Advertisement

42 ಅಂಗಡಿಗಳಿಗೆ 2,700 ರೂ. ದಂಡ

02:37 PM Dec 09, 2021 | Team Udayavani |

ಬೀದರ: ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಜಿಲ್ಲಾ ಪೊಲೀಸ್‌ ಇಲಾಖೆಗಳ ಸಹಭಾಗಿತ್ವದಲ್ಲಿ ನಗರ ಮತ್ತು ಗ್ರಾಮೀಣ ಪೊಲೀಸ್‌ ಠಾಣೆ ನೌಬಾದ್‌ ವ್ಯಾಪ್ತಿಯಲ್ಲಿ ತಂಬಾಕು ಮಾರಾಟ ಮಳಿಗೆಗಳ ಮೇಲೆ ದಾಳಿ ನಡೆಸಿ ಕೋಟ್ಪಾ ಕಾಯ್ದೆ ಉಲ್ಲಂಘನೆ ಮಾಡಿದ 42 ಅಂಗಡಿಗಳಿಗೆ 2,700 ರೂ. ದಂಡ ವಿಧಿಸಲಾಯಿತು.

Advertisement

ಕಮಠಾಣಾ ಮತ್ತು ಬೆಳ್ಳುರಾ ಗ್ರಾಮೀಣ ಪ್ರದೇಶಗಳಲ್ಲಿ ನಡೆಸಿದ ದಾಳಿಯಲ್ಲಿ ಪಿಎಸ್‌ಐ ಸುವರ್ಣಾ, ಚದ್ರಕಾಂತ ನೆಳಗೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರರಾದ ಪ್ರಕಾಶ ವಗ್ಗೆ, ಮಹೇಶ ಬಬಛಡೆ, ಬಸವಲಿಂಗ ಗಡ್ಡೆ, ಸಾಗರ ದಾಳಿಯಲ್ಲಿ ಭಾಗವಹಿಸಿದ್ದರು ಎಂದು ಕೋಶದ ಕಾರ್ಯಕ್ರಮ ಅಧಿಕಾರಿ ಡಾ| ಕೃಷ್ಣಾ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next