Advertisement
ಮಧ್ಯಾಹ್ನದ ಬಿಸಿಯೂಟದ ವೇಳೆ ಮಕ್ಕಳು ಪುಳಿಯೋಗರೆ-ಮೊಸರು, ಪಾಯಸ, ಉಪ್ಪಿನಕಾಯಿ ಸೇವಿಸಿದ್ದರು. ಊಟ ಆದ 30 ನಿಮಿಷದ ನಂತರ 22 ಮಕ್ಕಳು ಅಸ್ವಸ್ಥರಾಗಿದ್ದು, 10 ಮಕ್ಕಳು ವಾಂತಿ, ಹೊಟ್ಟೆ ನೋವಿನಿಂದ ತೀವ್ರ ಬಳಲಿದ್ದಾರೆ. ಕೂಡಲೆ ಶಾಲೆ ಶಿಕ್ಷಕರು ಎಲ್ಲ ಮಕ್ಕಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೋಸಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
Related Articles
Advertisement
ಮಕ್ಕಳು ಅಪಾಯದಿಂದ ಪಾರುಹೊಸಕೋಟೆ: ಸಮೀಪದ ನಿಂಬೆಕಾಯಿಪುರದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ಸೇವಿಸಿ ಅಸ್ವಸ್ಥರಾಗಿ, ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಒಂದನೇ ತರಗತಿಯ ದೀಕ್ಷಾ, ಇತಿಶ್ರೀ, ಚಂದ್ರಿಕಾ, 2ನೇ ತರಗತಿಯ ದಿವ್ಯಾ, ಕೌಶಿಕ್, 4ನೇ ತರಗತಿಯ ಪ್ರಶಾಂತ್, ಪ್ರಿಯಾ, 5ನೇ ತರಗತಿಯ ಭಾರ್ಗವಿ, ಬೀಬಿಜಾನ್, ನಂದಿತಾ ಆಸ್ಪತ್ರೆಗೆ ದಾಖಲಾಗಿದ್ದಾರೆ. 18 ವಿದ್ಯಾರ್ಥಿಗಳಿಗೆ ಹೊರರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗಿದೆ. ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ಡಾ.ನಾಗರಾಜ್ ಮಾಹಿತಿ ನೀಡಿದರು. ಗ್ರಾಮದ ಮುಖಂಡರು, ಆವಲಹಳ್ಳಿ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿದ್ದರು. ಬಿಸಿಯೂಟ ಸೇವಿಸಿ ಅಸ್ವಸ್ಥರಾಗಿ ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಮಕ್ಕಳು ಚೇತರಿಸಿಕೊಂಡಿದ್ದಾರೆ. ಮಕ್ಕಳ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಮಂಡೂರು ಗ್ರಾ.ಪಂ ಭರಿಸಲಿದೆ.
-ವೇಣು, ಗ್ರಾ.ಪಂ ಅಧ್ಯಕ್ಷ