Advertisement

26/11 ಸ್ಮರಣೆ: ಇಂದು ಫ‌ಲಕ ಅನಾವರಣ

08:51 AM Nov 26, 2018 | Harsha Rao |

ಮುಂಬಯಿ: 26/11ರ ಮುಂಬಯಿ ಉಗ್ರರ ದಾಳಿಯಲ್ಲಿ ಮಡಿದವರ ಸ್ಮರಣೆಗಾಗಿ ನಿರ್ಮಿಸಲಾದ ಮೊದಲ  
ಹಂತದ ಸ್ಮಾರಕವನ್ನು ಸೋಮವಾರ ಕೊಲಾಬಾ ಪ್ರದೇಶದಲ್ಲಿನ ನಾರಿಮನ್‌ ಹೌಸ್‌ನಲ್ಲಿ ಅನಾವರಣ ಮಾಡಲಾಗುತ್ತದೆ.

Advertisement

ಮೊದಲ ಹಂತದ ಈ ಸ್ಮಾರಕದಲ್ಲಿ ಮುಂಬಯಿ ದಾಳಿಗೆ ಬಲಿಯಾದವರ ಹೆಸರುಗಳನ್ನು ಬರೆದಿರುವ ಬೃಹತ್‌ ಫ‌ಲಕವು ಇರಲಿದೆ. ಶಾಂತಿಯ ಹೊಸ ಅಧ್ಯಾಯ ಎಂದೇ ಇದನ್ನು ಬಿಂಬಿಸಲಾಗಿದ್ದು, ಈ ಪೂರ್ಣ ಕಟ್ಟಡಕ್ಕೆ “ನಾರಿಮನ್‌ ಲೈಟ್‌ ಹೌಸ್‌’ ಎಂದು ನಾಮಕರಣ ಮಾಡಲಾಗಿದೆ. ಈಗಾಗಲೇ ತಾಜ್‌ ಹೊಟೇಲ್‌ ಮತ್ತು ಒಬೆರಾಯ್‌ ಹೊಟೇಲ್‌ನಲ್ಲಿ 26/11ರ ಸ್ಮರಣೆಯ  ಫ‌ಲಕಗಳನ್ನು ಅಳವಡಿಸಲಾಗಿದ್ದು, ನಾರಿಮನ್‌ ಹೌಸ್‌ನಲ್ಲಿ ಮೃತಪಟ್ಟವರ ನೆನಪಿಗಾಗಿ ಈ ಸ್ಮಾರಕ ನಿರ್ಮಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next