸಿದ್ದಾರೆ. ಸಿಎಂ ಫಡ್ನವೀಸ್ ಅವರು ಕಳೆದ ಐದು ವರ್ಷಗಳಿಂದ ಮುಖ್ಯಮಂತ್ರಿ ಹುದ್ದೆ ಯನ್ನು ಆಯೋಜಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿಎಂ ದೇವೇಂದ್ರ ಫಡ್ನವೀಸ್ ಅವರ ನಾಯಕತ್ವದಲ್ಲಿ ಮತ್ತೆ ಬಿಜೆಪಿ ವಿಧಾನಸಭೆ ಚುನಾವಣೆಯನ್ನು ಎದುರಿಸಲು ಸಿದ್ಧವಾಗಿದೆ.