Advertisement

ಕೆಜಿಎಫ್‌ ಎಪಿಎಂಸಿ ಮಾರುಕಟ್ಟೆಗೆ 25 ಎಕರೆ ಗುರುತು

05:03 PM Dec 18, 2022 | Team Udayavani |

ಕೋಲಾರ: ಕೆಜಿಎಫ್‌ ತಾಲೂಕಿಗೆ ಪ್ರತ್ಯೇಕವಾದ ಹಾಗೂ ಜಿಲ್ಲೆಯಲ್ಲೆ ಅತ್ಯಂತ ಸುಸಜ್ಜಿತ ಕೃಷಿ ಉತ್ಪನ್ನ ಮಾರುಕಟ್ಟೆ ಮಂಜೂರು ಮಾಡಿಸಿಕೊಳ್ಳುವಲ್ಲಿ ಸಫಲರಾಗಿರುವ ಶಾಸಕಿ ರೂಪಕಲಾ ಶಶಿಧರ್‌, ಇದೀಗ ನೂತನ ಎಪಿಎಂಸಿ ಮಾರುಕಟ್ಟೆ ಪ್ರಾಂಗಣ ನಿರ್ಮಾಣಕ್ಕೆ ಬೇತಮಂಗಲ-ವಿಕೋಟೆ ಮುಖ್ಯ ರಸ್ತೆಯಲ್ಲಿ ಗುರುತಿಸಿರುವ 25 ಎಕರೆ ಜಮೀನಿನ ಗಡಿ ಗುರುತಿಸುವ ಕಾರ್ಯವನ್ನು ಯಶಸ್ವಿಯಾಗಿ ನಡೆಸಿದರು.

Advertisement

ಶನಿವಾರ ಶಾಸಕಿ ರೂಪಕಲಾ ನೇತೃತ್ವದಲ್ಲಿ ಬೇತಮಂಗಲ ವಿ.ಕೋಟೆ ಮುಖ್ಯ ರಸ್ತೆಯ ಕದಿರಿಗಾನಕುಪ್ಪ ಗ್ರಾಮದ ಸ.ನಂ.3 ರಲ್ಲಿ 20.00 ಎಕರೆ ಮತ್ತು ಎನ್‌,ಜಿ.ಹುಲ್ಕೂರು ಗ್ರಾಮದ ಸ.ನಂ.71 ರಲ್ಲಿ 5 ಎಕರೆ ಒಟ್ಟು 25 ಎಕರೆ ಜಮೀನು ಮಂಜೂರು ಮಾಡಿಸಿರುವ ಶಾಸಕರು ಸ್ವಾಧೀನದಲ್ಲಿದ್ದ ಕೆಲವರ ಮನವೊಲಿಸಿ ಗಡಿ ಗುರುತಿಸುವ ಕಾರ್ಯ ಮುಗಿಸಿ ಬಂಗಾರಪೇಟೆ ಎಪಿಎಂಸಿ ಅಧಿ ಕಾರಿಗಳಿಗೆ ತಾಲೂಕು ಆಡಳಿತದಿಂದ ಹಸ್ತಾಂತರಿಸಿದರು.

ಕೆಜಿಎಫ್‌ ಮಾರುಕಟ್ಟೆ ಜಿಲ್ಲೆಗೆ ಮಾದರಿ: ಮಾರುಕಟ್ಟೆ ಜಿಲ್ಲೆಯಲ್ಲೇ ಅತ್ಯಂತ ಸುಸಜ್ಜಿತ ಮಾರುಕಟ್ಟೆಯಾ ಗಲಿದೆ. ರಾಜ್ಯ ಸರ್ಕಾರದಿಂದ ಎಪಿಎಂಸಿ ಮಾರುಕಟ್ಟೆ ಸಮೀಪವೇ ಚೆನ್ನೈ ಕಾರಿಡಾರ್‌ಗೆ ಹೊಂದಿಕೊಂಡಂತೆ ಟ್ರಕ್‌ ಟರ್ಮಿನಲ್‌ ನಿರ್ಮಿಸಲು 40 ಎಕರೆ ಜಮೀ ನನ್ನು ಈಗಾಗಲೇ ಜಿಲ್ಲಾಧಿಕಾರಿಗಳು ಗುರುತಿಸಿದ್ದಾರೆ. ಇದರಿಂದಾಗಿ ಕೆಜಿಎಫ್‌ ಎಪಿಎಂಸಿ ಮಾರುಕಟ್ಟೆ ತರಕಾರಿ,ಕೃಷಿ ಉತ್ಪನ್ನಗಳ ಸಾಗಾಣೆ, ಮಾರುಕಟ್ಟೆ ವಿಸ್ತರಣೆಗೆ ಇಡೀ ಜಿಲ್ಲೆಯಲ್ಲೇ ಅತ್ಯಂತ ಅನುಕೂಲಕರ ಪ್ರದೇಶದಲ್ಲಿದೆ ಎಂದರು.

