Advertisement

ಅವಕಾಶ ವಂಚಿತ ಎಲ್ಲರಿಗೂ 2ಎ ಮೀಸಲಾತಿ ನೀಡಬೇಕು: ಸಚಿವ ಮುರುಗೇಶ ನಿರಾಣಿ

08:23 PM Dec 06, 2022 | Team Udayavani |

ಬೆಂಗಳೂರು: ಪಂಚಮಸಾಲಿ ಲಿಂಗಾಯತರಿಗೆ ಮಾತ್ರವಲ್ಲ; ಇಡೀ ವೀರಶೈವ-ಲಿಂಗಾಯತ ಸೇರಿ ಅವಕಾಶ ವಂಚಿತ ಎಲ್ಲ ಸಮುದಾಯಗಳಿಗೂ 2ಎ ಮೀಸಲಾತಿ ನೀಡಬೇಕೆಂದು ಸಚಿವ ಮುರುಗೇಶ ನಿರಾಣಿ ತಿಳಿಸಿದರು.

Advertisement

ಮಂಗಳವಾರ ಬೆಂಗಳೂರು ಪ್ರಸ್‌ಕ್ಲಬ್‌ ಹಮ್ಮಿಕೊಂಡಿದ್ದ ಸಂವಾದದಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, 2ಎ ಮೀಸಲಾತಿಯಿಂದ ಸಾಕಷ್ಟು ಸಮುದಾಯಗಳು ವಂಚಿತವಾಗಿವೆ. ಹಾಗಾಗಿ, ಕೇವಲ ಪಂಚಮಸಾಲಿಗೆ ಸೀಮಿತವಾಗದೆ, ವೀರಶೈವ-ಲಿಂಗಾಯತರು ಒಳಗೊಂಡಂತೆ ಎಲ್ಲ ಸಮುದಾಯಗಳಿಗೂ ಈ ಸೌಲಭ್ಯ ಸಿಗುವಂತಾಗಬೇಕೆಂದು ಹೇಳಿದರು.

ರಾಜ್ಯದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.26ರಷ್ಟು ಅಂದರೆ ಅಂದಾಜು 1.25 ಕೋಟಿ ವೀರಶೈವ-ಲಿಂಗಾಯತ ಸಮುದಾಯದವರು ಇದ್ದಾರೆ. ಇದರಲ್ಲಿ 80 ಲಕ್ಷ ಪಂಚಮಸಾಲಿಗಳಿದ್ದು, 18 ಜನ ಈ ಸಮುದಾಯಕ್ಕೆ ಸೇರಿದ ಶಾಸಕರಿದ್ದಾರೆ. ಇವರ ಮೀಸಲಾತಿ ಕೂಗು ಈಗ ವಿಧಾನಸೌಧಕ್ಕೆ ಕೇಳಿಸುತ್ತಿದೆ. ಇನ್ನು ಲಿಂಗಾಯತದಲ್ಲಿನ ಒಳಪಂಗಡಗಳಾದ ಸಾದರ ಲಿಂಗಾಯತದ ಆರು ಜನ ಶಾಸಕರು, ಬಣಜಿಗರಲ್ಲಿ ಐದು ಜನ, ಜಂಗಮ ಮತ್ತು ನೊಣಬ ಲಿಂಗಾಯತರಲ್ಲಿ ತಲಾ ಇಬ್ಬರು ಶಾಸಕರಿದ್ದಾರೆ. ಒಟ್ಟಾರೆ ಅತಿ ಹೆಚ್ಚು ಶಾಸಕರನ್ನು ಈ ಸಮುದಾಯ ಒಳಗೊಂಡಿದೆ. ಆದಾಗ್ಯೂ 2ಎ ಸೌಲಭ್ಯದಿಂದ ವಂಚಿತ ಆಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next