ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆಯಲ್ಲಿ ಇಂದು ಭಾರಿ ಹೆಚ್ಚಳವಾಗಿದೆ. ಇಂದು ಒಂದೇ ದಿನ ಜಿಲ್ಲೆಯಲ್ಲಿ 245 ಜನರಿಗೆ ಕೋವಿಡ್ ಸೋಂಕು ದೃಢವಾಗಿದ್ದು, ಐವರು ಸೋಂಕಿತರು ಸಾವನ್ನಪ್ಪಿದ್ದಾರೆ.
ಇಂದಿನ ಸೋಂಕಿತರಲ್ಲಿ 70 ಮಂದಿಗೆ ರೋಗಲಕ್ಷಣಗಳಿದ್ದು, ಉಳಿದ 175 ಮಂದಿಗೆ ಯಾವುದೇ ರೋಗಲಕ್ಷಣವಿಲ್ಲದೆ ಸೋಂಕು ದೃಢವಾಗಿದೆ. ಉಡುಪಿ ತಾಲೂಕಿನಲ್ಲಿ 125 ಮಂದಿಗೆ, ಕುಂದಾಪುರ ತಾಲೂಕಿನಲ್ಲಿ 92 ಮಂದಿಗೆ ಮತ್ತು ಕಾರ್ಕಳ ತಾಲೂಕಿನಲ್ಲಿ 25 ಜನರಿಗೆ ಸೋಂಕು ದೃಢವಾಗಿದೆ. ಅನ್ಯ ಜಿಲ್ಲೆಗಳ ಮೂವರಲ್ಲಿ ಸೋಂಕು ದೃಢವಾಗಿದೆ.
ಜಿಲ್ಲೆಯಲ್ಲಿಂದು ಐವರು ಸೋಂಕಿತರು ಸಾವನ್ನಪ್ಪಿದ್ದಾರೆ. ಉಡುಪಿ ತಾಲೂಕಿನ 78 ಮಹಿಳೆ, ಕಾರ್ಕಳದ 49 ವರ್ಷದ ಪುರುಷ ಮತ್ತು ಕುಂದಾಪುರದ ಮೂವರು ವೃದ್ಧರು ಸೋಂಕಿನಿಂದ ಮರಣ ಹೊಂದಿದ್ದಾರೆ. ಇದಿರಂದ ಜಿಲ್ಲೆಯ ಒಟ್ಟು ಸೋಂಕಿತರ ಸಾವಿನ ಸಂಖ್ಯೆ 55ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 5605ಕ್ಕೆ ಏರಿಕೆಯಾಗಿದೆ. ಇದರಲ್ಲಿ 3258 ಮಂದಿ ಗುಣಮುಖರಾಗಿದ್ದಾರೆ. 55 ಮಂದಿ ಸಾವನ್ನಪ್ಪಿದ್ದು, 2292 ಸಕ್ರಿಯ ಪ್ರಕರಣಗಳಿವೆ.
ಜಿಲ್ಲೆಯಲ್ಲಿ ಇಂದು 1357 ಗಂಟಲು ದ್ರವ ಮಾದರಿ ಸಂಗ್ರಹಿಸಲಾಗಿದೆ. ಇಂದು 1602 ಮಾದರಿಯ ಪರೀಕ್ಷೆ ನಡೆಸಿದ್ದು, ಅದರಲ್ಲಿ 1357 ಮಾದರಿ ಪರೀಕ್ಷೆ ಫಲಿತಾಂಶ ನೆಗೆಟಿವ್ ಆಗಿದ್ದರೆ, 245 ಮಾದರಿ ಪಾಸಿಟಿವ್ ಆಗಿದೆ. ಇನ್ನೂ 1203 ಮಾದರಿ ಪರೀಕ್ಷಾ ವರದಿ ಬಾಕಿಯಿದೆ.