Advertisement

ನಾಸಿಕ್ ನಲ್ಲಿ ಆಕ್ಸಿಜನ್  ಸಿಲಿಂಡರ್ ಸೋರಿಕೆ : 22 ಮಂದಿ ಸಾವು

03:27 PM Apr 21, 2021 | Team Udayavani |

ಮಹಾರಾಷ್ಟ್ರ : ಮಹಾರಾಷ್ಟ್ರದ ನಾಸಿಕ್ ನಲ್ಲಿ  ಕೋವಿಡ್  -19 ರೋಗಿಗಳಿಗೆ ಸಿವಿಕ್ ಆಸ್ಪತ್ರೆಯಲ್ಲಿ ಆಮ್ಲಜನಕದ ಪೂರೈಕೆಯಲ್ಲಿ ವ್ಯತ್ಯಾಸದಿಂದಾಗಿ 22 ರೋಗಿಗಳು ಬುಧವಾರ (ಏಪ್ರಿಲ್ 21) ಸಾವನ್ನಪ್ಪಿದ್ದಾರೆ ಎಂಬ ವರದಿಯಾಗಿದೆ.

Advertisement

ಇದನ್ನೂ ಓದಿ : ಬೀದರ್: ಬೆಡ್ ಕೊರತೆ ಫುಟ್ ಪಾತ್ ನಲ್ಲೇ ನರಳಾಡಿದ ರೋಗಿಗಳು

ಜಾಕಿರ್ ಹುಸೇನ್ ಪುರಸಭೆಯ ಆಸ್ಪತ್ರೆಯಲ್ಲಿ ಆಮ್ಲಜನಕದ ಪೂರೈಕೆಯಲ್ಲಿ ವ್ಯತ್ಯಾಸದಿಂದಾಗಿ 22 ಜನರು ಸಾವನ್ನಪ್ಪಿದ್ದಾರೆ. ರೋಗಿಗಳು ವೆಂಟಿಲೇಟರ್‌ ಗಳಲ್ಲಿದ್ದರು ಮತ್ತು ಆಮ್ಲಜನಕದ ಪೂರೈಕೆಯಾಗುತ್ತಿದ್ದರೂ, ಆಮ್ಲಜನಕ ಪೂರೈಕೆ ತೊಟ್ಟಿಯಲ್ಲಿ ಸೋರಿಕೆಯ ಕಾರಣದಿಂದ ಈ ಅವಘಡ ಸಂಭವಿಸಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ಸೂರಜ್ ಮಾಂಧಾರೆ, ಆಮ್ಲಜನಕ ಸಂಗ್ರಹ ಘಟಕದಲ್ಲಿ ಸೋರಿಕೆ ಕಾರಣದಿಂದಾಗಿ ಈ ಘಟನೆ ನಡೆದಿದೆ. ಘಟನೆ ಸಂಭವಿಸಿದ ಕೆಲವೇ ಕ್ಷಣಗಳಲ್ಲಿ ನಗರಸಭೆ ಸಿಲಿಂಡರ್‌ಗಳನ್ನು ಸ್ಥಳಾಂತರಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಿದೆ.

Advertisement

ಇದನ್ನೂ ಓದಿ :  5 ತಿಂಗಳ ಗರ್ಭಿಣಿಯಾಗಿದ್ದರೂ ಲಾಟಿ ಹಿಡಿದು ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ..!

Advertisement

Udayavani is now on Telegram. Click here to join our channel and stay updated with the latest news.

Next