Advertisement

ದಲಿತರ ಉದ್ಧಾರದಲ್ಲಿ  215.77 ಕೋ.ರೂ. ಅವ್ಯವಹಾರ 

06:25 AM Mar 10, 2018 | Team Udayavani |

ಉಡುಪಿ: ಕರ್ನಾಟಕ ರಾಜ್ಯ ಸರಕಾರದ ಅಡಿಯಲ್ಲಿ ನಡೆಯುತ್ತಿರುವ ಎಸ್‌ಸಿ,ಎಸ್‌ಟಿ, ಹಿಂದುಳಿದ ವರ್ಗ, ಮಹಿಳಾ ಹಾಸ್ಟೆಲ್‌ಗ‌ಳು ಮತ್ತು ವಸತಿಶಾಲೆಗಳ ಕುರಿತು ತಮ್ಮ ಪಕ್ಷ ನಡೆಸಿದ ಬಹುದೊಡ್ಡ ಸಮೀಕ್ಷೆಯಲ್ಲಿ  ದಲಿತರ ಹೆಸರಿನಲ್ಲಿ ಕಾಂಗ್ರೆಸ್‌ ಸರಕಾರ 215.77 ಕೋ.ರೂ. ಅವ್ಯವಹಾರ ನಡೆಸಿರುವುದು ಬೆಳಕಿಗೆ ಬಂದಿದೆ ಎಂದು ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ. ಉದಯಕುಮಾರ ಶೆಟ್ಟಿ ಮಾ. 9ರಂದು ಜಿಲ್ಲಾ  ಬಿಜೆಪಿ ಕಚೇರಿಯಲ್ಲಿ  ಅಧಿಕೃತ ಅಂಕಿ,ಅಂಶಗಳುಳ್ಳ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು.

Advertisement

ರಾಜ್ಯದ 1080 ಎಸ್‌ಸಿ, ಎಸ್‌ಟಿ ಹಾಗೂ 1510 ಓಬಿಸಿ ಹಾಸ್ಟೆಲ್‌ಗ‌ಳನ್ನು ಖುದ್ದಾಗಿ ಸಂದರ್ಶಿಸಿ ಸ್ಥಿತಿಗತಿಗಳ ಅವಲೋಕನೆ ನಡೆಸಿ ಚಿತ್ರ ಸಹಿತ ಸಮಗ್ರ ವರದಿಯನ್ನು ನೀಡಿದೆ. ವರದಿಯ ಪ್ರಕಾರ 377  ಹಾಸ್ಟೆಲ್‌ಗ‌ಳಲ್ಲಿ 
ವಾರ್ಡನ್‌ಗಳಿಲ್ಲ. 381 ಹಾಸ್ಟೆಲ್‌ಗ‌ಳಲ್ಲಿ ಶೌಚಾಲಯ ಸಮರ್ಪಕವಾಗಿಲ್ಲ. 565 ಹಾಸ್ಟೆಲ್‌ಗ‌ಳು ವಾಸಯೋಗ್ಯವಾಗಿಲ್ಲ. 331 ಹಾಸ್ಟೆಲ್‌ಗ‌ಳಲ್ಲಿ ಉಗ್ರಾಣಗಳಿಲ್ಲ. 336 ಹಾಸ್ಟೆಲ್‌ಗ‌ಳಲ್ಲಿ ಸ್ನಾನ ಗೃಹಗಳು ಸರಿಯಾಗಿಲ್ಲ.

1106 ಹಾಸ್ಟೆಲ್‌ಗಳಲ್ಲಿ ಸ್ನಾನಕ್ಕೆ ಬಿಸಿನೀರಿಲ್ಲ. 498 ಹಾಸ್ಟೆಲ್‌ಗ‌ಳಲ್ಲಿ ಕುಡಿಯುವ ನೀರಿಲ್ಲ. 666 ಹಾಸ್ಟೆಲ್‌ಗ‌ಳಲ್ಲಿ ಸಾಮರ್ಥಯಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ವಾಸವಾಗಿದ್ದಾರೆ. 1183 ಹಾಸ್ಟೆಲ್‌ಗ‌ಳಲ್ಲಿ  ಮಲಗಲು ಬೇಕಾದ ಕನಿಷ್ಠ ಮಂಚ, ದಿಂಬು, ಹೊದಿಕೆಗಳೇ ಇಲ್ಲವೆಂದು ಅವರು ಅಂಕಿ ಅಂಶಗಳನ್ನು ಮುದಿಟ್ಟರು.

32 ಹಾಸ್ಟೆಲ್‌ಗ‌ಳಲ್ಲಿ ಉಪಹಾರವೇ ಇಲ್ಲ
ಎಸ್‌ಸಿ-ಎಸ್‌ಟಿಯ 32 ಹಾಸ್ಟೆಲ್‌ಗ‌ಳಲ್ಲಿ ಉಪಾಹಾರವಿಲ್ಲ. 352ರಲ್ಲಿ ಮಧ್ಯಾಹ್ನದ ಊಟವಿಲ್ಲ. 51ರಲ್ಲಿ  ರಾತ್ರಿಯ ಊಟವಿಲ್ಲ.ಓಬಿಸಿಯ 169ರಲ್ಲಿ ಉಪಾಹಾರವಿಲ್ಲ.568ರಲ್ಲಿ ಮಧ್ಯಾಹ್ನದ ಊಟವಿಲ್ಲ.146ರಲ್ಲಿ  ರಾತ್ರಿ ಊಟವಿಲ್ಲ. ಇದರೊಂದಿಗೆ ಮತ್ತೂಂದು ಅಚ್ಚರಿಯ ವಿಷಯವೆಂದರೆ ಶೇ. 26 ರಷ್ಟು ಎಸ್‌ ಸಿ-ಎಸ್‌ಟಿ ಹಾಗೂ ಶೇ. 38ರಷ್ಟು ಓಬಿಸಿ ಹಾಸ್ಟೆಲ್‌ಗ‌ಳು ಬಾಡಿಗೆ ಕಟ್ಟಡದಲ್ಲಿವೆ ಎಂದು ತಿಳಿದು ಸಮೀಕ್ಷಾ ತಂಡ ದಂಗಾಗಿದೆ ಎಂದರು.

