Advertisement

ಒಂದೇ ದಿನದಲ್ಲಿ 230ಕ್ಕೇರಿದ ಪ್ರಶಸ್ತಿ ಪುರಸ್ಕೃತರ ಸಂಖ್ಯೆ

12:33 PM Apr 12, 2017 | |

ಬೆಂಗಳೂರು: ಬಿಬಿಎಂಪಿ ಕೇಂದ್ರ ಕಚೇರಿ ಆವರಣದ ಗಾಜಿನ ಮನೆಯಲ್ಲಿ ಮಂಗಳವಾರ ನಡೆದ ಕೆಂಪೇಗೌಡ ಪ್ರಶಸ್ತಿ ಸಮಾರಂಭ ಗೊಂದಲ ಹಾಗೂ ಗದ್ದಲದ ಗೂಡಾಗಿತ್ತು. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 158 ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ ಪ್ರಕಟಿಸಲಾಗಿತ್ತಾದರೂ ಕೊನೆ ಗಳಿಗೆಯಲ್ಲಿ  ಪುರಸ್ಕೃತ ಪಟ್ಟಿ ಬೆಳೆಯುತ್ತಾ ಹೋಗಿದ್ದರಿಂದ ಸಮಾರಂಭದಲ್ಲಿ ಅವ್ಯವಸ್ಥೆ ಉಂಟಾಗಲು ಕಾರಣವಾಯಿತು. 

Advertisement

ಶಾಸಕರು, ಸಚಿವರು ಹಾಗೂ ಪಾಲಿಕೆಯ ಸದಸ್ಯರ ಒತ್ತಡದ ಹಿನ್ನೆಲೆಯಲ್ಲಿ ಪುರಸ್ಕೃತರ ಸಂಖ್ಯೆ 158ರಿಂದ 230 ದಾಟಿತ್ತು. ಪರಿಣಾಮ ವೇದಿಕೆಯಲ್ಲಿ ಎಲ್ಲ ಪುರಸ್ಕೃತರಿಗೆ ಕುಳಿತು ಕೊಳ್ಳಲು ಆಸನ ವ್ಯವಸ್ಥೆ ಕಲ್ಪಿಸುವುದು ಸವಾಲಾ ಗಿತ್ತು. ಜತೆಗೆ ಪ್ರಶಸ್ತಿ ಸ್ವೀಕರಿಸಲು ಬಂದವರಿಗೆ  ಎಲ್ಲಿಗೆ ಹೋಗಬೇಕು? ಎಲ್ಲಿ ಕೂರಬೇಕೆಂಬ ಮಾಹಿತಿ ಇಲ್ಲದೆ ಗೊಂದಲವಾಯಿತು. 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲ ಸುತ್ತಿನಲ್ಲಿ 15 ಮಂದಿಗೆ ಪ್ರಶಸ್ತಿ ಪ್ರದಾನ ಮಾಡಿ ಅನ್ಯ ಕಾರ್ಯದ ನಿಮಿತ್ತ ಕಾರ್ಯಕ್ರಮದಿಂದ ಹೊರಟರು. ನಂತರ, ಪ್ರಶಸ್ತಿ ಪುರಸ್ಕೃತರು ಗಣ್ಯರಿಂದಲೇ ಪ್ರಶಸ್ತಿ ಪಡೆಯಬೇಕು ಆಸೆಯಿಂದ ವೇದಿಕೆಗೆ ಬಂದ ಹಿನ್ನೆಲೆಯಲ್ಲಿ ಗೊಂದಲ ಸೃಷ್ಟಿಯಾಗಿತ್ತು. ಏಕಕಾಲದಲ್ಲಿ 30ಧಿ-40 ಮಂದಿ ಪುರಸ್ಕೃತರು ವೇದಿಕೆಗೆ ಬಂದ ಹಿನ್ನೆಲೆಯಲ್ಲಿ ಪ್ರಶಸ್ತಿ ಯಾರಿಗೆ ನೀಡಬೇಕು ಎಂಬುದು ತಿಳಿಯದೆ ಗಣ್ಯರು ಸಹ ಗಲಿಬಿಲಿಗೊಂಡರು. 

