Advertisement

2500 Cops: ಗ್ವಾಲಿಯರ್‌ ಟಿ20 ಪಂದ್ಯಕ್ಕೆ 2,500 ಪೊಲೀಸರ ನಿಯೋಜನೆ

10:52 PM Oct 04, 2024 | Team Udayavani |

ಗ್ವಾಲಿಯರ್‌: ಸುದೀರ್ಘ‌ 14 ವರ್ಷಗಳ ಬಳಿಕ ಗ್ವಾಲಿಯರ್‌ನಲ್ಲಿ ಮೊದಲ ಅಂತಾರಾಷ್ಟ್ರೀಯ ಪಂದ್ಯ ನಡೆಯಲಿದೆ. ರವಿವಾರ ಇಲ್ಲಿ ಭಾರತ-ಬಾಂಗ್ಲಾದೇಶ ಮೊದಲ ಟಿ20 ಪಂದ್ಯವಾಡಲು ಸಜ್ಜಾಗಿವೆ. ಆದರೆ ಹಿಂದೂ ಪರ ಸಂಘಟನೆಗಳು ಈ ಭಾಗದಲ್ಲಿ ಪ್ರತಿಭಟನೆ ನಡೆಸುತ್ತಿರುರುವುದರಿಂದ, ಭದ್ರತೆಗಾಗಿ 2,500 ಪೊಲೀಸರನ್ನು ನಿಯೋಜಿಸಲಾಗಿದೆ.

Advertisement

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿ, ಹಿಂದೂಪರ ಸಂಘಟನೆಗಳು ಭಾರತ-ಬಾಂಗ್ಲಾ ಪಂದ್ಯವನ್ನು ವಿರೋಧಿಸಿ ಗ್ವಾಲಿಯರ್‌ ಬಂದ್‌ಗೆ ಕರೆ ನೀಡಿವೆ. ಹೀಗಾಗಿ ಗ್ವಾಲಿಯರ್‌ ಸ್ಟೇಡಿಯಂ ಸುತ್ತ ಭಾರೀ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ.

ಅಂದಹಾಗೆ, ಗ್ವಾಲಿಯರ್‌ನಲ್ಲಿ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ನಡೆದದ್ದು 2010ರಲ್ಲಿ. ಅಂದು ಭಾರತ-ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಮುಖಾಮುಖೀಯಲ್ಲಿ ಸಚಿನ್‌ ತೆಂಡುಲ್ಕರ್‌ ದ್ವಿಶತಕ ಬಾರಿಸಿದ್ದರು. ಈ ಮೂಲಕ ಏಕದಿನದಲ್ಲಿ ದ್ವಿಶತಕ ಬಾರಿಸಿದ ಮೊದಲಿಗರಾಗಿ ಮೂಡಿಬಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next