ಹಾಸ್ಟೆಲ್‌ಗ‌ಳಿಂದ 
ಹಣದ ಪಾವತಿಯಾಗುತ್ತಿಲ್ಲ

ಶೇ. 15ರಷ್ಟು ಎಸ್‌ ಸಿ-ಎಸ್‌ ಟಿ ಮತ್ತು ಶೇ. 24ರಷ್ಟು ಓಬಿಸಿ ಹಾಸ್ಟೆಲ್‌ಗ‌ಳಲ್ಲಿ ಹಣದ ಪಾವತಿಯೇ ಆಗುತ್ತಿಲ್ಲ. ಒಟ್ಟಾರೆ 49 ಎಸ್‌ ಸಿ-ಎಸ್‌ ಟಿ ಮತ್ತು 93ಓಬಿಸಿ ಹಾಸ್ಟೆಲ್‌ಗ‌ಳಲ್ಲಿ  ಭ್ರಷ್ಟಾಚಾರ ತಾಂಡವಾಡುತ್ತಿದೆ. ರಾಜ್ಯದ 90 ಶೇ. ಹಾಸ್ಟೆಲ್‌ಗ‌ಳಲ್ಲಿ  ಕ್ರೀಡಾ ತರಬೇತುದಾರರೇ ಇಲ್ಲವೆಂದು ಜಿಲ್ಲಾಧ್ಯಕ್ಷ ಮಟ್ಟಾರ್‌ ರತ್ನಾಕರ ಹೆಗ್ಡೆ ಮಾಹಿತಿ ನೀಡಿದರು.

Advertisement

ವಿದ್ಯಾರ್ಥಿನಿ ಹಾಸ್ಟೆಲ್‌ಗ‌ಳ 
ಸ್ಥಿತಿ ಆತಂಕಕಾರಿ

ರಾಜ್ಯದ 740 ವಿದ್ಯಾರ್ಥಿನಿಲಯಗಳಿಗೆ ಭೇಟಿ ನೀಡಿದ ಬಿಜೆಪಿ ತಂಡ ಅಲ್ಲಿನ ಸ್ಥಿತಿಗತಿಗಳನ್ನು ಕಂಡು ದಂಗಾಗಿದೆ. 214 ಹಾಸ್ಟೆಲ್‌ಗ‌ಳಲ್ಲಿ ಖಾಯಂ ವಾರ್ಡನ್‌ಗಳಿಲ್ಲ. 352 ಹಾಸ್ಟೆಲ್‌ಗ‌ಳಲ್ಲಿ ಅಗತ್ಯ ಶೌಚಾಲಯಗಳಿಲ್ಲ. 660 ಹಾಸ್ಟೆಲ್‌ಗ‌ಳು ವಾಸಯೋಗ್ಯವಾಗಿಲ್ಲ. 86ರಲ್ಲಿ ಉಗ್ರಾಣಗಳಿಲ್ಲ. 434ರಲ್ಲಿ ಗ್ರಂಥಾಲಯಗಳೇ ಇಲ್ಲ. 564ರಲ್ಲಿ ಮೇಜು-ಕುರ್ಚಿಗಳಿಲ್ಲ. 666ರಲ್ಲಿ ಆಹಾರದ ಮಟ್ಟ ತೀರ ಕೆಳಮಟ್ಟದಲ್ಲಿದೆ. 430ರಲ್ಲಿ ಕಂಪ್ಯೂಟರ್‌ ಸೌಲಭ್ಯವಿಲ್ಲ. 421ರಲ್ಲಿ ಟಿವಿ ಇಲ್ಲ. 318ರಲ್ಲಿ  ಕ್ರೀಡಾ ಸೌಲಭ್ಯವೂ ಇಲ್ಲ.585ರಲ್ಲಿ ಸಿಸಿ ಟಿವಿ ಕೆಮರಾಗಳೂ ಇಲ್ಲವೆಂದು ಅವರು ಮಾಹಿತಿ ನೀಡಿದರು.

ಉಡುಪಿ ಜಿ.ಪಂ. ಅಧ್ಯಕ್ಷ ದಿನಕರ ಬಾಬು ಹಾಗೂ ಬಿಜೆಪಿಯ ಮುಖಂಡರುಗಳಾದ ಸಂಧ್ಯಾ ರಮೇಶ್‌, ಹೇಮಂತ್‌, ದಿನೇಶ್‌ ನಾಯ್ಕ, ಪ್ರಭಾಕರ ಪೂಜಾರಿ, ರವಿ ಅಮಿನ್‌ ಮತ್ತು ಕಟಪಾಡಿ ಶಂಕರ್‌ ಪೂಜಾರಿ ಪುಸ್ತಕ ಬಿಡುಗಡೆ ಸಮಾರಂಭದಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next