ಮುಂಬಯಿ : ಭಾಯಂದರ್ ಪಶ್ಚಿಮದ ಸ್ಟೇಷನ್ ರೋಡ್‌ನ ತ್ರಿಮೂರ್ತಿ ಹೊಟೇ ಲ್‌ನ ಮಾಲಕರಾದ ದಿ| ಸೋಮಪ್ಪ ಕೋಟ್ಯಾನ್ ಅವರ ಹಸ್ತದಿಂದ ಸ್ಥಾಪಿಸ ಲ್ಪಟ್ಟ ಸ್ವಾಮಿ ಶರಣಂ ಅಯ್ಯಪ್ಪ ಭಕ್ತವೃಂದ ಚಾರಿಟೆಬಲ್ ಟ್ರಸ್ಟ್ ನ 26ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾ ಪೂಜೆಯು ಶಿಬಿರದ ಶ್ರೀನಿವಾಸ ಗುರುಸ್ವಾಮಿ ಅವರ ನೇತೃತ್ವದಲ್ಲಿ ವಿವಿಧ ಪೂಜಾ ವಿಧಿ- ವಿಧಾನಗಳೊಂದಿಗೆ ಜ. 13ರಂದು ಸರಳ ರೀತಿಯಲ್ಲಿ ಜರಗಿತು. ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ಸದಸ್ಯರಿಂದ ಭಜನೆ, ಸಂಕೀರ್ತನೆ ನೆರವೇರಿತು. ಬಳಿಕ ಪಡಿಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಅನ್ನದಾನದ ಸೇವೆಯು ಭಾಯಂದರ್ ಕನ್ನಡ ಸೇವಾ ಸಂಘದ ಸಂಸ್ಥಾಪಕ, ಗೌರವ ಪ್ರಧಾನ ಕಾರ್ಯ ದರ್ಶಿ, ಸಮಾಜ ಸೇವಕ, ಶ್ರೀ ಭದ್ರಕಾಳಿ ಮಂದಿರದ ಅಧ್ಯಕ್ಷ ಹೊಸ ಬೆಟ್ಟು ವಿಶ್ವನಾಥ ಡಿ. ಮೆಂಡನ್ ಇವರ ಸೇವಾರ್ಥಕವಾಗಿ ನಡೆಯಿತು.
ಇದನ್ನೂ ಓದಿ:ಮೆಟ್ರೋ ನಗರ: ದಾಖಲೆ ಮಟ್ಟದತ್ತ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ
ಧಾರ್ಮಿಕ ಕಾರ್ಯಕ್ರಮದಲ್ಲಿ ಸ್ವಾಮಿ ಶರಣಂ ಅಯ್ಯಪ್ಪ ಭಕ್ತವೃಂದ ಚಾರಿ ಟೆಬಲ್ ಟ್ರಸ್ಟ್‌ನ ಗೌರವಾಧ್ಯಕ್ಷ ಶಿವಾನಂದ ಶೆಟ್ಟಿ, ಅಧ್ಯಕ್ಷ ಸಚಿನ್ ಕೋಟ್ಯಾನ್, ಕಾರ್ಯದರ್ಶಿ ಸುಧೀರ್ ಪುತ್ರನ್, ಜತೆ ಕಾರ್ಯದರ್ಶಿ ವಿವೇಕಾ ನಂದ ಹೆಗ್ಡೆ, ಕೋಶಾಧಿಕಾರಿ ಸುಂದರ್ ಶೆಟ್ಟಿ, ಜತೆ ಕೋಶಾಧಿಕಾರಿ ಕರುಣಾಕರ ಪೂಜಾರಿ ಹಾಗೂ ಸರ್ವಸದಸ್ಯರು, ಮಹಿಳಾ ವಿಭಾಗದ ಸದಸ್ಯೆಯರು ಸಹಕರಿಸಿದರು.
ವಿವಿಧ ಸಂಘ-ಸಂಸ್ಥೆಗಳ ಪದಾಧಿ ಕಾರಿಗಳು, ಪ್ರತಿನಿಧಿಗಳು, ಸ್ಥಳೀಯ ಉದ್ಯಮಿಗಳು, ಸಮಾಜ ಸೇವಕರು, ವಿವಿಧ ಕ್ಷೇತ್ರಗಳ ಗಣ್ಯರು, ದಾನಿಗಳನ್ನು ಶ್ರೀಕ್ಷೇತ್ರದ ಪ್ರಸಾದವನ್ನಿತ್ತು
ಗೌರವಿಸಲಾಯಿತು. ಕೊವಿಡ್ ಲಾಕ್‌ಡೌನ್ ಮಾರ್ಗ ಸೂಚಿಗಳಿಗೆ ಅನುಗುಣವಾಗಿ ಕಾರ್ಯಕ್ರಮವನ್ನು ಸರಳ ರೀತಿ ಯಲ್ಲಿ ಆಯೋಜಿಸಲಾಗಿತ್ತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಪ್ರಸಾದ ಸ್ವೀಕರಿಸಿ ಅಯ್ಯಪ್ಪ ಸ್ವಾಮಿಯ ಕೃಪೆಗೆ ಪಾತ್ರರಾದರು.