ಮಾಹಿತಿಯಿಲ್ಲ: ಕೆಂಪೇಗೌಡ ಪ್ರಶಸ್ತಿಗೆ ಪುರಸ್ಕೃತರ ಆಯ್ಕೆ ಪ್ರಕ್ರಿಯೆ ಮಂಗಳವಾರ ಸಂಜೆಯವರಿಗೆ ನಡೆದ ಹಿನ್ನೆಲೆಯಲ್ಲಿ ಪ್ರಶಸ್ತಿ ಪಡೆದ ಹಲವರಿಗೆ ತಮಗೆ ಪ್ರಶಸ್ತಿ ಬಂದಿದೆ ಎಂಬ ಮಾಹಿತಿ ಇರಲಿಲ್ಲ. ಜತೆಗೆ ಸೋಮವಾರ ಬಿಬಿಎಂಪಿ ಪ್ರಕಟಿಸಿದ ಪುರಸ್ಕೃತರಿಗೂ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಹ್ವಾನಿಸಲು ಪಾಲಿಕೆ ಯಿಂದ ಕರೆ ಮಾಡಿರಲಿಲ್ಲ ಎನ್ನಲಾಗಿದೆ. 

ಸ್ಮರಣಿಕೆಗಳ ಕೊರತೆ!: ಪುರಸ್ಕೃತರ ಸಂಖ್ಯೆ ಎಷ್ಟಾಗಬಹುದು ಎಂಬ ನಿಖರ ಮಾಹಿತಿ ಪಾಲಿಕೆಯ ಅಧಿಕಾರಿಗಳಿಗೂ ಇರಲಿಲ್ಲ. ಪುರಸ್ಕೃತರಿಗೆ ಕೆಂಪೇಗೌಡ ಪ್ರಶಸ್ತಿಯೊಂದಿಗೆ ನೀಡಲಾಗುವ ಅಶ್ವರೋಢ ಕೆಂಪೇಗೌಡರ ಸ್ಮರಣಿಕೆಗಳ ಕೊರತೆಯಾಯಿತು. ಪಾಲಿಕೆಯ ಅಧಿಕಾರಿಗಳು 200 ಸ್ಮರಣಿಕೆಗಳನ್ನು ತರಿಸಿದ್ದರು. ಆದರೆ, ಪ್ರಶಸ್ತಿ ಪುರಸ್ಕೃತರ ಸಂಖ್ಯೆ ಹೆಚ್ಚಾಗಿದ್ದಧಿಲ್ಲದೆ ಸಮಾರಂಭದಲ್ಲಿಯೇ ಸುಮಾರು ಹೆಸರುಗಳು ಪುರಸ್ಕೃತರ ಪಟ್ಟಿಗೆ ಸೇರಿದ ಹಿನ್ನೆಲೆಯಲ್ಲಿ 30ಕ್ಕೂ ಹೆಚ್ಚು ಪುರಸ್ಕೃತರಿಗೆ ಸ್ಮರಣಿಕೆಯನ್ನು ನಂತರ ತಲುಪಿಸುವುದಾಗಿ ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ವೇದಿಕೆಯಲ್ಲೇ  ಆಯ್ಕೆ
ಪ್ರಶಸ್ತಿ ಪ್ರದಾನ ಸಮಾರಂಭದ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಸುಮಾರು 10ಕ್ಕೂ ಹೆಚ್ಚು ಮಂದಿ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲಾಯಿತು. ಮುಖ್ಯಮಂತ್ರಿಗಳು ಕೆಲವರಿಗೆ ಪ್ರಶಸ್ತಿ ಪ್ರದಾನ ಮಾಡಿ ಹೊರಟ ನಂತರ ವೇದಿಕೆ ಏರಿದ್ದರಿಂದ ಗೊಂದಲ ಉಂಟಾಯಿತು.  ಲಾಭಿ ಮಾಡಿದವರಿಗೆ ಸ್ಥಳದಲ್ಲಿಯೇ ಪ್ರಶಸ್ತಿ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next