ಬೆಂಗಳೂರು: ರಾಜ್ಯದಲ್ಲಿ ಸೋಮವಾರ 257 ಮಂದಿಯಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ ಐವರು ಮೃತಪಟ್ಟಿದ್ದಾರೆ. ಮರಣ ಪ್ರಮಾಣ ಶೇ.0.63ಯಿಂದ ಶೇ.1.94ಕ್ಕೆ ಏರಿಕೆಯಾಗಿದೆ.
ಬೆಂಗಳೂರು 131,ತುಮಕೂರು 23,ಹಾಸನ 21, ಮೈಸೂರು 15,ಕೊಡಗು 14,ಧಾರವಾಡ ಹಾಗೂ ಹಾಸನದಲ್ಲಿ ತಲಾ 11ಮಂದಿಗೆ ಸೋಂಕು ತಗುಲಿದೆ.
ಉಳಿದಂತೆ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಚಾಮರಾಜ ನಗರ, ಚಿಕ್ಕಮಗಳೂರು, ದಾವಣಗೆರೆ, ಕೋಲಾರ, ಶಿವಮೊಗ್ಗ, ಉಡುಪಿ, ಉತ್ತರಕನ್ನಡ ಜಿಲ್ಲೆಗಳಲ್ಲಿ ಬೆರಳೆಣಿಕೆ ಪ್ರಕರಣಗಳು ದಾಖಲಾಗಿವೆ. ಉಳಿದಂತೆ ಯಾದಗಿರಿ, ವಿಜಯಪುರ, ರಾಮನಗರ ಮಂಡ್ಯ, ಕೊಪ್ಪಳ, ಕಲಬುರಗಿ, ಹಾವೇರಿ, ಗದಗ, ಚಿತ್ರದುರ್ಗ, ಬೀದರ್, ಚಿಕ್ಕಬಳ್ಳಾಪುರ, ಬಾಗಲಕೋಟೆ ಜಿಲ್ಲೆಯಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಸಂಸದೆಯರೊಂದಿಗಿನ ಟ್ವೀಟ್ ವೈರಲ್: ಶಶಿ ತರೂರ್ ಕ್ಷಮೆ ಕೇಳಿದ್ದೇಕೆ ?
ಅನಾರೋಗ್ಯದಿಂದ ಬಳಲುತ್ತಿರುವ ಬೆಂಗಳೂರು ನಗರ 2, ಕೋಲಾರ 2, ತುಮಕೂರು ಹಾಗೂ ಉತ್ತರಕನ್ನಡ ಜಿಲ್ಲೆಯಲ್ಲಿ ತಲಾ ಒಬ್ಬರು ಸೇರಿದಂತೆ ಒಟ್ಟು 5 ಮಂದಿ ಮೃತಪಟ್ಟಿದ್ದಾರೆ. ರಾಜ್ಯಾದ್ಯಂತ ಒಟ್ಟು 6878 ಸಕ್ರಿಯ ಪ್ರಕರಣಗಳಿವೆ. ಸೋಂಕಿನ ಪ್ರಮಾಣ ಶೇ.0.40ನಿಂದ ಶೇ.0.45ಕ್ಕೆ ಏರಿಕೆಯಾಗಿದೆ.
ವಿಮಾನ ನಿಲ್ದಾಣದಲ್ಲಿ ಸೋಮವಾರ 10,066 ಮಂದಿಯನ್ನು ಸ್ಕ್ರೀನಿಂಗ್ ಒಳಪಡಿಸಲಾಗಿದೆ. ಅವರಲ್ಲಿ 1,554 ಮಂದಿ ಬ್ರಿಟನ್‌ನಿಂದ ಹಿಂದಿರುಗಿದ ಪ್ರಯಾಣಿಕರು ಇದ್ದಾರೆ.