ಸ್ವಾಧೀನದಾರರಿಂದ ಇದ್ದ ಅಡ್ಡಿ  ನಿವಾರಣೆ: ಸದರಿ ಎಪಿಎಂಸಿ ಮಾರುಕಟ್ಟೆ ಜಾಗದಲ್ಲಿ ಕೆಲವು ರೈತರು, ದರಖಾಸ್ತು ಮೂಲಕ ಜಮೀನಿಗೆ ಅರ್ಜಿ ಹಾಕಿ ಕೊಂಡಿದ್ದು, ಮಾರುಕಟ್ಟೆಗೆ ಜಾಗ ನೀಡುವುದರಿಂದ ತಮ್ಮ ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗಲಿದೆ ಎಂದು ಅಳಲು ತೋಡಿಕೊಂಡಿದ್ದರು. ಇದನ್ನರಿತ ಶಾಸಕರು, ಸ್ಥಳದಲ್ಲೇ ಇದ್ದು, ಸದರಿ ರೈತರ ಮನವೊಲಿಸಿ, ಬೇರೊಂದು ಕಡೆ ನಿಮಗೆ ಪರ್ಯಾಯವಾಗಿ ಅಗತ್ಯ ವಿರುವ ಕೃಷಿ ಭೂಮಿ ಒದಗಿಸುವ ಭರವಸೆ ನೀಡಿ ಮಾರುಕಟ್ಟೆ ಜಾಗದ ಗಡಿ ಗುರುತಿಸುವ ಕಾರ್ಯ ಸುಗಮವಾಗಿ ನಡೆಯುವಂತೆ ನೋಡಿಕೊಂಡರು. ಆದಷ್ಟು ಶೀಘ್ರವಾಗಿ ಕಾಂಪೌಂಡ್‌ ನಿರ್ಮಾಣ ಮಾಡಲು ಅಥವಾ ತಂತಿ ಬೇಲಿ ಅಳವಡಿಸಲು ಎಪಿಎಂಸಿ ಅಧಿಕಾರಿಗಳಿಗೆ ಸೂಚಿಸಿದ ಶಾಸಕರು, ಸದರಿ ಜಮೀನಿನಲ್ಲಿ ಯಾವುದೇ ಅನಧಿಕೃತ ಚಟುವಟಿಕೆಗಳು ನಡೆಯದಂತೆ ನೋಡಿಕೊಳ್ಳಲು ಸ್ಥಳೀಯರಲ್ಲಿ ಮನವಿ ಮಾಡಿದರು.

ತಹಶೀಲ್ದಾರ್‌ ಸುಜಾತಾ, ಎಪಿಎಂಸಿ ಮಾಜಿ ಅಧ್ಯಕ್ಷ ವಿಜಯರಾಘವರೆಡ್ಡಿ, ಮಾಜಿ ನಿರ್ದೇಶಕರಾದ ರಾಮಚಂದ್ರ, ಸುಂದರಪಾಳ್ಯ ಗ್ರಾಪಂ ಅಧ್ಯಕ್ಷ ರಾಮ್‌ ಬಾಬು , ವೆಂಗಸಂದ್ರ ಗ್ರಾಪಂ ಅಧ್ಯಕ್ಷ ಶಂಕರ್‌, ಪಿಎಲ್‌ಡಿ ಬ್ಯಾಂಕ್‌ ನಿರ್ದೇಶಕ ಪ್ರಭಾಕರ್‌, ರಾಜಸ್ವ ನಿರೀಕ್ಷಕಿ ಪ್ರೇಮ, ಪಿಡಿಒ ಚಂದ್ರಕಲಾ ಗ್ರಾಮ ಲೆಕ್ಕಾ ಧಿಕಾರಿ ಮೀನ, ಭೂಮಾಪಕರಾದ ಮೌಲಾಖಾನ್‌, ಮುಖಂಡ ಕೃಷ್ಣಪ್ಪ, ಚಂದ್ರಕಾಂತ್‌, ಜಯರಾಮರೆಡ್ಡಿ, ಅಫ್ರೋಜ್‌, ನಾರಾಯಣಸ್ವಾಮಿ, ಸೀನಪ್ಪ, ಅಪ್ಪಾಜಿ ಗೌಡ,ರಾಜೇಂದ್ರ, ಸುರೇಂದ್ರಗೌಡ, ವೆಂಕಟರಾಮ್‌, ಕೃಷ್ಣಮೂರ್ತಿ, ರಿಝ್ವಾನ್‌, ಶ್ರೀನಿವಾಸನಾಯುಡು, ಮುನಿರಾಜು, ಮುರಳಿ, ರಮೇಶ್‌ಬಾಬು, ಕದಿರೆಪ್ಪ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next