Advertisement

ದತ್ತು ಪಡೆದುಕೊಳ್ಳುವ ಹೊತ್ತು: 2019ರಲ್ಲಿ ಅಮೆರಿಕದಿಂದ 241 ಭಾರತೀಯ ಮಕ್ಕಳ ದತ್ತು ಸ್ವೀಕಾರ

08:22 AM May 09, 2020 | Hari Prasad |

ವಾಷಿಂಗ್ಟನ್‌:  ಅಮೆರಿಕದ ಕುಟುಂಬಗಳು 241 ಭಾರತೀಯ ಮಕ್ಕಳನ್ನು ಕಳೆದ ವರ್ಷ ದತ್ತು ಪಡೆದಿವೆ. ಒಟ್ಟಾರೆ 2019ರಲ್ಲಿ ಅಮೆರಿಕದ ಪ್ರಜೆಗಳು 294 ವಿದೇಶಿ ಮಕ್ಕಳನ್ನು ದತ್ತು ಸ್ವೀಕರಿಸಿದ್ದಾರೆ. ವಿವಿಧ ಏಳು ದೇಶಗಳಿಂದ 56 ಮಕ್ಕಳನ್ನು ದತ್ತು ಪಡೆಯಲಾಗಿದೆ.

Advertisement

ದೇಶೀಯವಾಗಿ ಮಕ್ಕಳನ್ನು ದತ್ತು ಪಡೆಯುವ ಪ್ರಮಾಣ ಕಡಿಮೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಶ್ವಾದ್ಯಂತ ಕೋವಿಡ್ ವೈರಸ್ ಹರಡಿರುವುದರಿಂದ ದತ್ತು ಸ್ವೀಕಾರದ ಮೇಲೆ ಪರಿಣಾಮ ಬೀರುವುದರ ಕುರಿತು ಪ್ರತಿಕ್ರಿಯಿಸಿರುವ ಅವರು, ದತ್ತು ಸ್ವೀಕಾರ ಸ್ಥಗಿತವಾಗುತ್ತದೆ ಎಂದು ಹೇಳಲಾಗದು. ಸದ್ಯ ವೀಸಾ ನೋಂದಣಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ. ಆದ್ಯತೆ ಮೇರೆಗೆ ಮಕ್ಕಳನ್ನು ದತ್ತು ಪಡೆಯುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಬೇರೆ ದೇಶಗಳಿಂದ ಅಮೆರಿಕಾಕ್ಕೆ ಮಕ್ಕಳನ್ನು ದತ್ತು ನೀಡುವ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಉಕ್ರೇನ್ ದೇಶದ 50, ಲೈಬೀರಿಯಾದ 21, ಹಂಗೇರಿಯ 17 ಮತ್ತು ಕೊಲಂಬಿಯಾ ದೇಶದ 15 ಮಕ್ಕಳನ್ನು ಅಮೆರಿಕಾದಲ್ಲಿ ವಿವಿಧ ಕುಟುಂಬಗಳು ದತ್ತು ಪಡೆದುಕೊಂಡಿವೆ ಎಂಬ ಮಾಹಿತಿಯೂ ಲಭ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next