Advertisement

25 ಲಕ್ಷ ರೂ. ಮೌಲ್ಯದ ಶ್ರೀಗಂಧ ಸಾಗಾಟ; ನಾಲ್ವರ ಸೆರೆ  

05:20 PM Jun 18, 2021 | Team Udayavani |

ಧಾರವಾಡ: ಅಕ್ರಮವಾಗಿ ಅಂದಾಜು 25 ಲಕ್ಷ ಮೌಲ್ಯದ ಶ್ರೀಗಂಧ ಸಾಗಾಟದಲ್ಲಿ ತೊಡಗಿದ್ದ ನಾಲ್ವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಾರು, ಬೈಕ್‌ ಸಮೇತ ಬಂಧಿಸಿದ ಘಟನೆ ನಗರ ಹೊರವಲಯದ ನುಗ್ಗಿಕೇರಿ ಬಳಿ ಬುಧವಾರ ನಡೆದಿದೆ.

Advertisement

ಚಿಕ್ಕಮಗಳೂರಿನ ಮೂಡಗೆರೆ ತಾಲೂಕಿನ ಕರಗದ್ದೆಯ ಗುರುಮೂರ್ತಿ (40), ಗದಗ ಜಿಲ್ಲೆ ರೋಣ ತಾಲೂಕಿನ ಮುಗಳಿ ಗ್ರಾಮದ ಮುದಕಪ್ಪ ಪಡೆಪ್ಪ ಪೂಜೇರಿ (36), ಹಿರಿಯಪ್ಪ ಕರಿಯಪ್ಪ ಹಿರೇಮನಿ, ಹಾವೇರಿಯ ಶಿಗ್ಗಾವಿ ತಾಲೂಕಿನ ಹೊಸೂರಿನ ಭೀಮಪ್ಪ ಯಲ್ಲಪ್ಪ ಸುಣಗಾರ (56) ಬಂಧಿತರು. ಇವರ ಜತೆಗಿದ್ದ ಶೀಗಿಗಟ್ಟಿ ಗ್ರಾಮದ ಮೂವರು ಪರಾರಿ ಆಗಿದ್ದು, ಶೋಧ ಕಾರ್ಯ ಮುಂದುವರಿದಿದೆ. ಬಂಧಿತರಿಂದ ಅಂದಾಜು 25 ಲಕ್ಷ ರೂ. ಮೌಲ್ಯದ 250.380 ಕೆಜಿ ಶ್ರೀಗಂಧವನ್ನು ವಶಪಡಿಸಿಕೊಳ್ಳಲಾಗಿದ್ದು, ಸಾಗಾಟಕ್ಕೆ ಬಳಸಿದ ಮಾರುತಿ ಆಲ್ಟೋ ಕಾರು, ಬೈಕ್‌ ಜಪ್ತಿ ಮಾಡಲಾಗಿದೆ. ಎಲ್ಲ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಆಂಧ್ರದಿಂದ ದುಬೈಗೆ: ಮಾರುತಿ ಆಲ್ಟೋ ಕಾರಿನಲ್ಲಿ ಶೀಗಿಗಟ್ಟಿಯಲ್ಲಿ ಒಂದಿಷ್ಟು ಶ್ರೀಗಂಧ, ರೋಣದಲ್ಲಿ 100 ಕೆಜಿ ಶ್ರೀಗಂಧ ಪಡೆದು ಆಂಧ್ರಪ್ರದೇಶದ ಕಾರ್ಖಾನೆಯೊಂದಕ್ಕೆ ಅಕ್ರಮವಾಗಿ ಸಾಗಾಟ ಮಾಡಲು ಆರೋಪಿಗಳು ಹೊರಟಿದ್ದರು. ಈ ವಾಹನಕ್ಕೆ ಹಾವೇರಿಯ ಶಿಗ್ಗಾವಿ ತಾಲೂಕಿನ ಹೊಸೂರಿನ ಭೀಮಪ್ಪ ಶ್ರೀಗಂಧವನ್ನು ಬೈಕ್‌ ಮೇಲೆ ತರುವಾಗ ಸಿಕ್ಕಿಬಿದ್ದಿದ್ದಾನೆ. ಆಂಧ್ರದ ಕಾರ್ಖಾನೆ ಮೂಲಕ ಶ್ರೀಗಂಧ ತೈಲದ ರೂಪದಲ್ಲಿ ದುಬೈ ದೇಶಕ್ಕೆ ರಫ್ತು ಆಗಿರುವುದು ದಾಳಿ ವೇಳೆ ತಿಳಿದು ಬಂದಿದೆ.

ಧಾರವಾಡ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ, ಧಾರವಾಡ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್‌ ಕ್ಷೀರಸಾಗರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಕೆಂಚಪ್ಪನವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಎಂ.ಎಂ. ತಲ್ಲೂರ, ಮಣಕೂರ, ಅರಣ್ಯ ರಕ್ಷಕರಾದ ವಿಠuಲ ಜೋನಿ, ರಘು ಕುರಿಯವರ, ರಂಗಪ್ಪ ಕೋಳಿ, ಕಲ್ಲಪ್ಪ ಕೇಂಗಾರ, ಚಾಂದಬಾಷಾ ಮುಲ್ಲಾ, ಬಸಪ್ಪ ಕರಡಿ, ನವೀನ ಕ್ಯಾರಕಟ್ಟಿ, ಗವಿಸ್ವಾಮಿ, ಶರೂನ್‌ ಎಸ್‌. ಹಾಗೂ ಧಾರವಾಡ ವಲಯದ ಸಿಬ್ಬಂದಿ ದಾಳಿಯಲ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next