ನವದೆಹಲಿ: 2016ರಲ್ಲಿ ಪಾಕ್ ಉಗ್ರರು ಪಂಜಾಬ್‌ನ ಪಠಾಣ್‌ಕೋಟ್ ಮೇಲೆ ದಾಳಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಗಡಿಭಾಗದಲ್ಲಿರುವ 23 ವಾಯುನೆಲೆಗಳಿಗೆ ರಕ್ಷಣೆ ನೀಡಲು ಕೇಂದ್ರ ಸರ್ಕಾರ ವಿದ್ಯುತ್ ಬೇಲಿ ನಿರ್ಮಾಣ ಆರಂಭಿಸಿದೆ.
ಮುಂದಿನ ವರ್ಷ ಫೆಬ್ರವರಿಯಿಂದ ಆಯ್ದ ಜಾಗಗಳಲ್ಲಿ ಪ್ರಾಯೋಗಿಕವಾಗಿ ಕಾರ್ಯಾರಂಭವಾಗಲಿದೆ ಎಂದು ಸಹಾಯಕ ರಕ್ಷಣಾ ಸಚಿವ ಅಜಯ್ ಭಟ್ ಉತ್ತರಿಸಿದ್ದಾರೆ.
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಭಾರತೀಯ ವಾಯುಸೇನೆಯೊಂದಿಗೆ 8 ರಾಜ್ಯಗಳಲ್ಲಿ ವಿದ್ಯುತ್ ಬೇಲಿ (ಇಂಟಿಗ್ರೇಟೆಡ್ ಪೆರಿಮೀಟರ್ ಸೆಕ್ಯುರಿಟಿ ಸಿಸ್ಟಮ್ಸ್) ನಿರ್ಮಾಣಕ್ಕೆ ಒಪ್ಪಂದ ಮಾಡಿಕೊಂಡಿದೆ.
ಇದನ್ನೂ ಓದಿ:ಬಿಎಡ್ ಪ್ರವೇಶಕ್ಕೆ ಅವಧಿ ವಿಸ್ತರಣೆ ಇಲ್ಲ: ಅಶ್ವತ್ಥ ನಾರಾಯಣ
ಈ ಯೋಜನೆಯ ಒಟ್ಟು ವೆಚ್ಚು 1045 ಕೋಟಿ ರೂ. 2019ರಲ್ಲೇ ಭಾರತ-ಪಾಕ್, ಭಾರತ-ಬಾಂಗ್ಲಾ ಸೇರಿದಂತೆ ಒಟ್ಟು 71 ಕಿ.ಮೀ. ಬೇಲಿ ನಿರ್ಮಾಣವಾಗಿದೆ ಎಂದು ಅಜಯ್ ಭಟ್ ತಿಳಿಸಿದ್ದಾರೆ.