Advertisement

Video: ಸಮುದ್ರ ಬದಿ ಧ್ಯಾನ ಮಾಡುತ್ತಿದ್ದ ವೇಳೆ ಅಲೆಗಳ ಹೊಡೆತಕ್ಕೆ ಸಿಲುಕಿ ಪ್ರಾಣತೆತ್ತ ನಟಿ

05:19 PM Dec 02, 2024 | Team Udayavani |

ನವದೆಹಲಿ: ಅಲೆಗಳ ಅಬ್ಬರಕ್ಕೆ ನಟಿಯೊಬ್ಬಳು ಕೊಚ್ಚಿಕೊಂಡು ಹೋಗಿ ಪ್ರಾಣವನ್ನೇ ಕಳೆದುಕೊಂಡಿರುವ ಘಟನೆ ವರದಿಯಾಗಿದೆ.

Advertisement

ರಷ್ಯಾ ಮೂಲದ ನಟಿ ಕಮಿಲ್ಲಾ ಬೆಲ್ಯಾಟ್ಸ್ಕಾಯಾ (24) ಮೃತಪಟ್ಟ ನಟಿ ಎಂದು ಗುರುತಿಸಲಾಗಿದೆ. ಥೈಲ್ಯಾಂಡ್‌ನ ಕೊಹ್ ಸಮುಯಿ ದ್ವೀಪದಲ್ಲಿ ಈ ಘಟನೆ ನಡೆದಿರುವುದಾಗಿ ವರದಿ ತಿಳಿಸಿದೆ.

ಪ್ರವಾಸಕ್ಕೆ ಬಂದಿದ್ದ ನಟಿ ಕಮಿಲ್ಲಾ ದ್ವೀಪದಲ್ಲಿ ಸಮುದ್ರಕ್ಕೆ ಸಮೀಪವಿರುವ ಬಂಡೆಗಳ ಮೇಲೆ ತನ್ನ ಯೋಗ ಮ್ಯಾಟ್ ಇಟ್ಟು ಧಾನ್ಯ ಮಾಡುತ್ತಿದ್ದರು. ಈ ವೇಳೆ ದೈತ್ಯ ಅಲೆಯೊಂದು ಬಂಡೆಗೆ ಅಪ್ಪಳಿಸಿದೆ. ಪರಿಣಾಮ ಕ್ಷಣಮಾತ್ರದಲ್ಲಿ ಯೋಗದ ಮ್ಯಾಟ್‌ ಸಹಿತ ಕಮಿಲ್ಲಾ ಅವರನ್ನು ಅಲೆ ಸಮುದ್ರಕ್ಕೆ ಎಳೆದುಕೊಂಡು ಹೋಗಿದೆ. ಸಮುದ್ರದಲ್ಲಿ ಬಿದ್ದ ಕಮಿಲ್ಲಾ ಸಾವು ಬದುಕಿನ ನಡುವೆ ಹೋರಾಡುವ ದೃಶ್ಯ ಪ್ರವಾಸಿಗರ ಮೊಬೈಲ್‌ನಲ್ಲಿ ಸೆರೆಯಾಗಿದೆ.

ನಟಿಯನ್ನು ರಕ್ಷಿಸಲು ವ್ಯಕ್ತಿಯೊಬ್ಬ ಸಮುದ್ರಕ್ಕೆ ಹಾರಿದ್ದಾನೆ ಆದರೆ ಅತ ಇದುವರೆಗೆ ಪತ್ತೆಯಾಗಿಲ್ಲ ಎಂದು ವರದಿಯಾಗಿದೆ.

Advertisement

ಕಮಿಲ್ಲಾ ಅವರ ಮೃತದೇಹ ಅವಳು ಧ್ಯಾನ ಮಾಡುತ್ತಿದ್ದ ಬಂಡೆಯಿಂದ 3-4 ಕಿಲೋಮೀಟರ್ ದೂರದಲ್ಲಿ ಪತ್ತೆಯಾಗಿದೆ ಎಂದು ವರದಿಯಾಗಿದೆ.

ಕಮ್ಮಿಲ್ಲಾ ಗೆಳೆಯನೊಂದಿಗೆ ಥಾಯ್ಲೆಂಡ್‌ಗೆ ಪ್ರವಾಸಕ್ಕೆ ಬಂದಿದ್ದರು ಎನ್ನಲಾಗಿದೆ. ಸಾವಿಗೂ ಮುನ್ನ ಕೆಮ್ಮಿಲ್ಲಾ ಬಂಡೆಗಳ ಮೇಲೆ ಕೂತು ಧ್ಯಾನ ಮಾಡುತ್ತಿರುವ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದರು.

“ಭೂಮಿಯ ಮೇಲಿನ ಅತ್ಯುತ್ತಮ ಸ್ಥಳ” ಎಂದು ಫೋಟೋ ಕೆಳಗೆ ಕ್ಯಾಪ್ಷನ್‌ ಹಾಕಿಕೊಂಡಿದ್ದರು. ಸದ್ಯ ನಟಿಯ ಕೊನೆ ಕ್ಷಣದ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next