ಬೆಂಗಳೂರು: ಕರ್ನಾಟಕದಲ್ಲಿ ಇಂದು ಶನಿವಾರ (ನವೆಂಬರ್ 13 ) 245 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, ಮೂರು ಸಾವುಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಒಟ್ಟು ಸೋಂಕಿತರ ಸಂಖ್ಯೆಯನ್ನು 29,91,614 ಕ್ಕೆ ಮತ್ತು ಸಾವಿನ ಸಂಖ್ಯೆ 38,143 ಕ್ಕೆ ತಲುಪಿದೆ ಎಂದು ಇಲಾಖೆ ತಿಳಿಸಿದೆ.
251 ಜನರನ್ನು ಇಂದು ಡಿಸ್ಚಾರ್ಜ್ ಮಾಡಲಾಗಿದ್ದು, ಒಟ್ಟು ಚೇತರಿಸಿಕೊಂಡವರ ಸಂಖ್ಯೆ 29,45,415 ಕ್ಕೆ ತಲುಪಿದೆ ಎಂದು ಹೇಳಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 8,027 ಇದೆ.
ಬೆಂಗಳೂರು ನಗರವು 154 ಹೊಸ ಪ್ರಕರಣಗಳನ್ನು ಕಂಡಿದ್ದು,ಇಂದು ಮೂರು ಸಾವುಗಳು ಸಂಭವಿಸಿವೆ.
ಮೈಸೂರು ಮತ್ತು ಉತ್ತರ ಕನ್ನಡದಲ್ಲಿ ತಲಾ 13 ಮತ್ತು ದಕ್ಷಿಣ ಕನ್ನಡದಲ್ಲಿ 12 ಹೊಸ ಪ್ರಕರಣಗಳು ವರದಿಯಾಗಿದ್ದು, 13 ಜಿಲ್ಲೆಗಳು ಶೂನ್ಯ ಸೋಂಕನ್ನು ವರದಿ ಮಾಡಿದರೆ, 15 ಜಿಲ್ಲೆಗಳು ಒಂದೇ ಅಂಕಿಯಲ್ಲಿ ಪ್ರಕರಣಗಳನ್ನು ದಾಖಲಾ ಗಿವೆ.
ದಿನದ ಪಾಸಿಟಿವಿಟಿ ರೇಟ್ 0.24 ಪ್ರತಿಶತ ಮತ್ತು ಪ್ರಕರಣದ ಸಾವಿನ ಪ್ರಮಾಣವು 1.22 ಶೇಕಡಾ ಇದೆ.
ರಾಜ್ಯದಲ್ಲಿ ಶನಿವಾರ ಒಟ್ಟು 1,01,119 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, 82,979 ಆರ್‌ಟಿ-ಪಿಸಿಆರ್ ಪರೀಕ್ಷೆಗಳು ಸೇರಿವೆ.ಇಲ್ಲಿಯವರೆಗೆ ಪರೀಕ್ಷಿಸಲಾದ ಮಾದರಿಗಳ ಸಂಚಿತ ಸಂಖ್ಯೆ 5.20 ಕೋಟಿಗೆ ಏರಿದೆ.
ರಾಜ್ಯದಲ್ಲಿ ಇದುವರೆಗೆ 6.80 ಕೋಟಿ ಡೋಸ್ ಲಸಿಕೆ ಹಾಕಲಾಗಿದ್ದು, ಇಂದು 1,17,590 ಜನರಿಗೆ ಲಸಿಕೆ ಹಾಕಲಾಗಿದೆ ಎಂದು ಆರೋಗ್ಯ ಇಲಾಖೆಯ ಬುಲೆಟಿನ್ ತಿಳಿಸಿದೆ.